»   »  ಕೃಪಾಕರ ಎಂಬ ಸಂಗೀತ ನಿರ್ದೇಶಕರ ವೃತ್ತಾಂತ

ಕೃಪಾಕರ ಎಂಬ ಸಂಗೀತ ನಿರ್ದೇಶಕರ ವೃತ್ತಾಂತ

Subscribe to Filmibeat Kannada
Music director Krupakar
ಸಿನಿಮಾ ಮಾಯೆ. ಹೌದು. ವರ್ಷಗಳಿಂದ ಚಪ್ಪಲಿ ಸವೆಸಿದ ಅನೇಕ ಜೀವಗಳು ಇಲ್ಲಿವೆ. ಆ ಪೈಕಿ ಕೃಪಾಕರ್ ಅನ್ನುವ ಜೀವವೂ ಒಂದು. ಕೃಪಾಕರ್ ಸಂಗೀತ ನಿರ್ದೇಶಕ. ಒಂಬತ್ತು ವರ್ಷದಿಂದ ಸಿನಿಮಾ ಉಸಿರಾಡುತ್ತಿದ್ದಾರೆ. ಮೂವತ್ತೆಂಟು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ ಲೆಕ್ಕವನ್ನೂ ಅವರು ಕೊಡುತ್ತಾರೆ. ಆದರೆ, ಅವರು ಸುದ್ದಿಯೇ ಆಗಲಿಲ್ಲವಲ್ಲಾ? ದೊಡ್ಡ ಬ್ರೇಕ್ ಸಿಗದಿದ್ರೆ ಎಲ್ಲರ ಪರಿಸ್ಥಿತಿಯೂ ಹೀಗೇ ಎಂದು ಅವರು ನಗುತ್ತಾರೆ.

ಕೃಪಾಕರ್ ತವರು ತುಮಕೂರು. ಸರಿಯಾಗಿ ಓದಿದ್ದರೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ಆಗಬೇಕಿತ್ತು. ದಾವಣಗೆರೆಯಲ್ಲಿ ಆರನೇ ಸೆಮಿಸ್ಟರ್‌ನಲ್ಲಿದ್ದಾಗ ಗಂಟೂಮೂಟೆ ಕಟ್ಟಿ, ಓದಿಗೆ ಎಳ್ಳು ನೀರು ಬಿಟ್ಟರು. ಮನೆಯಲ್ಲಿ ಸಂಗೀತದ ವಾತಾವರಣ ಇಲ್ಲದಿದ್ದರೂ ಮೂರನೇ ಕ್ಲಾಸಿನ ಹೊತ್ತಿಗೆ ಹಾರ್ಮೋನಿಯಂ ಹಾಗೂ ರಿದಂ ಪ್ಯಾಡ್ ಜೊತೆ ಆಟವಾಡಿದ ಹುಡುಗ ಈತ. ಅದಕ್ಕೇ ಸಂಗೀತ ಸಿನಿಮಾ ಸಂಗೀತ ಯಾಕಾಗಬಾರದು ಅಂತ ಮನಸಿನ ಹಲ್ಲಿ ಲೊಚಗುಟ್ಟಿದೆ. ಸೀದಾ ವಿಜಯಾ ಇನ್‌ಸ್ಟಿಟ್ಯೂಟ್ ಸೇರಿ ಸಿನಿಮಾ ಸಂಗೀತದ ವರಸೆಗಳನ್ನು ಕಲಿತಿದ್ದಾರೆ. ಗೆಳತಿ ಅನ್ನುವ ಆಲ್ಬಂ ರಚಿಸಿದ್ದು ಮೊದಲ ಯತ್ನ.

ಯಾರಿಗೆ ಬೇಡ ದುಡ್ಡು, ಓ ಗುಲಾಬಿಯೇ, ಜಾಕ್‌ಪಾಟ್, ಜೋಡಿ ನಂ.1 ಹೀಗೆ ಕೃಪಾಕರ್ ಸಂಗೀತ ನಿರ್ದೇಶನದ ಚಿತ್ರಗಳ ಪಟ್ಟಿ ಬೆಳೆಯುತ್ತದೆ. ಓ ಗುಲಾಬಿಯೇ ಸಿನಿಮಾದ ಹದಿನೆಂಟಾಯ್ತು ವರ್ಷ ಇದೇ ಮೊದಲ ಹರ್ಷ ಎಂಬ ಹಾಡು ಈಗಲೂ ಟಿವಿ ವಾಹಿನಿಗಳಲ್ಲಿ ಆಗೀಗ ಪ್ರಸಾರವಾಗುವುದುಂಟು. ಕೃಪಾಕರ್ ಕೆಲಸ ಮೆಚ್ಚಿ ರಾಜೇಂದ್ರ ಸಿಂಗ್ ಬಾಬು ತಿಪ್ಪಾರಳ್ಳಿ ತರ್ಲೆಗಳು ಚಿತ್ರದಲ್ಲಿ ಅವಕಾಶ ಕೊಟ್ಟಿದ್ದಾರೆ. ಓಂ ಪ್ರಕಾಶ್‌ರಾವ್ ನಿರ್ದೇಶನದ ಈಶ್ವರ ಚಿತ್ರಕ್ಕೂ ಇವರದ್ದೇ ಸಂಗೀತ. ಒಂದೇ ಒಂದು ಬ್ರೇಕ್ ಸಿಗಲಿ. ಆಮೇಲೆ ಶುಕ್ರದೆಸೆ ನನ್ನದಾಗುವುದೋ ಏನೋ ಅನ್ನುವ ಕೃಪಾಕರ್ ಚಿತ್ರವೊಂದಕ್ಕೆ ನಾಯಕರಾಗುವ ಹಾದಿಯಲ್ಲೂ ಇದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ

ರಘು ದೀಕ್ಷಿತ್ ಸಂಭಾವನೆ ರು.1 ಕೋಟಿಯಂತೆ!
ಸಂಗೀತ ಸಿನಿಮಾಗೆ ಕಿಟಕಿ ಇದ್ದಂತೆ: ಸುರೇಶ್ ಕೃಷ್ಣ
ಕವಿ ಸುಬ್ರಾಯ ಚೊಕ್ಕಾಡಿಯವರಿಗೆ ಸಿನಿ ಸಮಯ!
ಕನ್ನಡಕ್ಕೆ ಬಂದ ಹೊಸ ಕೋಗಿಲೆ ಶ್ರೇಯಾ
ಮೈಸೂರಿನ ಗಾಯಕ ವಿಜಯ್ ಪ್ರಕಾಶ್ ಜೈ ಹೊ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada