»   »  ರಸ್ತೆ ಅಪಘಾತ:ಗಾಯಕಿ ಎಸ್. ಜಾನಕಿ ಪಾರು

ರಸ್ತೆ ಅಪಘಾತ:ಗಾಯಕಿ ಎಸ್. ಜಾನಕಿ ಪಾರು

Subscribe to Filmibeat Kannada
Singer S Janaki
ಚೆನ್ನೈ, ಜು.19: ಹಿನ್ನೆಲೆ ಗಾಯಕಿ ಎಸ್. ಜಾನಕಿ ಶನಿವಾರ ಈರೋಡ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರು ದ್ವಿಚಕ್ರವಾಹನ ಸವಾರನೊಬ್ಬನಿಗೆ ಡಿಕ್ಕಿ ಹೊಡೆದು ಕಾಲುವೆಯಲ್ಲಿ ಬಿದ್ದಿದೆ.

ಜಾನಕಿಯವರು ತಮ್ಮ ಪುತ್ರನ ಜತೆ ಪೊಲ್ಲಾಚ್ಚಿಗೆ ತೆರಳುತ್ತಿದ್ದ ಸಮಯದಲ್ಲಿ ಚೆಲ್ಲಪ್ಪನಪಾಳ್ಯಂ ಬಳಿ ಈ ಅಪಘಾತ ನಡೆದಿದೆ. ದ್ವಿಚಕ್ರ ವಾಹನ ಚಾಲಕನಿಗೆ
ಡಿಕ್ಕಿ ಹೊಡೆದ ಕಾರು ನಂತರ ನಿಯಂತ್ರಣ ತಪ್ಪಿ ಸೈಕಲ್ ಸವಾರನಿಗೆ ಗುದ್ದಿದೆ. ನಂತರ ರಸ್ತೆ ಬದಿಯ ಕಾಲುವೆಗೆ ಬಿದ್ದು ಪಲ್ಟಿ ಹೊಡೆದಿದೆ. ದ್ವಿಚಕ್ರ ವಾಹನ ಸವಾರ
ಮೃತಪಟ್ಟಿದ್ದಾನೆ.

(ಏಜೆನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada