»   » ಅದ್ನಾನ್ ಸಾಮಿಗೆ ಎರಡನೇ ಬಾರಿ ವಿವಾಹ ವಿಚ್ಛೇದನ

ಅದ್ನಾನ್ ಸಾಮಿಗೆ ಎರಡನೇ ಬಾರಿ ವಿವಾಹ ವಿಚ್ಛೇದನ

Posted By:
Subscribe to Filmibeat Kannada
Singer Adnan Sami
ತನ್ನದೇ ಆದಂತಹ ವಿಶಿಷ್ಟ ಶೈಲಿಗೆ ಹೆಸರಾಗಿದ್ದ ಗಾಯಕ ಅದ್ನಾನ್ ಸಾಮಿ ನೆನಪಿರಬೇಕಲ್ಲ. ಆರಂಭದಲ್ಲಿ ತಮ್ಮ ಠೋಣಪ ದೇಹದಿಂದ ಗಮನಸೆಳೆದಿದ್ದ ಈತ ಈಗ ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಂತೆ ತೆಳ್ಳಗೆ ಒಳ್ಳೆಯ ಹೀರೋ ತರಹ ತಮ್ಮ ಮೈಯನ್ನು ಹುರಿಗಟ್ಟಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಸಣ್ಣಗೆ ಹೊಗೆಯಾಡುತ್ತಿದ್ದ ಈತನ ಸಂಸಾರದಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿತ್ತು. ಅಲ್ಲಿಂದ ಆರಂಭವಾದ ದಾಂಪತ್ಯ ಕಲಹ ಕಡೆಗೆ ವಿವಾಹ ವಿಚ್ಛೇದನದ ಮೂಲಕ ಜಗಜ್ಜಾಹೀರಾಗಿದೆ. ಕೊನೆಗೂ ನ್ಯಾಯಾಲಯ ಇವರ ವಿವಾಹ ವಿಚ್ಛೇದನಕ್ಕೆ ಅಧಿಕೃತ ಮುದ್ರೆ ಒತ್ತಿದೆ.

ಯುಎಇ ಮೂಲದ ತಮ್ಮ ಮಾಜಿ ಪತ್ನಿಯನ್ನು 2001ರಲ್ಲಿ ಮದುವೆಯಾಗಿದ್ದರು ಅದ್ನಾನ್ ಸಾಮಿ. ಬಳಿಕ 2004ರಲ್ಲಿ ವಿವಾಹ ವಿಚ್ಛೇದನ ಪಡೆದು ಆಕೆಯಿಂದ ದೂರವಾಗಿದ್ದ. ಇಷ್ಟೆಲ್ಲಾ ಆದ ಮೇಲೆ ಮತ್ತೊಮ್ಮೆ 2007ರಲ್ಲಿ ಇದೇ ಜೋಡಿ ಮರುಮದುವೆ ಮೂಲಕ ಒಂದಾದರು.

ಆದರೂ ಈ ಮದುವೆ ಜಾಸ್ತಿ ದಿನ ಉಳಿಯಲಿಲ್ಲ. ಮೊದಲೇ ಬಿರುಕು ಬಿಟ್ಟಿದ್ದ ಸಂಸಾರನೌಕೆ ಮತ್ತೆ ಸಾಗರದ ತಳಸೇರಲು ಬಹಳ ದಿನ ಬೇಕಾಗಲಿಲ್ಲ. ಅದ್ನಾನ್ ಪತ್ನಿ ಸಬಹ ಗಲಾದರಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿ, ತನ್ನ ಗಂಡನ ವಿರುದ್ಧ ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ ಪ್ರಕಾರ ಕೇಸು ಜಡಿದಿದ್ದರು.

ಆದರೆ ಇಸ್ಲಾಂ ಕಾನೂನಿಯ ಪ್ರಕಾರ ಗಲಾದರಿ ಸಲ್ಲಿಸಿದ್ದ ಪ್ರಮಾಣ ಪತ್ರಗಳು ಅನೂರ್ಜಿತ ಎಂದು ಫ್ಯಾಮಿಲಿ ಕೋರ್ಟ್‌ ತಳ್ಳಿ ಹಾಕಿತ್ತು. ಇದನ್ನು ಪ್ರಶ್ನಿಸಿ ಅದ್ನಾನ್ ಸಾಮಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿಗಳಾದ ರೋಶನ್ ದಳ್ವಿ ಅವರು ಇಬ್ಬರ ವಾದ ವಿವಾದಗಳನು ಆಲಿಸಿ ದಂಪತಿಗಳ ವಿವಾಹ ವಿಚ್ಛೇದನಕ್ಕೆ ಅಂಗೀಕರಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಪಾಕಿಸ್ತಾನಿ ಮೂಲದ ಅದ್ನಾನ್ ಸಾಮಿ, "ನನ್ನ ಪತ್ನಿ ರೋಯಾ, ತಾಯಿ ಹಾಗೂ ನಾನು ಬಹಳಷ್ಟು ನೊಂದಿದ್ದೇವೆ. ಈಗಷ್ಟೇ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದೇನೆ. ಕೋರ್ಟ್‌ನಲ್ಲಿ ನನಗೆ ವಿವಾಹ ವಿಚ್ಛೇದನ ಸಿಕ್ಕಿದ ಕಾರಣ ದುಬೈನಲ್ಲಿ ತನ್ನ ಸ್ನೇಹಿತರಿಗೆ ಔತಣಕೂಟ ಏರ್ಪಡಿಸಿದ್ದೇನೆ" ಎಂದಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ತನ್ನ ಗೆಳೆಯ ಗೆಳತಿಯರನ್ನು ಸಂತೋಷಕೂಟಕ್ಕೆ ಆಹ್ವಾನಿಸುತ್ತಿದ್ದಾರೆ ಅದ್ನಾನ್. ಅಂದಹಾಗೆ ಅದ್ನಾನ್ ಸಾಮಿ ಕನ್ನಡದ 'ಸೌಂದರ್ಯ' ಹಾಗೂ 'ಧಿಮಾಕು' ಚಿತ್ರಗಳಲ್ಲಿ ಹಾಡಿದ್ದಾರೆ. ಉಳಿದಂತೆ ತೆಲುಗು, ತಮಿಳಿನಲ್ಲೂ ಈತನ ಕಂಠ ಬಲು ಜನಪ್ರಿಯವಾಗಿದೆ. (ಏಜೆನ್ಸೀಸ್)

English summary
The Bombay high court on Tuesday granted divorce to Pakistani singer, Adnan Sami, and Sabah Galadari, a citizen of UAE, who got divorced for the second time since tying the knot in 2001.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada