twitter
    For Quick Alerts
    ALLOW NOTIFICATIONS  
    For Daily Alerts

    ಮಂಗ್ಲಿ ಹಾಡೊಂದಕ್ಕೆ ಪಡೆಯುವ ಸಂಭಾವನೆ ಎಷ್ಟು? ಸ್ಯಾಂಡಲ್‌ವುಡ್‌ನಲ್ಲಿ ಕ್ರೇಜ್ ಹೇಗಿದೆ?

    |

    ಕಿರುತೆರೆ ನಿರೂಪಕಿಯಾಗಿ ಕರಿಯರ್ ಆರಂಭಿಸಿದ ಮಂಗ್ಲಿ ಮುಂದೆ ಗಾಯಕಿಯಾಗಿ ಜನಪ್ರಿಯತೆ ಸಾಧಿಸಿದರು. 'ಬತುಕಮ್ಮ' ಹಾಡಿನಿಂದ ಮಂಗ್ಲಿ ರಾತ್ರೋರಾತ್ರಿ ಸಂಗೀತ ಪ್ರೇಮಿಗಳ ಮನಗೆದ್ದರು. 'ರಾಮುಲೋ ರಾಮುಲೋ' ಹಾಡು ಚಿತ್ರರಂಗದಲ್ಲಿ ದೊಡ್ಡ ಹೆಸರು ತಂದುಕೊಟ್ಟಿತ್ತು.

    ತೆಲುಗು ಗಾಯಕಿ ಮಂಗ್ಲಿ ಕನ್ನಡ ಸಿನಿಮಾಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಕನ್ನಡ ಚಿತ್ರ ಗೀತೆಗಳನ್ನು ಹಾಡುವುದು ಅಷ್ಟೇಅಲ್ಲ ರಾಜ್ಯದ ಮೂಲೆ ಮೂಲೆಯಲ್ಲಿ ನಡೆಯುವ ರಸಸಂಜೆ ಕಾರ್ಯಕ್ರಮಗಳಲ್ಲಿ ಹಾಡಿ ರಂಜಿಸುತ್ತಿದ್ದಾರೆ. ಇತ್ತೀಚೆಗೆ ಚಿಕ್ಕಬಳ್ಳಾಪುರ, ಬಳ್ಳಾರಿ ಉತ್ಸವಗಳಲ್ಲಿ ಮಂಗ್ಲಿ ಹಾಡು ಹಾಡಿ ಕಮಾಲ್ ಮಾಡಿದ್ದರು. ಕರ್ನಾಟಕದಲ್ಲೂ ಮಂಗ್ಲಿಗೆ ದೊಡ್ಡ ಅಭಿಮಾನಿ ಬಳಗ ಇದೆ. 'ಪಾದರಾಯ' ಎನ್ನುವ ಕನ್ನಡ ಸಿನಿಮಾದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ.

    "ಇದೆಲ್ಲಾ ನನ್ನ ಗೌರವಕ್ಕೆ ಧಕ್ಕೆ ತರಲು ಮಾಡುತ್ತಿರುವ ಅಪಪ್ರಚಾರ": ಮಂಗ್ಲಿ

    ತೆಲುಗು ಜನಪದ ಹಾಡುಗಳನ್ನು ಹಾಡುತ್ತಾ ಎಲೆಮರೆ ಕಾಯಿಯಂತಿದ್ದ ಮಂಗ್ಲಿ ನಿಧಾನವಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಆಂಧ್ರದ ರಾಯಲ ಸೀಮ ಪ್ರದೇಶ ಅನಂತಪುರಂ ಜಿಲ್ಲೆಯ ಬಸನೇಪಲ್ಲಿ ಎಂಬ ಲಂಬಾಣಿ ತಾಂಡಾದಲ್ಲಿ ಹುಟ್ಟಿದ ಸತ್ಯವತಿ ಈಗ ಮಂಗ್ಲಿಯಾಗಿ ನಮ್ಮ ಮುಂದೆ ಇದ್ದಾರೆ.

    ಹಾಡೊಂದಕ್ಕೆ ಮಂಗ್ಲಿ ಸಂಭಾವನೆ ಎಷ್ಟು?

    ಹಾಡೊಂದಕ್ಕೆ ಮಂಗ್ಲಿ ಸಂಭಾವನೆ ಎಷ್ಟು?

    ಮಂಗ್ಲಿ ಎನ್ನುವುದು ಅವರ ಅಜ್ಜಿಯ ಹೆಸರು. ಸತ್ಯವತಿ ಆಗಿದ್ದವರು ಮಂಗ್ಲಿ ಎಂದು ಹೆಸರು ಬದಲಿಸಿಕೊಂಡು ಕಿರುತೆರೆ ನಿರೂಪಕಿ ಆಗಿದ್ದರು. ಮುಂದೆ ಅದೇ ಹೆಸರಿನಲ್ಲಿ ಜನಪ್ರಿಯರಾದರು. ಆರಂಭದ ದಿನಗಳಲ್ಲಿ ಹಾಡೊಂದಕ್ಕೆ 10ರಿಂದ 20 ಸಾವಿರ ಸಂಭಾವನೆ ಪಡೆಯುತ್ತಿದ್ದ ಮಂಗ್ಲಿ ಜನಪ್ರಿಯತೆ ಹೆಚ್ಚಿದಂತೆ ಸಂಭಾವನೆ ಹೆಚ್ಚಿಸಿಕೊಂಡರು. ಸದ್ಯ ಹಾಡೊಂದಕ್ಕೆ 3 ರಿಂದ 4 ಲಕ್ಷ ಸಂಭಾವನೆ ಪಡೆಯುತ್ತಾರೆ ಎನ್ನಲಾಗ್ತಿದೆ. ಇತ್ತೀಚೆಗೆ ಕನ್ನಡದಲ್ಲೀ ಹೆಚ್ಚು ಹಾಡು ಹಾಡುತ್ತಿದ್ದಾರೆ. ಇನ್ನು ತಮ್ಮದೇ ಯೂಟ್ಯೂಬ್‌ ಚಾನಲ್‌ನಲ್ಲಿ ಭಕ್ತಿ ಗೀತೆಗಳನ್ನು ಹಾಡಿ ಶೇರ್ ಮಾಡುತ್ತಿರುತ್ತಾರೆ.

    ರಮ್ಯಾ- ನರೇಶ್ ಫ್ಯಾಮಿಲಿ ಹೈಡ್ರಾಮಾದಲ್ಲಿ ಭಾರೀ ಟ್ವಿಸ್ಟ್: 10 ಕೋಟಿ ರೂ.ಗೆ ಸೆಟ್ಲ್‌ಮೆಂಟ್?ರಮ್ಯಾ- ನರೇಶ್ ಫ್ಯಾಮಿಲಿ ಹೈಡ್ರಾಮಾದಲ್ಲಿ ಭಾರೀ ಟ್ವಿಸ್ಟ್: 10 ಕೋಟಿ ರೂ.ಗೆ ಸೆಟ್ಲ್‌ಮೆಂಟ್?

    'ಊ ಅಂಟಾವಾ' ಎಂದಿದ್ದು ಇಂದ್ರವತಿ

    'ಊ ಅಂಟಾವಾ' ಎಂದಿದ್ದು ಇಂದ್ರವತಿ

    ಬಹಳ ಜನ 'ಪುಷ್ಪ' ಚಿತ್ರದ 'ಊ ಅಂಟಾವಾ ಮಾವ' ಹಾಡನ್ನು ಹಾಡಿರೋದು ಮಂಗ್ಲಿ ಎಂದುಕೊಂಡಿದ್ದಾರೆ. ಈ ಹಾಡಿನ ಕನ್ನಡ ವರ್ಷನ್ ಹಾಡಿದ್ದು ಮಂಗ್ಲಿ. ಆದರೆ ತೆಲುಗು ಹಾಡನ್ನು ಹಾಡಿದ್ದು ಆಕೆಯ ಸಹೋದ ಇಂದ್ರವತಿ. ತೆಲುಗು ಹಾಗೂ ಕನ್ನಡ ಮಾತ್ರವಲ್ಲ ಎಲ್ಲಾ ಭಾಷೆಗಳಲ್ಲೂ ಈ ಸಾಂಗ್ ಸೂಪರ್ ಹಿಟ್ ಆಗಿತ್ತು. ಸಿನಿಮಾ ಸಕ್ಸಸ್‌ನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಅಕ್ಕನ ಹಾದಿಯಲ್ಲಿ ಇಂದ್ರವತಿ ಕೂಡ ಒಂದಷ್ಟು ಹಾಡುಗಳನ್ನು ಹಾಡುತ್ತಿದ್ದಾರೆ.

    ಬಳ್ಳಾರಿ ಘಟನೆ ಬಗ್ಗೆ ಸ್ಪಷ್ಟನೆ

    ಬಳ್ಳಾರಿ ಘಟನೆ ಬಗ್ಗೆ ಸ್ಪಷ್ಟನೆ

    ಇತ್ತೀಚೆಗೆ ಮಂಗ್ಲಿ ಬಳ್ಳಾರಿ ಉತ್ಸವಕ್ಕೆ ಹಾಜರಾಗಿದ್ದರು. ಹಾಡು ಹಾಡಿ ನೆರೆದವರನ್ನು ರಂಜಿಸಿದ್ದರು. ಆಕೆಯ ಕಾರಿನ ಗಾಜು ಹೊಡೆದಿದೆ. ಯಾರೋ ಕಿಡಿಗೇಡಿಗಳು ಆಕೆಯ ಮೇಲೆ ದಾಳಿ ಮಾಡಿದ್ದಾರೆ ಅಂತೆಲ್ಲಾ ಸುದ್ದಿ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಆ ಫೋಟೊಗಳು ವೈರಲ್ ಆಗಿತ್ತು. ಆದರೆ ಈ ಬಗ್ಗೆ ಟ್ವಿಟರ್‌ನಲ್ಲಿ ಮಂಗ್ಲಿ ಸ್ಪಷ್ಟನೆ ನೀಡಿದ್ದರು. "ನನಗೆ ಬಳ್ಳಾಗಿ ಕಾರ್ಯಕ್ರಮದ ವೇಳೆ ಯಾವುದೇ ತೊಂದರೆ ಆಗಿಲ್ಲ. ಯಾರು ಕೂಡ ದಾಳಿಗೆ ಯತ್ನಿಸಲಿಲ್ಲ. ನನ್ನ ಕಾರಿನ ಗಾಜು ಒಡೆಯಲಿಲ್ಲ. ಅದೆಲ್ಲಾ ಸುಳ್ಳು ಸುದ್ದಿ. ಕನ್ನಡಿಗರು ನನ್ನನ್ನು ಬಹಳ ಚೆನ್ನಾಗಿ ನೋಡಿಕೊಂಡರು" ಎಂದು ಬರೆದುಕೊಂಡಿದ್ದರು.

    ಕನ್ನಡ ಚಿತ್ರದಲ್ಲಿ ನಾಯಕಿ

    ಕನ್ನಡ ಚಿತ್ರದಲ್ಲಿ ನಾಯಕಿ

    ಗಾಯಕಿಯಾಗಿ ತೆರೆಮರೆಯಲ್ಲಿ ಇದ್ದ ಮಂಗ್ಲಿ ಶೀಘ್ರದಲ್ಲೇ ಬೆಳ್ಳಿತೆರೆಗೆ ಬರುತ್ತಿದ್ದಾರೆ. ಅದು ಕೂಡ ಕನ್ನಡ ಸಿನಿಮಾ ಮೂಲಕ ಎನ್ನುವುದು ವಿಶೇಷ. ಚಕ್ರವರ್ತಿ ಚಂದ್ರಚೂಡ್ ನಿರ್ದೇಶನದ 'ಪಾದರಾಯ' ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿದೆ. ಚಿತ್ರದಲ್ಲಿ ನಿರ್ದೇಶಕ ನಾಗಶೇಖರ್ ಹೀರೊ ಆಗಿ ನಟಿಸುತ್ತಿದ್ದಾರೆ. ಅವರ ಜೊತೆ ಮಂಗ್ಲಿ ತೆರೆ ಹಂಚಿಕೊಳ್ಳಿದ್ದಾರೆ. 'ವಿಕ್ರಾಂತ್ ರೋಣ' ಸಿನಿಮಾ ಖ್ಯಾತಿಯ ಜಾಕ್ ಮಂಜು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ತೆರೆಗೆ ಬರಲಿದೆ.

    English summary
    How much did Mangli pay for each song?. Mangli’s original name is Satyavati. She hails from Ananthapur District, Andhra Pradesh. know more.
    Saturday, January 28, 2023, 11:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X