»   » ಸುದೀಪ್ ಚಿತ್ರಗಳಿಗೆ ಪರಭಾಷಾ ಸಂಗೀತ ನಿರ್ದೇಶಕರು!

ಸುದೀಪ್ ಚಿತ್ರಗಳಿಗೆ ಪರಭಾಷಾ ಸಂಗೀತ ನಿರ್ದೇಶಕರು!

Posted By:
Subscribe to Filmibeat Kannada

ಕಿಚ್ಚ ಸುದೀಪ್ ಈಗ ಬರೀ ಸ್ಯಾಂಡಲ್ ವುಡ್ ಗೆ ಮಾತ್ರ ಸೀಮಿತವಾಗಿಲ್ಲ. ಟಾಲಿವುಡ್ ಮತ್ತು ಕಾಲಿವುಡ್ ನಲ್ಲೂ ಕಿಚ್ಚು ಹಚ್ಚಿಸುತ್ತಿದ್ದಾರೆ. ಇಳಯದಳಪತಿ ವಿಜಯ್ ಜೊತೆ ತಮಿಳಿನಲ್ಲಿ ಸಿನಿಮಾ ಮಾಡುತ್ತಿರುವ 'ನಲ್ಲ' ಈಗ ಕೆ.ಎಸ್.ರವಿಕುಮಾರ್ ನಿರ್ದೇಶನದ ದ್ವಿಭಾಷಾ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

ಕನ್ನಡ ಮತ್ತು ತಮಿಳಿನಲ್ಲಿ ರೆಡಿಯಾಗುವ ಈ ಚಿತ್ರಕ್ಕೆ ಕಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ಡಿ.ಇಮಾನ್ ಮ್ಯೂಸಿಕ್ ನೀಡಲಿದ್ದಾರೆ.

d iman

ಕಾಲಿವುಡ್ ನಲ್ಲಿ 'ಜಿಲ್ಲಾ', 'ಪಾಂಡಿಯನಾಡು', 'ವರುಥಪಡತಾ ವಾಲಿಬರ್ ಸಂಗಮ್' ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ನೀಡಿರುವ ಡಿ.ಇಮಾಮ್ ಸುದೀಪ್ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ.

ಇನ್ನೂ 'ಗಜಕೇಸರಿ' ಕೃಷ್ಣ ನಿರ್ದೇಶನದ ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರಕ್ಕೆ ಸಂಗೀತ ನೀಡುತ್ತಿರುವುದು ಯಾರು ಗೊತ್ತಾ? ಟಾಲಿವುಡ್ ಮ್ಯೂಸಿಕ್ ಮಾಂತ್ರಿಕ ದೇವಿ ಶ್ರೀ ಪ್ರಸಾದ್. [ಪವನ್ ಕಲ್ಯಾಣ್ ಚಿತ್ರದಲ್ಲಿ ಸುದೀಪ್ 'ಬಬ್ಬರ್ ಶೇರ್']

devishree prasad

ಈ ಹಿಂದೆ 'ಸಂಗಮ' ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ದೇವಿ ಶ್ರೀ ಪ್ರಸಾದ್, ಸುದೀಪ್ ಅಭಿನಯದ 'ರನ್ನ' ಚಿತ್ರದ ''ಬಬ್ಬರ್ ಶೇರ್..'' ಹಾಡಿಗೆ ದನಿಯಾಗಿದ್ದರು. ಈಗ ಅದೇ ಸುದೀಪ್ ಗಾಗಿ 'ಹೆಬ್ಬುಲಿ' ಚಿತ್ರಕ್ಕೆ ಮ್ಯೂಸಿಕ್ ನೀಡುವುದಕ್ಕೆ ದೇವಿ ಶ್ರೀ ಪ್ರಸಾದ್ ಒಪ್ಪಿಕೊಂಡಿದ್ದಾರೆ. [ಗಣೇಶ್ ಗಿಂತಲೂ ದೇವಿಶ್ರೀ ಸಂಭಾವನೆ ಹೆಚ್ಚು]

ಪರಭಾಷೆಯ ಇಬ್ಬರು ಟಾಪ್ ಮ್ಯೂಸಿಕ್ ಡೈರೆಕ್ಟರ್ ಗಳು ಈಗ ಸುದೀಪ್ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಅಂದ್ಮೇಲೆ, ಸುದೀಪ್ ಅವರ ಈ ಎರಡು ಚಿತ್ರಗಳಲ್ಲಿ ಗಾನಬಜಾನಾಗೇನು ಕಮ್ಮಿಯಿಲ್ಲ ಅಂದಂಗಾಯ್ತು. (ಏಜೆನ್ಸೀಸ್)

English summary
Tamil Music Director D.Imman and Telugu Music Composer Devishree Prasad are roped into score music for Sudeep's upcoming films. D.Imman is composing music for Sudeep starrer K.S.Ravikumar directorial next and Devishree Prasad for 'Hebbuli'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada