twitter
    For Quick Alerts
    ALLOW NOTIFICATIONS  
    For Daily Alerts

    ಲಾಕಿಂಗ್ ಸಿಸ್ಟಂ ಮೂಲಕ ಜೋಗಯ್ಯ ಧ್ವನಿಸುರುಳಿ

    By Mahesh
    |

    ಫೆಬ್ರವರಿ 19ಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷಗಳಾಗುತ್ತವೆ. ಈ ಸವಿ ನೆನಪಿಗಾಗಿ ಪ್ರೇಮ್ ನಿರ್ದೇಶನದ ಶಿವಣ್ಣ ಮುಖ್ಯ ಭೂಮಿಕೆಯಲ್ಲಿರುವ ಬಹು ನಿರೀಕ್ಷಿತ ಜೋಗಯ್ಯ ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. ಲಾಕಿಂಗ್ ಸಿಸ್ಟಂ ಮೂಲಕ ಧ್ವನಿಸುರುಳಿ ಬಿಡುಗಡೆ ಮಾಡಲು ಅಶ್ವಿನಿ ಮೀಡಿಯಾ ನೆಟ್ವರ್ಕ್ ನಿರ್ಧರಿಸಿದೆ.

    ಫೆ19 ಕ್ಕೆ ಅರಮನೆ ಮೈದಾನದಲ್ಲಿ ಬಿಡುಗಡೆಯಾಗಲಿರುವ ಜೋಗಯ್ಯ ಆಡಿಯೋ ಸಿಡಿಯು ವಿಭಿನ್ನವಾಗಿರುತ್ತದೆ. ಪೈರಸಿ ತಡೆಗಾಗಿ ಅಳವಡಿಸಲಾಗುವ ಲಾಕಿಂಗ್ ಸಿಸ್ಟಂಗಾಗಿ ಸಾಕಷ್ಟು ಹಣ ವ್ಯಯವಾಗಲಿದೆ. ಆದರೆ ಆಡಿಯೋ ಬೆಲೆ ಜಾಸ್ತಿ ನಿಗದಿಪಡಿಸುವುದಿಲ್ಲ. ಎಲ್ಲಡೆ ಪೈರಸಿ ಹಾವಳಿಗೆ ಕನ್ನಡ ಚಿತ್ರರಂಗ ಈಗಾಗಲೇ ತತ್ತರಿಸಿ ಹೋಗಿದೆ. ಮೊದಲ ಬಾರಿಗೆ ಕನ್ನಡದಲ್ಲಿ ಈ ಲಾಕಿಂಗ್ ಸಿಸ್ಟಂ ಪೈರಸಿ ತಡೆಯಲು ಮುಂದಾಗಿದ್ದೇವೆ ಎಂದು ಅಶ್ವಿನಿ ಮಿಡಿಯಾ ಮುಖ್ಯಸ್ಥ ರಾಮ್ ಪ್ರಸಾದ್ ಹೇಳಿದ್ದಾರೆ.

    ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಕ್ಯಾಸೆಟ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಶಿವಣ್ಣ ಚಿತ್ರರಂಗಕ್ಕೆ ಕಾಲಿಟ್ಟ 25 ವರ್ಷ ಪೂರೈಸಿರುವ ಸಂಭ್ರಮವನ್ನು ಜೋಗಯ್ಯ ಚಿತ್ರತಂಡ ಭರ್ಜರಿಯಾಗಿ ಆಚರಿಸುವ ಯೋಜನೆ ಹಾಕಿ ಕೊಂಡಿದೆ. ಇದರಲ್ಲಿ ಭಾಗವಹಿಸಲು ಇಚ್ಛಿಸುವ ಅಭಿಮಾನಿಗಳಿಗೆ ಚಿತ್ರದ ಆಡಿಯೋ ಸಿಡಿ ಜೊತೆ ಉಚಿತ ಪಾಸ್ ಕೂಡ ವ್ಯವಸ್ಥೆ ಮಾಡಲಾಗಿದೆ. [ಜೋಗಯ್ಯ]

    English summary
    Ashwini Recording Company(media network) has up come with a new idea to curb audio piracy. They are all set to release Jogayya Audio with lock system. Also Silver Jubilee year function of Shivarajkumar film career at career will be celebrated at Palace Ground, Bengaluru on Feb.19 said Ram Prasad
    Thursday, January 20, 2011, 17:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X