»   » ಭಾರತೀಯ ವಿದ್ಯಾರ್ಥಿಗಳ ಹತ್ಯೆಯ ಬೆನ್ನತ್ತುವ 'ಪೋರ'

ಭಾರತೀಯ ವಿದ್ಯಾರ್ಥಿಗಳ ಹತ್ಯೆಯ ಬೆನ್ನತ್ತುವ 'ಪೋರ'

Posted By:
Subscribe to Filmibeat Kannada

ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆದಂತಹ ಹಲ್ಲೆಯ ಘಟನೆಯನ್ನಾಧರಿಸಿ ನಿರ್ಮಾಣವಾಗಿರುವ 'ಪೊರ. ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಸಂಸದೆ ಶೋಭಾ ಕರಂದ್ಲಾಜೆ ಅವರು 'ಪೊರ'ನ ಹಾಡುಗಳನ್ನು ಲೋಕಾರ್ಪಣೆ ಮಾಡಿದರು.

ಈ ಹಿಂದೆ ಬಾಯ್ ಫ್ರೆಂಡ್, ಅಂಜದಿರು ಚಿತ್ರಗಳನ್ನು ನಿರ್ದೇಶಿಸಿದ್ದ ಜನಾರ್ಧನ್ 'ಪೊರ' ಚಿತ್ರದ ನಾಯಕ ಹಾಗೂ ನಿರ್ದೇಶಕ. ಬೀದರ್ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ದೇವರಾಜ್ ಶಿಡ್ಲಘಟ್ಟ ಹಾಗೂ ಜನಾರ್ಧನ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಜನಾರ್ಧನ್ ಈ ಚಿತ್ರದಿಂದ ಅಮೋಘ ಹೆಸರಿನಿಂದ ನಾಯಕನಾಗಿ ಪರಿಚಿತರಾಗುತ್ತಿದ್ದಾರೆ. ಅಮೆರಿಕದ ಬೆಡಗಿ ವ್ಯಾಲರಿ ಈ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಅಲ್ಲದೆ ಕನ್ನಡದ ಹುಡುಗಿ ಸೌಜನ್ಯಾ ಗ್ಲಾಮರ್ ಪಾತ್ರವೊಂದರಲ್ಲಿ ಹಾಗೂ ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ.

ಗೃಹಮಂತ್ರಿ ಪಾತ್ರದಲ್ಲಿ ಗಿರೀಶ್ ಕಾರ್ನಾಡ್

ಚಿತ್ರದ 6 ಹಾಡುಗಳಿಗೆ ಕೆ.ಎಂ. ಇಂದ್ರ ಸಾಹಿತ್ಯ ಹಾಗೂ ಸಂಗೀತ ಒದಗಿಸಿದ್ದಾರೆ. ಒಂದು ಹಾಡನ್ನು ಮಾತ್ರ ಕವಿರಾಜ್ ರಚಿಸಿದ್ದಾರೆ. ಸಮಾರಂಭದಲ್ಲಿ ಮಾಜಿ ಎಂ.ಎಲ್.ಸಿ. ಭಾರತಿ ಶೆಟ್ಟಿ, ಕಾಶಿನಾಥ್ ಬೆಲ್ದಾಳ್, ಶಕುಂತಲಾ ಬೆಲ್ದಾಳ್, ಲಹರಿ ವೇಲು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಬಹಳ ಮುಖ್ಯವಾಗಿ ಹಿರಿಯ ನಟ ಡಾ.ಗಿರೀಶ್ ಕಾರ್ನಾಡ್ ರವರು ಗೃಹ ಮಂತ್ರಿಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ದಸರಾ ಹಬ್ಬದ ವೇಳೆಗೆ ಸಿನಿಮಾ ಪ್ರೇಕ್ಷಕರ ಮುಂದೆ

ನಿರ್ಮಾಪಕರಲ್ಲೊಬ್ಬರಾದ ಶೈಲೇಂದ್ರ ಬೆಲ್ದಾಳ್ ಅವರು ಮಾತನಾಡಿ, "ನಮಗಿದು ಮೊದಲ ಚಿತ್ರ. ಕಾರ್ನಾಡರ ಮಗನಾಗಿ ನಾನು ಕೂಡ ಈ ಚಿತ್ರದಲ್ಲಿ ಪುಟ್ಟ ಪಾತ್ರ ಕೂಡ ನಿರ್ವಹಿಸಿದ್ದೇನೆ. ದಸರಾ ಹಬ್ಬದ ವೇಳೆಗೆ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ನಿರೀಕ್ಷೆಯಲ್ಲಿದ್ದೇವೆ" ಎಂದು ಹೇಳಿದರು.

ಲೇಟ್ ಆದರು ಲೇಟೆಸ್ಟ್‍ ಆಗಿ ಬರುತ್ತಿದ್ದೇವೆ

ಚಿತ್ರದ ನಾಯಕ ಹಾಗೂ ನಿರ್ದೇಶಕ ಅಮೋಗ್ ಮಾತನಾಡಿ, "ಚಿತ್ರ ಪ್ರಾರಂಭವಾಗಿ 1 ವರ್ಷ ಮೇಲಾಯಿತು. ಲೇಟ್ ಆದರು ಲೇಟೆಸ್ಟ್‍ ಆಗಿ ಬರುತ್ತಿದ್ದೇವೆ. ಅಂಜದಿರು ನಂತರ ಒಂದು ವಿಭಿನ್ನ ಚಿತ್ರ ಮಾಡಬೇಕು ಎಂದು ಯೋಚಿಸಿದಾಗ ಈ ಕಥೆ ಹೊಳೆಯಿತು. ನೈಜವಾಗಿ ನಡೆದಂತಹ ಈ ಕಥೆಗೆ ಸಿನಿಮೀಯ ಟಚ್ ಕೊಟ್ಟು ಸ್ಕ್ರಿಪ್ಟ್ ಮಾಡಿದೆ. ಅದಕ್ಕೆ ತಕ್ಕಂತೆ ಒಳ್ಳೆಯ ನಿರ್ಮಾಪಕರೂ ಸಿಕ್ಕರು. ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದೆ...

ಅಮೆರಿಕದಲ್ಲಿ 18 ದಿನಗಳ ಕಾಲ ಚಿತ್ರೀಕರಣ

ಸೌಜನ್ಯ ಅವರ ಹಾಡೊಂದರ ಚಿತ್ರೀಕರಣ ಮಾತ್ರ ಬಾಕಿ ಇದೆ. ಬೆಂಗಳೂರು, ಬೀದರ್ ಅಲ್ಲದೆ ಅಮೆರಿಕದಲ್ಲಿ 18 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಆಸ್ಟ್ರೇಲಿಯಾದಲ್ಲಿ 120 ಜನ ವಿದ್ಯಾರ್ಥಿಗಳ ಹತ್ಯೆಯ ತನಿಖೆಯ ಬಗ್ಗೆ ಸರ್ಕಾರ ನಿರುತ್ಸಾಹ ತೋರಿದಾಗ ಅಲ್ಲಿಗೆ ಹೋಗುವ ನಾಯಕ ಹತ್ಯೆಯ ಹಿಂದಿನ ರಹಸ್ಯವನ್ನು ಬಯಲಿಗೆಳೆಯುತ್ತಾನೆ. ಇಂದ್ರ ಅವರು ತುಂಬ ವಿಭಿನ್ನವಾಗಿ 6 ಹಾಡುಗಳನ್ನು ಮಾಡಿಕೊಟ್ಟಿದ್ದಾರೆ" ಎಂದು ವಿವರ ನೀಡಿದರು.

ಚಿತ್ರರಂಗದ ಸಮಸ್ಯೆಗಳನ್ನು ಪರಿಹರಿಸುತ್ತೇನೆ: ಶೋಭಾ

ಧ್ವನಿಸುರುಳಿ ಬಿಡುಗಡೆಗೊಳಿಸಿ ಮಾತನಾಡಿದ ಸಂಸದೆ ಶೋಭಾಕರಂದ್ಲಾಜೆ, "ಚಿತ್ರರಂಗದವರ ಏನೇ ಸಮಸ್ಯೆಗಳಿದ್ದರು ಅವರು ಅದನ್ನು ಲಿಖಿತ ರೂಪದಲ್ಲಿ ಕೊಟ್ಟರೆ ನಾನು ಅದನ್ನು ಕೇಂದ್ರದ ಗಮನಕ್ಕೆ ತರುತ್ತೇನೆ. ಚಿತ್ರರಂಗ ತುಂಬಾ ಪ್ರಭಾವಿ ಮಾಧ್ಯಮ. ಚಿತ್ರಗಳನ್ನು ನೋಡಿಯೇ ಜನ ತಮ್ಮ ನಡವಳಿಕೆಗಳನ್ನು ಕಲಿಯುತ್ತಾರೆ ಹಾಗಾಗಿ ಚಿತ್ರರಂಗಕ್ಕೆ ದೊಡ್ಡ ಜವಾಬ್ದಾರಿ ಇದೆ" ಎಂದು ಹೇಳಿದರು.

ಬಹಳ ಗಂಭೀರವಾದ ವಿಷಯವನ್ನು ಹೇಳ ಹೊರಟಿದ್ದೇವೆ

ಸಂಗೀತ ನಿರ್ದೇಶಕ ಇಂದ್ರ ಮಾತನಾಡಿ, "ಚಿತ್ರದ ಹೆಸರು ಮಾತ್ರ 'ಪೊರ' ಆದರೆ ಬಹಳ ಗಂಭೀರವಾದ ವಿಷಯವನ್ನು ಹೇಳ ಹೊರಟಿದ್ದೇವೆ. 6 ಹಾಡುಗಳಿದ್ದರು ಪ್ರತಿ ಹಾಡು ವಿಭಿನ್ನವಾಗಿ ಇದೆ ಎಂದರು. ನಟಿ ಸೌಜನ್ಯ, ಲಹರಿ ವೇಲು, ಭಾರತೀ ಶೆಟ್ಟಿ ಇತರರು ಮಾತನಾಡಿ ಚಿತ್ರಕ್ಕೆ ಶುಭ ಕೋರಿದರು.

English summary
Kannada movie 'Pora' audio released by BJP MP Shobha Karandlaje. Vyalari hails from United States of America is making debut in this Kannada film. This is Mass Movies Kannada film by Dr Shailendra Beladala, Devaraj and Ramachandrappa. Michael is cameraman, KM Indra has written dialogues and scores music.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada