For Quick Alerts
  ALLOW NOTIFICATIONS  
  For Daily Alerts

  'ರೌಡಿಗಳು ನಾವು ರೌಡಿಗಳು' ಎಂದು ಹಾಡಿದ ಜಯರಾಜು-ಗಂಗ: ಹಾಡು ಕೇಳಿದವರು ಏನಂದ್ರು?

  |

  ಡಾಲಿ ಧನಂಜಯ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಹೆಡ್‌ಬುಷ್' ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿದೆ. 'ನಾವು ರೌಡಿಗಳು' ಎಂದು ಶುರುವಾಗುವ 'ರೌಡೀಸ್ ಆಂಥಮ್‌'ನಲ್ಲಿ ಬೆಂಗಳೂರು ಭೂಗತ ಲೋಕದ ಆ ದಿನಗಳ ದರ್ಶನ ಮಾಡಿಸುವ ಪ್ರಯತ್ನ ನಡೆದಿದೆ. ಒಂದಷ್ಟು ಮೇಕಿಂಗ್ ಝಲಕ್ ಮಿಕ್ಸ್ ಮಾಡಿ ಲಿರಿಕಲ್ ಸಾಂಗ್ ಕಟ್ಟಿಕೊಡಲಾಗಿದೆ.

  ನಟ ಧನಂಜಯ್ ಇಂದು (ಆಗಸ್ಟ್ 23) 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಪ್ಪು ಅಗಲಿಕೆಯ ನೋವಿನ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಣೆ ಬೇಡ ಎಂದು ನಿರ್ಧರಿಸಿದ್ದಾರೆ. ಅಭಿಮಾನಿಗಳಲ್ಲೂ ಈ ಬಗ್ಗೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಧನು ಹುಟ್ಟುಹಬ್ಬದ ವಿಶೇಷವಾಗಿ 'ಹೆಡ್‌ಬುಷ್' ಸಾಂಗ್ ಹೊರ ಬಂದಿದೆ. ಸ್ವತಃ ಧನಂಜಯ ಈ ಚಿತ್ರವನ್ನು ನಿರ್ಮಿಸಿ, ಡಾನ್ ಎಂ ಪಿ ಜಯರಾಜ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಬೆಂಗಳೂರು ಭೂಗತಲೋಕದ ನೈಜ ಕಥೆಯನ್ನು 'ಹೆಡ್‌ಬುಷ್' ಚಿತ್ರದಲ್ಲಿ ಹೇಳುವ ಪ್ರಯತ್ನ ನಡೀತಿದೆ. ಕ್ರೇಜಿಸ್ಟಾರ್ ವಿ. ರವಿಚಂದ್ರನ್, ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ಶೃತಿ ಹರಿಹರನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಅಗ್ನಿ ಶ್ರೀಧರ್ ಚಿತ್ರಕ್ಕೆ ಚಿತ್ರಕತೆ ಬರೆದಿದ್ದು, ಶೂನ್ಯ ಆಕ್ಷನ್ ಕಟ್ ಹೇಳಿದ್ದಾರೆ.

  ದಯವಿಟ್ಟು ಕ್ಷಮಿಸಿ, ಈ ವರ್ಷ ಹುಟ್ಟುಹಬ್ಬ ಆಚರಿಸಲ್ಲ, ಮನೆಯಲ್ಲೂ ಇರಲ್ಲ: ಧನಂಜಯ್ದಯವಿಟ್ಟು ಕ್ಷಮಿಸಿ, ಈ ವರ್ಷ ಹುಟ್ಟುಹಬ್ಬ ಆಚರಿಸಲ್ಲ, ಮನೆಯಲ್ಲೂ ಇರಲ್ಲ: ಧನಂಜಯ್

  ಸೆಟ್ಟೇರಿದ ದಿನದಿಂದಲೂ 'ಹೆಡ್‌ಬುಷ್' ಸಿನಿಮಾ ಬಹಳ ಸದ್ದು ಮಾಡುತ್ತಿದೆ. ಸ್ಟಾರ್‌ ಕಲಾವಿದರ ಎಂಟ್ರಿಯಿಂದ ಚಿತ್ರಕ್ಕೆ ಮತ್ತಷ್ಟು ಮೈಲೇಜ್ ಸಿಕ್ಕಿದೆ. ಚಿತ್ರೀಕರಣದ ನಡುವೆ ನಿರ್ಮಾಪಕರು ಬದಲಾಗಿದ್ದರು. ಮೊದಲಿಗೆ ಅಶುಬೆದ್ರೆ ಚಿತ್ರಕ್ಕೆ ಬಂಡವಾಳ ಹೂಡಲು ಮುಂದೆ ಬಂದಿದ್ದರು. ನಂತರ ಅವರು ಚಿತ್ರದಿಂದ ಹೊರ ಬಂದ ಮೇಲೆ ಸೋಮಣ್ಣ ಟಾಕೀಸ್ ಜೊತೆ ಸೇರಿ ಧನಂಜಯ ತಮ್ಮದೇ ಡಾಲಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ಪ್ರಗತಿಯಲ್ಲಿದೆ. ಈ ವರ್ಷವೇ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ. ಚಿತ್ರದಲ್ಲಿ 70- 80ರ ದಶಕದ ಬೆಂಗಳೂರು ಭೂಗತ ಲೋಕದ ಕಥೆಯನ್ನು ಹೇಳಲು ಹೊರಟಿದ್ದಾರೆ.

   ಹೇಗಿದೆ 'ರೌಡೀಸ್ ಆಂಥಮ್‌'?

  ಹೇಗಿದೆ 'ರೌಡೀಸ್ ಆಂಥಮ್‌'?

  ಚರಣ್ ರಾಜ್‌ ಟ್ಯೂನ್ ಹಾಕಿರುವ 'ರೌಡಿಗಳು ನಾವು ರೌಡಿಗಳು' ಸಾಂಗ್‌ಗೆ ಅಗ್ನಿಶ್ರೀಧರ್ ಸಾಹಿತ್ಯ ಬರೆದಿದ್ದಾರೆ. ಈ ಪ್ರಂಚವೇ ಸರಿಯಿಲ್ಲ, ಪ್ರಪಂಚದಲ್ಲಿ ಯಾರು ಸರಿಯಿಲ್ಲ, ನಾವೇ ಸರಿ ಎಂದು ರೌಡಿಗಳು ಮೆರೆದಾಡಿದ್ದನ್ನು ಈ ಸಾಂಗ್‌ನಲ್ಲಿ ಎಳೆಎಳೆಯಾಗಿ ಹೇಳುವ ಪ್ರಯತ್ನ ನಡೆದಿದೆ. ಜಯರಾಜು ಆಗಿ ಧನಂಜಯ್, ಗಂಗಾ ಆಗಿ ಲೂಸ್ ಮಾದ ಕಾಣಿಸಿಕೊಂಡಿದ್ದು, ಅವರ ಲುಕ್‌ ರಿವೀಲ್ ಆಗಿದೆ. ಸಾಂಗ್‌ನಲ್ಲಿ ಜಯರಾಜ್ ಅಂಡ್ ಗ್ಯಾಂಗ್ ಬಾಲ್ಯದ ದಿನಗಳು, ಅವರು ಆಡಿ ಬೆಳೆದ ಪರಿ ಹೇಗಿತ್ತು ಎಂದು ತೋರಿಸಲಾಗಿದೆ.

  Dhananjaya | 'ಪುಷ್ಪ 2'ನಲ್ಲಿ ನನ್ನ ಪಾತ್ರ ಹೇಗಿರುತ್ತೆ ಅಂತ ಇನ್ನು ಗೊತ್ತಿಲ್ಲ -ಧನಂಜಯ್Dhananjaya | 'ಪುಷ್ಪ 2'ನಲ್ಲಿ ನನ್ನ ಪಾತ್ರ ಹೇಗಿರುತ್ತೆ ಅಂತ ಇನ್ನು ಗೊತ್ತಿಲ್ಲ -ಧನಂಜಯ್

   ರೆಟ್ರೋ ಸ್ಟೈಲ್ 'ಹೆಡ್‌ಬುಷ್' ಸಾಂಗ್

  ರೆಟ್ರೋ ಸ್ಟೈಲ್ 'ಹೆಡ್‌ಬುಷ್' ಸಾಂಗ್

  ಕಥೆಗೆ ತಕ್ಕಂತೆ ರೆಟ್ರೋ ಸ್ಟೈಲ್‌ನಲ್ಲಿ ಸಾಂಗ್‌ನ ಡಿಸೈನ್ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಟ್ಯೂನು ಲಿರಿಕ್ಸ್ ಇದೆ. ಬೆಂಗಳೂರಿನ ಪೇಟೆಗಳಲ್ಲಿ ಪೊಲೀಸರಿಗೆ ಹೆದರದೇ ರೌಡಿಗಳು ಹೇಗೆಲ್ಲಾ ಬೆಳೆದರು ಅನ್ನುವ ಚಿತ್ರಣ ಇಲ್ಲಿದೆ. ಗುಟ್ಟಹಳ್ಳಿ ಸೇರಿದಂತೆ ಒಂದಷ್ಟು ಕಡೆಗಳಲ್ಲಿ ಸಾಂಗ್ ಶೂಟಿಂಗ್ ಮಾಡಿದ್ದಾರೆ. ಡಾನ್ ಜಯರಾಜ್ ಬಾಲ್ಯದ ದೃಶ್ಯಗಳಲ್ಲಿ ಆಕಾಶ್ ಎನ್ನುವ ಹುಡುಗ ಕಾಣಸಿಕೊಂಡಿದ್ದಾನೆ. ಜಯರಾಜ್ ತಿಗಳ ಪೇಟೆಯ ಗರಡಿ ಮನೆಯಲ್ಲಿ ಸಾಮು ಮಾಡುತ್ತಾ ಬೆಳೆದಿದ್ದನ್ನು ನೋಡಬಹುದು. ಅಂದಿನ ಕಾಲಘಟ್ಟವನ್ನು ಕಟ್ಟಿಕೊಡಲು ಸಾಕಷ್ಟು ಸೆಟ್‌ಗಳನ್ನು ಹಾಕಿ ಚಿತ್ರೀಕರಣ ನಡೆಸಲಾಗಿದೆ.

   ಕಾಮಣ್ಣನ ಮಕ್ಕಳು ಯಾರು ಜಯರಾಜು?

  ಕಾಮಣ್ಣನ ಮಕ್ಕಳು ಯಾರು ಜಯರಾಜು?

  ಹೋಳಿ ಹಬ್ಬದ ಸಮಯದಲ್ಲಿ ಹಾಡಿ ಕುಣಿಯುವ 'ಕಾಮಣ್ಣ ಮಕ್ಕಳು' ಹಾಡಿನ ಬಿಟ್ ಅನ್ನು ಬಳಸಿಕೊಂಡಿದ್ದು, ಕೊನೆಯ ಪಂಚ್ ಮಜವಾಗಿದೆ. 'ಈ ಕಾಮಣ್ಣನ ಮಕ್ಕಳು ಯಾರು ಜಯರಾಜು' ಎಂದು ಗಂಗಾ ಕೇಳಿದಾಗ 'ಇನ್ಯಾರು ಗಂಗಾ, ಯಾರ್ಯಾರು ಬಡವರ ಹೊಟ್ಟೆ ಮೇಲೆ ಹೊಡಿತ್ತಾರೋ ಅವರೇ ಕಾಮಣ್ಣನ ಮಕ್ಕಳು' ಎಂದು ಜಯರಾಜ್ ಹೊಡೆಯುವ ಡೈಲಾಗ್‌ನಿಂದ ಸಾಂಗ್ ಕೊನೆಗೊಂಡಿದೆ.

  "ಪುಷ್ಪ" ನಂತರ ಟಾಲಿವುಡ್‌ನಲ್ಲಿ ಮಾರ್ಕೆಟ್ ಹೆಚ್ಚಿಸಿಕೊಂಡ ಡಾಲಿ

   'ರೌಡೀಸ್ ಆಂಥಮ್‌' ಕೇಳಿದವರಿಗೆ ನಿರಾಸೆ

  'ರೌಡೀಸ್ ಆಂಥಮ್‌' ಕೇಳಿದವರಿಗೆ ನಿರಾಸೆ

  ಧನಂಜಯ್ ಹುಟ್ಟುಹಬ್ಬದ ಸಂಭ್ರಮದಲ್ಲಿ ರಿಲೀಸ್ ಆಗಿರುವ 'ರೌಡಿಗಳು ನಾವು ರೌಡಿಗಳು' ಸಾಂಗ್ ಸಿನಿರಸಿಕರಿಗೆ ಅಷ್ಟಾಗಿ ಇಷ್ಟವಾಗಿಲ್ಲ. ಚರಣ್‌ ರಾಜ್ ಮ್ಯೂಸಿಕ್‌ನಲ್ಲಿ ಆಲ್ಬಮ್‌ ಬಗ್ಗೆ ಭಾರೀ ನಿರೀಕ್ಷೆ ಇತ್ತು. 'ರೌಡೀಸ್ ಆಂಥಮ್‌' ನಿರೀಕ್ಷಿತ ಮಟ್ಟದಲ್ಲಿ ಮೂಡಿ ಬಂದಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಡಾಲಿ ಅಭಿಮಾನಿಗಳಿಗೆ ಸಾಂಗ್ ಸಖತ್ ಕಿಕ್ ಕೊಡ್ತಿದೆ. ತೆರೆಮೇಲೆ ಕಂಪ್ಲೀಟ್ ವಿಡಿಯೋ ಸಾಂಗ್ ನೋಡುವುದಕ್ಕೆ ಕಾತರದಿಂದ ಕಾಯುತ್ತಿದ್ದಾರೆ.

  English summary
  Dhananjaya Starrer Head Bush Movie First Song Released For Actor Birthday. Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X