»   » ಕಠಿಣ ಸ್ಪರ್ಧೆಯಲ್ಲಿ 'ಸಿಟಿ ವಿನ್ನರ್' ಆಗಿ ಮೂಡಿಬಂದ ಅಮೂಲ್ಯ

ಕಠಿಣ ಸ್ಪರ್ಧೆಯಲ್ಲಿ 'ಸಿಟಿ ವಿನ್ನರ್' ಆಗಿ ಮೂಡಿಬಂದ ಅಮೂಲ್ಯ

Written By:
Subscribe to Filmibeat Kannada

92.7 ಬಿಗ್ ಎಫ್ ಎಂ ಸತತ ನಾಲ್ಕನೇ ಬಾರಿಗೆ 'ಬಿಗ್ ಗೋಲ್ಡನ್ ವಾಯ್ಸ್' ಸಂಗೀತ ಸ್ಪರ್ಧೆಯನ್ನು ತನ್ನ ವಾಹಿನಿಯ 45 ಶಾಖೆಗಳಲ್ಲಿ ಹಮ್ಮಿಕೊಂಡಿತ್ತು.

ಬೆನೆಡ್ರಿಲ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ, ಆಗಸ್ಟ್ 12 ರಂದು ಮಂಗಳೂರು ವಿಭಾಗದ ಗ್ರ್ಯಾಂಡ್ ಫಿನಾಲೆಯಲ್ಲಿ, ಚುನಾಯಿತರಾದ ಟಾಪ್ ಐದು 5 ಸ್ಪರ್ಧಿಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು.

ಅಮೂಲ್ಯ ಮಲ್ಲಿಕಾರ್ಜುನ್, ವಿನೋದ್ ಕುಮಾರ್, ದೀಪ್ತಿ ಭಟ್ಕಳ್, ಆಶಿಶ್, ಸಚಿನ್ ಕೆ ಇವರು ಟಾಪ್ 5 ಸ್ಪರ್ಧಿಗಳಾಗಿ ಹೊರಹೊಮ್ಮಿದ್ದರು.

Amulya Mallikarjun wins Benedryl BIG Golden voice - 4 regional round

ಸಂಗೀತ ನಿರ್ದೇಶಕರಾದ ಡಾ. ನಿತಿನ್ ಆಚಾರ್ಯ, ಚಿತ್ರ ಸಾಹಿತಿ ಹಾಗೂ ನಿರ್ದೇಶಕರಾದ ಶಶಿರಾಜ್ ಕಾವೂರು ತೀರ್ಪುಗಾರರಾಗಿ ಉಪಸ್ಥಿತರಿದ್ದರು. ಚಿತ್ರನಟಿ ಶೃತಿ ಕೋಟ್ಯಾನ್ ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಐದು ಜನರ ನಡುವೆ ನಡೆದ ಕಠಿಣ ಸ್ಪರ್ಧೆಯಲ್ಲಿ ಅಮೂಲ್ಯ ಮಲ್ಲಿಕಾರ್ಜುನ್ 'ಸಿಟಿ ವಿನ್ನರ್' ಆಗಿ ಸ್ಪರ್ಧೆಯಲ್ಲಿ ಜಯ ಸಾಧಿಸಿದ್ದಾರೆ. 

ಈ ಸಂದರ್ಭದಲ್ಲಿ ಮಾತನಾಡಿದ ಶಶಿರಾಜ್ ಕಾವೂರು ಹಾಗೂ ಡಾ.ನಿತಿನ್ ಆಚಾರ್ಯ, ಬಿಗ್ ಎಫ್ ಎಂ ಆಯೋಜಿಸಿದ ಈ ಸ್ಪರ್ಧೆ ನಿಜಕ್ಕೂ ಶ್ಲಾಘನೀಯ, ಇಂತಹ ಸ್ಪರ್ಧೆಗಳಿಂದ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಸಿಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಅಮೂಲ್ಯರವರು ಅಲ್ ಇಂಡಿಯಾ ಲೆವೆಲ್ ನಲ್ಲಿ ಟಾಪ್ 10 ಹಂತಕ್ಕೆ ಬಂದರೆ, ಮುಂಬೈನಲ್ಲಿ ಖ್ಯಾತ ಸಂಗೀತ ನಿರ್ದೇಶಕರಾದ ಅಮನ್ ಮಲ್ಲಿಕ್ ಹಾಗೂ ಅರ್ಮಾನ್ ಮಲ್ಲಿಕ್ ಅವರು ತೀರ್ಪು ನೀಡುವ ಸ್ಪರ್ಧೆಯಲ್ಲಿ ಭಾಗವಹಿಸಿ, ತೇರ್ಗಡೆಯಾದರೆ ಬಾಲಿವುಡ್‌ನ‌ಲ್ಲಿ ಹಾಡುವ ಅವಕಾಶ ಇವರಿಗೆ ಸಿಗಲಿದೆ.

English summary
Amulya Mallikarjun wins Benedryl BIG Golden voice - 4 regional round. BIG Golden Voice is a unique format of On Air singing reality show introduced by BIG FM.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada