ಬಾತ್‌ರೂಮ್ ಸಿಂಗರ್ಸ್ ಕೂಡಾ ಆಗ್ಬಹುದು ಲಕ್ಷಾಧೀಶ

ಭಾರತದ ಸುಮಾರು 15 ನಗರಗಳಲ್ಲಿ ಈ ಸ್ಪರ್ಧೆ ಚಾಲನೆಯಲ್ಲಿದೆ. ಬಾತ್ ರೂಮ್ ಸಿಂಗರ್ ಕೂಡಾ ಈ ಸಂಗೀಯ ಸ್ಪರ್ಧೆಯಲ್ಲಿ ಪಾಲ್ಗೊಂಡು ಲಕ್ಷ ರುಪಾಯಿ ಗೆಲ್ಲಬಹುದಾಗಿದೆ.
ಎಫ್‌ಎಂ ರೇಡಿಯೋ ಚಾನೆಲ್‌ಗಳಲ್ಲಿ ಬಾತ್‌ರೂಮ್ ಸಿಂಗರ್ ಕಾಂಟೆಸ್ಟ್ ಎಂಬ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ನಿಮ್ಮ ನೆಚ್ಚಿನ ಹಾಡನ್ನು ಹಾಡಿ ಅಪ್‌ಲೋಡ್ ಮಾಡಿ ಹಾಗೂ ನಿಮ್ಮ ಗೆಳೆಯರಿಗೆ ಮತ್ತು ಸಂಬಂಧಿಕರಿಗೆ ಮತ ಹಾಕುವಂತೆ ಹೇಳಿ. ನೀವು ವಿಜೇರಾಗುವ ಸುವರ್ಣ ಅವಕಾಶ ಸದುಪಯೋಗ ಪಡಿಸಿಕೊಳ್ಳಬಹುದು.
ಬಾತ್ ರೂಮ್ ಮತ್ತು ಸ್ನಾನದ ಮನೆಯ ಇತರೆ ವಸ್ತುಗಳ ತಯಾರಕರು ಹಾಗೂ ದೇಶದ ಪ್ರಮುಖ ಸ್ಯಾನಿಟರಿವೇರ್ ಕಂಪನಿಯಾದ ಬೆನೆಲೇವ್ ಈ ಸ್ಪರ್ಧೆಯನ್ನು ಏರ್ಪಡಿಸಿದೆ.
ರೇಡಿಯೋ ಮಿರ್ಚಿ, ರೇಡಿಯೋ ಒನ್, ರೇಡಿಯೋ ಸಿಟಿ, ಬಿಗ್ ಎಫ್ ಎಂ ಹಾಗೂ ಮೈ ಎಫ್ ಎಂ ವಾಹಿನಿಗಳು ಈ ಸ್ಪರ್ಧೆಗೆ ಕೈ ಜೋಡಿಸಿದ್ದು, ಬಾತ್ ರೂಮ್ ಸಿಂಗರ್ ಹಾಡಿರುವ ಹಾಡಿನ ತುಣುಕುಗಳನ್ನು ಬಿತ್ತರಿಸಲಾಗುತ್ತದೆ.
http://apps.facebook.com/bathroom_singer ವೆಬ್ ಪುಟದಲ್ಲಿ ಸೆ.3 ರಿಂದ ಸ್ಪರ್ಧೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ಸೆ.14 ರಿಂದ ವೋಟಿಂಗ್ ಪ್ರಾರಂಭವಾಗಲಿದ್ದು, ಸೆ.16 ರಂದು ಅಂತಿಮ ಹಂತದ ಪಟ್ಟಿ ತಯಾರಿಸಲಾಗುವುದು. ಸ್ಪರ್ಧೆ ಸೆ.20 ರವರೆಗೆ ಮುಂದುವರಿಯಲಿದ್ದು , ಸೆ.21 ರಂದು ನವದೆಹಲಿಯಲ್ಲಿ ಗ್ರಾಂಡ್ ಫಿನಾಲೆಯೊಂದಿಗೆ ಮುಕ್ತಾಯವಾಗಲಿದೆ.
ಮೂರು ಅಗ್ರಸ್ಥಾನ ಪಡೆದವರು ಕ್ರಮವಾಗಿ 1 ಲಕ್ಷ , 75 ಸಾವಿರ ಹಾಗೂ 50 ಸಾವಿರ ರೂ.ಗಳನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ-845309418 ,9739594354.


Click it and Unblock the Notifications











