»   » ರಕ್ಷಣಾ ವೇದಿಕೆಯಿಂದ ಕೆಸೆಟ್ ಕಂಪೆನಿ

ರಕ್ಷಣಾ ವೇದಿಕೆಯಿಂದ ಕೆಸೆಟ್ ಕಂಪೆನಿ

Posted By:
Subscribe to Filmibeat Kannada
T A Narayana Gowda
ಕರ್ನಾಟಕ ರಕ್ಷಣಾ ವೇದಿಕೆ ಹೊಸ ವರ್ಷದಲ್ಲಿ ನೆನಪಿಟ್ಟುಕೊಳ್ಳುವಂಥ ಕೆಲಸ ಮಾಡಲಿದೆ. ಕನ್ನಡದ ಹಾಡುಗಳನ್ನು, ಕನ್ನಡತನವನ್ನು, ಕನ್ನಡ ಸಿನಿಮಾಗಳನ್ನು ಬೆಂಬಲಿಸುವ ಉದ್ದೇಶದಿಂದ ಕೆಸೆಟ್ ಕಂಪೆನಿಯನ್ನು ಪ್ರಾರಂಭಿಸಲಿದೆ. ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ಈ ಸಂಗತಿಯನ್ನು 'ಸೀನ" ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಅರುಹಿದರು.

ಶ್ರೀಮಾತಾ ಹೆಸರಿನಲ್ಲಿ ಕೆಸೆಟ್ ಕಂಪೆನಿ ತಲೆ ಎತ್ತಲಿದೆ. ಈ ಹಿಂದೆ ಇದೇ ಹೆಸರಿನಲ್ಲೇ ವೇದಿಕೆಯು ಕ್ಯಾಸೆಟ್ ಕಂಪೆನಿ ಸ್ಥಾಪಿಸಿತ್ತು. ಆಗ ಜಾನಪದ ಗೀತೆಗಳ ಒಂದಿಷ್ಟು ಧ್ವನಿಸುರುಳಿಗಳನ್ನು ಹೊರತಂದು ಉಸಿರುಗಟ್ಟಿತ್ತು. ಈಗ ಕೆಸೆಟ್ ಕಂಪೆನಿಗಳು ವ್ಯವಹಾರದಲ್ಲಿ ಮುಂದುವರಿಯುತ್ತಿವೆ. ಇದನ್ನು ಗಮನಿಸಿಯೇ ವೇದಿಕೆ ಕೂಡ ಮುಂದಡಿ ಇಟ್ಟಿರುವುದು.

ಪರಭಾಷಾ ಗಾಯಕರು ಹಾಡಿರುವ ಕನ್ನಡದ ಸಿನಿಮಾ ಗೀತೆಗಳ ಹಕ್ಕನ್ನು ನೀವು ಪಡೆಯುವಿರಾ ಎಂಬ ಪ್ರಶ್ನೆಗೆ ನಾರಾಯಣಗೌಡರು, 'ಖಂಡಿತ ಇಲ್ಲ" ಎಂದು ಉತ್ತರಿಸಿದರು. ಹಾಗಾದರೆ, ಅವರ ಶ್ರೀಮಾತಾ ಕಂಪೆನಿಗೆ ಯಾವ್ಯಾವ ಸಿನಿಮಾ ಕೆಸೆಟ್‌ಗಳ ಹಕ್ಕು ಸಿಕ್ಕೀತು ಅನ್ನೋದು ಉಳಿದಿರುವ ಪ್ರಶ್ನೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada