Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಬಾನ ದಾರಿಯಲಿ' ಮೊದಲ ಹಾಡು ಬಿಡುಗಡೆ ದಿನಾಂಕ ಘೋಷಣೆ; ಸೋನು ನಿಗಮ್ ಗಾಯಕ
ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ ಹಾಗೂ 99 ಚಿತ್ರಗಳ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ನಿರ್ದೇಶಕ ಪ್ರೀತಮ್ ಗುಬ್ಬಿ ನಿರ್ದೇಶನದ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಇದೂ ಸಹ ಟಿಪಿಕಲ್ ಪ್ರೀತಮ್ ಗುಬ್ಬಿ ಲವ್ ಸ್ಟೋರಿಯಾಗಿರಲಿದೆ ಎಂದು ಚಿತ್ರದ ಪೋಸ್ಟರ್‌ಗಳನ್ನು ನೋಡಿದ ಸಿನಿ ರಸಿಕರು ಈಗಾಗಲೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಈ ಚಿತ್ರಕ್ಕೆ 'ಬಾನ ದಾರಿಯಲಿ' ಎಂಬ ಶೀರ್ಷಿಕೆ ಇಡಲಾಗಿದ್ದು, ಶ್ರೀ ವಾರಿ ಟಾಕೀಸ್ ಬಂಡವಾಳವನ್ನು ಹೂಡಿದೆ.
ಕಳೆದ ವರ್ಷ ಗಾಳಿಪಟ 2 ಮೂಲಕ ದೊಡ್ಡ ಮಟ್ಟದಲ್ಲಿಯೇ ಕಮ್‌ಬ್ಯಾಕ್ ಮಾಡಿದ್ದ ಗಣೇಶ್ ಅವರಿಗೆ ನಂತರ ಬಿಡುಗಡೆಗೊಂಡ ತ್ರಿಬಲ್ ರೈಡಿಂಗ್ ಅಷ್ಟೇನೂ ಕೈಹಿಡಿಯಲಿಲ್ಲ. ಸದ್ಯ ಬಾನ ದಾರಿಯಲಿ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದ್ದು ಚಿತ್ರತಂಡ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಪ್ರತಿ ಹಬ್ಬಕ್ಕೂ ಚಿತ್ರದ ಸನ್ನಿವೇಶವೊಂದರ ಫೋಟೊವನ್ನು ಬಳಸಿ ಪೋಸ್ಟರ್ ಹಂಚಿಕೊಳ್ಳುತ್ತಿದ್ದ ಬಾನ ದಾರಿಯಲಿ ಚಿತ್ರತಂಡ ಹೊಸ ವರ್ಷಕ್ಕೂ ಸಹ ಪೋಸ್ಟರ್ ಹಂಚಿಕೊಂಡು ಶುಭ ಕೋರಿತ್ತು.
ಇನ್ನು ಚಿತ್ರದ ಮೊದಲ ಹಾಡನ್ನು ಜನವರಿ 4ರ ಬುಧವಾರದಂದು ಬಿಡುಗಡೆ ಮಾಡುವುದಾಗಿ ಬಾನ ದಾರಿಯಲಿ ಚಿತ್ರತಂಡ ಘೋಷಿಸಿದೆ. ಈ ದಿನದಂದು ಬಿಡುಗಡೆಯಾಗಲಿರುವ ಹಾಡಿಗೆ ಸೋನು ನಿಗಮ್ ದನಿ ನೀಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಚಿತ್ರದ ಹಾಡಿಗೆ ಸೋನು ನಿಗಮ್ ದನಿ ನೀಡಿದಾಗೆಲ್ಲಾ ಹಾಡಿನ ಫಲಿತಾಂಶ ಎಷ್ಟರ ಮಟ್ಟಿಗೆ ಇತ್ತು ಎಂಬುದನ್ನು ಸಿನಿ ರಸಿಕರಾದ ನಿಮಗೆ ಬಿಡಿಸಿ ಹೇಳಬೇಕಿಲ್ಲ.
ಹೀಗಾಗಿಯೇ ಈ ಸಕ್ಸಸ್‌ಫುಲ್ ಕೊಂಬೋ ಮತ್ತೆ ಪ್ರೇಕ್ಷಕರೆದುರು ಬರುತ್ತಿರುವುದನ್ನು 'ನಿಮ್ಮ ನೆಚ್ಚಿನ ಜೋಡಿ ಮತ್ತೆ ಬರುತ್ತಿದೆ' ಎಂದು ಬರೆದುಕೊಂಡು ತಿಳಿಸಿದೆ ಚಿತ್ರತಂಡ. ಇನ್ನು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಸಂಯೋಜಿಸಿದ್ದಾರೆ. ಗಣೇಶ್ ಅಭಿನಯದ ಗಾಳಿಪಟ 2 ಚಿತ್ರದ 'ನಾನಾಡುವ ಮಾತೆಲ್ಲವ ಕದ್ದಾಲಿಸು' ಹಾಡಿನ ಬಳಿಕ ಮತ್ತೆ ಬಾನ ದಾರಿಯಲಿ ಚಿತ್ರದ ಹಾಡಿಗಾಗಿ ಒಂದಾಗಿದೆ ಗಣೇಶ್, ಸೋನು ನಿಗಮ್ ಹಾಗೂ ಅರ್ಜುನ್ ಜನ್ಯ ಕಾಂಬಿನೇಶನ್. ಇನ್ನು ಈ ಹಾಡಿನ ಟೈಟಲ್ ಹಾಗೂ ಯಾವ ಸಮಯಕ್ಕೆ ಹಾಡು ಬಿಡುಗಡೆಯಾಗಲಿದೆ ಎಂಬು ಮಾಹಿತಿಯನ್ನು ಚಿತ್ರತಂಡ ಪ್ರಕಟಿಸಬೇಕಿದೆ.