For Quick Alerts
ALLOW NOTIFICATIONS  
For Daily Alerts

ಉಪೇಂದ್ರ 'ಸೂಪರ್' ಧ್ವನಿಸುರುಳಿ ವಿಮರ್ಶೆ

By * ಬಾಲರಾಜ್ ತಂತ್ರಿ
|

ಉಪೇಂದ್ರ ನಿರ್ದೇಶನ ಮತ್ತು ಅಭಿನಯದ ಬಹು ನಿರೀಕ್ಷಿತ 'ಸೂಪರ್' ಚಿತ್ರದ ಕ್ಯಾಸೆಟ್ ಶುಕ್ರವಾರದಿಂದ (ನ.19) ಮಾರುಕಟ್ಟೆಯಲ್ಲಿ ಲಭ್ಯವಾಗಿದೆ. ಉಪೇಂದ್ರ ಏನೇ ಮಾಡಿದರೂ ಡಿಫರೆಂಟ್ ಆಗಿರುತ್ತೆ ಎನ್ನುವುದಕ್ಕೆ ಚಿತ್ರದ ಆಲ್ಬಮ್ ಮತ್ತೊಂದು ನಿದರ್ಶನ. ಎಲ್ಲಾ ಹಾಡಿನ ಮೊದಲು ಎಫ್ಎಂ ಜಾಕಿಗಳು ಉಪ್ಪಿ ಮತ್ತು ಚಿತ್ರದ ಬಗ್ಗೆ ಮಾತನಾಡುತ್ತಾ ಹಾಡು ಶುರುವಾಗುವುದು ಒಂದು ವಿಶೇಷವಾದರೆ ಮೂರು ಹಾಡಿಗೆ ಉಪ್ಪಿ ಸಾಹಿತ್ಯ ನೀಡಿರುವುದು ಇನ್ನೊಂದು ವಿಶೇಷ.

ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ. ಒಂದು ಹಾಡು ತಾನೇ ಅಲ್ಲದೆ ಕೋರಸ್ ನಲ್ಲಿ ಕೂಡ ಒಂದು ಹಾಡಿಗೆ ಉಪ್ಪಿ ಧ್ವನಿಗೂಡಿಸಿದ್ದಾರೆ. ಹರಿಕೃಷ್ಣ ಹಾಗೂ ಕನ್ನಡದ ಶಮಿತಾ ಮಲ್ನಾಡ್ ಗೆ ಮಾತ್ರ ಚಿತ್ರದಲ್ಲಿ ಹಾಡಲು ಅವಕಾಶ ನೀಡಿದ್ದಾರೆ. ಮೆಲೋಡಿಯಸ್ ಟ್ಯೂನ್ ನೀಡುವ ಗೋಜಿಗೆ ಸಂಗೀತ ನಿರ್ದೇಶಕರು ಹೋಗಿಲ್ಲ. ಚಿತ್ರದ ಕೆಲ ಹಾಡಿಗೆ ಉಪ್ಪಿ ಸಾಹಿತ್ಯ ನೀಡಿರುವುದರಿಂದ ಅಭಿಮಾನಿಗಳು ಸೂಪರ್ ಚಿತ್ರದ ಹಾಡನ್ನು ಐ ಲೈಕ್ ಇಟ್ ಮ್ಯಾನ್... ಐ ಲೈಕ್ ಇಟ್ ಎನ್ನುವುದರಲ್ಲಿ ಸಂಶಯವಿಲ್ಲ.

1. ಕಾಯಿ...ಕಾಯಿ...ಉಪ್ಪಿನಕಾಯಿ ( ಕುನಾಲ್ ಗಾಂಜಾವಾಲ)

'ಮಿಸ್' ಪದ ಸರಿಯಾಗಿ 'ಯೂಸ್' ಆಗದಿದ್ದಲ್ಲಿ 'ಮಿಸ್ ಯೂಸ್' ಆಗುತ್ತೆ ಎನ್ನುವುದೇ ಹಾಡಿನ ಸಾರಾಂಶ. ಐಪಿಎಲ್, ಬೆಟ್ಟಿಂಗ್ ಬಗ್ಗೆ ಕೂಡ ಉಪ್ಪಿ ನಾವು ಒಪ್ಪಿಕೊಳ್ಳುವ ಹಾಗೆ ಸಾಹಿತ್ಯ ನೀಡಿದ್ದಾರೆ. ಕನ್ನಡ ಪದದ ಜೊತೆಗೆ ಇಂಗ್ಲಿಷ್ ಪದಗಳು ಸಾಕಷ್ಟು ಇರುವುದರಿಂದ ಕುನಾಲ್ ಶಬ್ದ ಉಚ್ಚಾರದ ಬಗ್ಗೆ ಹೆಚ್ಚಿನ ಕಾಮೆಂಟ್ ಅನಗತ್ಯ. ಹೆಚ್ಚುಕಮ್ಮಿ ಫಾಸ್ಟ್ ಬೀಟ್ ನಲ್ಲಿರುವ ಈ ಹಾಡಿಗೆ ಕುನಾಲ್ ಸ್ವರ 'ಮಿಸ್ ಮ್ಯಾಚ್' ಅನಿಸುತ್ತೆ.

2. ಕಮಾನ್, ಕಮಾನ್ ಇಲ್ಲಿ ಎಲ್ಲಾ ಆಕ್ಟರ್ (ರಾಹುಲ್ ನಂಬಿಯಾರ್)

ಕೇಳು ನನ್ನ ಲವ್ ಸ್ಟೋರಿ, ಪ್ರೀತಿಗೆ ಕಟ್ಟ ಬೇಡ ನನ್ನ ಗೋರಿ ಎಂದು ಪ್ರೀತಿ ಪ್ರೇಮದ ಬಗ್ಗೆ ತನ್ನ ಪ್ರೀತಿಯನ್ನು ತನ್ನದೇ ಆದ ಶೈಲಿಯಲ್ಲಿ ಉಪ್ಪಿ ಇಲ್ಲಿ ಹೇಳಿದ್ದಾರೆ. ಫಾಸ್ಟ್ ಮತ್ತು ಸ್ಲೋ ಬೀಟ್ ನಲ್ಲಿ ಹಾಡಿದೆ.

3. ಏರಿ ಮೇಲೆ ಏರಿ ಮೇಲೆ ಕೆಳಗೆ ಹಾರಿ (ಎಸ್ ಪಿ ಬಾಲಸುಬ್ರಮಣ್ಯಂ, ಶಮಿತಾ ಮಲ್ನಾಡ್, ಉಪೇಂದ್ರ)

ಹಳೆಯ ಜನಪ್ರಿಯ ಹಾಡಿನ ಸಾಹಿತ್ಯ ಇಲ್ಲಿ ಮತ್ತೆ ಬಳಕೆಯಾಗಿಲ್ಲ. ಜಾನಪದ ಶೈಲಿಯಲ್ಲಿರುವ ಹಾಡು. ಹಾಡಿನ ಮಧ್ಯೆ ಉಪೇಂದ್ರ ಅವರ ಟಿಪಿಕಲ್ ಇಂಗ್ಲಿಷ್ ಡೈಲಾಗ್ ಗಳಿವೆ. ಯಾವುದೇ ಟೈಪ್ ಹಾಡು ನೀಡಿದರೂ ಹಾಡಬಲ್ಲೆ ಎಂದು ಲೆಜೆಂಡ್ ಎಸ್ಪಿಬಿ ಮತ್ತೆ ತೋರಿಸಿಕೊಟ್ಟಿದ್ದಾರೆ. ಪಡ್ಡೆಗಳ ಬಾಯಲ್ಲಿ ಈ ಹಾಡು ಗುನುಗೋಕೆ ಇನ್ನು ಹೆಚ್ಚು ಹೊತ್ತು ಬೇಕಾಗಿಲ್ಲ.

4. ಸಿಕ್ಕಾಪಟ್ಟೆ ಇಷ್ಟಪಟ್ಟೆ, ತಲೆಗೆ ಹುಳ ಬಿಟ್ಕೊಂಡೆ, ನಾನು ಸೂಪರೋ ಡೂಪರ್ ರಂಗ (ಉಪೇಂದ್ರ)

ಒಂಟಿ ಬಾಳಿಗೆ ಉತ್ತರ ಹೇಳು, ನನ್ನ ವಯಸ್ಸು ಎಕ್ಕುಟ್ಟಿ ಹೋಯಿತು. ಭಗ್ನಪ್ರೇಮಿ ಯೊಬ್ಬ ತಾನು ಪ್ರೀತಿಸಿದ ಹುಡುಗಿ ಕೈ ಕೊಟ್ಟರೆ ಯಾವ ರೀತಿಯಲ್ಲಿ ಹಾಡನ್ನು ಹಾಡಬಹುದು ಎನ್ನುವುದಕ್ಕೆ ಉಪ್ಪಿ ಸಾಹಿತ್ಯ ಮತ್ತು ಸ್ವರದಲ್ಲಿರುವ ಈ ಹಾಡನ್ನು ಕೇಳಿ. ಫಾಸ್ಟ್ ಟ್ರ್ಯಾಕ್ ನಲ್ಲಿರುವ ಹಾಡು "ಸಿಕ್ಕಾಪಟ್ಟೆ ಹಿಟ್ ಆಗಿಲ್ಲಾಂದ್ರೆ" ಕೇಳಿ.

5. ಲುಕ್ ಅಟ್ ದಿ ಸ್ಟೈಲ್ , ಉಪ್ಪೇ ಬೇಡ ನೋಡು, ಉಪ್ಪೇ ಸೂಪರ್ ನೋಡು (ನವೀನ್ ಮಾಧವ್)

ವಿಚಿತ್ರ ಸಾಹಿತ್ಯ ಶೈಲಿಯಲ್ಲಿರುವ ಹಾಡು. ಸಂಗೀತ ನಿರ್ದೇಶಕರು ಮತ್ತೆ ಫಾಸ್ಟ್ ಟ್ರ್ಯಾಕ್‌ಗೆ ಮೊರೆ ಹೋಗಿದ್ದಾರೆ. ಹಾಡುಗಾರರ ಕನ್ನಡ ಸ್ವರ ಉಚ್ಚಾರದ ಬಗ್ಗೆ ಈ ಆಲ್ಬಮ್ ನಲ್ಲಿ ಹೆಚ್ಚಿನ ಹೇಳಿಕೆ ಅನವಶ್ಯಕ.

ಮೆಲೋಡಿಯಸ್ ಹಾಡು ಬಯಸುವವರಿಗೆ ಈ ಚಿತ್ರದ ಹಾಡು "Not a correct choice". ಆದರೆ ಇಂದಿನ ಫಾಸ್ಟ್ ಬದುಕಿನಲ್ಲಿ ಜೀವನ, ಪ್ರೀತಿ, ಮೋಸ ಮುಂತಾದುದರ ಬಗ್ಗೆ ಕೇಳಬೇಕೆಂದರೆ ಈ ಆಡಿಯೋ ಒಂದು ಸಲ ಕೇಳಿ. ಒಟ್ಟಿನಲ್ಲಿ ಸಾಹಿತ್ಯ ಆಲಿಸಿದರೆ ಪ್ರೇಕ್ಷಕರು ತಲೆಗೆ ಹುಳ ಬಿಟ್ಟುಕೊಳ್ಳುವುದು ಖಂಡಿತ ಎನ್ನುವ ಹಾಗಿದೆ. ಇನ್ನು ಚಿತ್ರ ಯಾವ ಪಾಟಿ ಇರುತ್ತೋ ಆ "ಆನೆಗುಡ್ಡ ಮಹಾಗಣಪತಿ"ಯೇ ಬಲ್ಲ.

ತನ್ನದೇ ವಿಶಿಷ್ಟ ವರ್ಚಸ್ಸಿನ ಉಪೇಂದ್ರ ಹಾಗೂ ಸ್ಯಾಂಡಲ್ ವುಡ್ ನ ಇದುವರೆಗಿನ ಬಹುಕೋಟಿ ಚಿತ್ರವಾಗಿರುವ ಇದು ಗಲ್ಲಾಪೆಟ್ಟಿಗೆಯಲ್ಲೂ "ಸೂಪರ್" ಗಳಿಕೆ ಸಾಧಿಸಲಿ ಎನ್ನುವುದು ನಮ್ಮ ಆಶಯ. All the best to 'Super' team.

English summary
Upendra"s Super (Symbol) audio cd"s are out. On a whole, at least three songs in the album are utterly likable and the other two are not bad too. Read the music review of Super. Upendra pens some refreshing lyrics for the songs while V Harikrishna matches his audacity.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more