twitter
    For Quick Alerts
    ALLOW NOTIFICATIONS  
    For Daily Alerts

    Ilaiyaraaja Birthday; ಜ್ಞಾನದೇಶಿಕನ್ ಆಗಿದ್ದವರು ಇಳಯರಾಜ ಆಗಿ ಬದಲಾಗಿದ್ದರ ಹಿಂದಿದೆ ರೋಚಕ ಕಥೆ

    |

    ಸಂಗೀತ ಲೋಕದ ದಿಗ್ಗಜ ಇಳಯರಾಜ ಅವರಿಗೆ ಇಂದು 79ನೇ ವರ್ಷದ ಜನ್ಮದಿನದ ಸಂಭ್ರಮ. ಸಂಗೀತ ಮಾಂತ್ರಿಕನ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಶಿಷ್ಯಂದಿರ ಜೊತೆಗೆ ಬೇರೆ ಬೇರೆ ಭಾಷೆಯ ಚಿತ್ರರಂಗದ ಗಣ್ಯರು ಪ್ರೀತಿಯ ವಿಶ್ ಮಾಡುತ್ತಿದ್ದಾರೆ.

    ಮೂಲತಹ ತಮಿಳುನಾಡಿನವರಾದ ಇಳಯರಾಜ ಕೇವಲ ತಮಿಳು ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಸಿನಿಮಾಗಳಿಗೂ ಸಂಗೀತ ನೀಡುವ ಮೂಲಕ ಇಂದು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಗಳಿಸಿದ್ದಾರೆ. ಸಾವಿರಾರು ಹಾಡುಗಳನ್ನು ಸಂಗೀತಲೋಕಕ್ಕೆ ಕೊಡುಗೆಯಾಗಿ ನೀಡಿರುವ ಇಳಯರಾಜ ಅವರ ಹೆಸರಿನ ಹಿಂದೆ ರೋಚಕವಾದ ಕಥೆಯಿದೆ.

    ಇಳಯರಾಜ ಮೂಲ ಹೆಸರು ಜ್ಞಾನದೇಶಿಕನ್. ಬಳಿಕ ರಾಜ ಆಗಿ ನಂತರ ಇಳಯರಾಜ ಆಗಿ ಪ್ರಸಿದ್ಧಿಗಳಿಸಿದರು. ಅಂದಹಾಗೆ ಇಳಯರಾಜ ಎಂದು ಹೆಸರು ಬಂದಿದ್ದು ಹೇಗೆ? ಮುಂದೆ ಓದಿ..

    ಜ್ಞಾನದೇಶಿಕನ್, ರಾಜ ಬಳಿಕ ಇಳಯರಾಜ

    ಜ್ಞಾನದೇಶಿಕನ್, ರಾಜ ಬಳಿಕ ಇಳಯರಾಜ

    ಇಳಯರಾಜ ತಂದೆ ಶಾಲೆಗೆ ಸೇರಿಸುವಾಗ ಜ್ಞಾನದೇಶಿಕನ್ ಹೆಸರನ್ನು ಬದಲಿಸಿ ರಾಜಯ್ಯ ಎಂದು ಮರು ನಾಮಕರಣ ಮಾಡುತ್ತಾರೆ. ಊರಿನವರೆಲ್ಲ ರಾಸಯ್ಯ ಎಂದು ಕರೆಯಲು ಪ್ರಾರಂಭಿಸುತ್ತಾರೆ. ಬಳಿಕ ಸಂಗೀತ ಗುರುಗಳಾದ ಧನರಾಜ್ ಮಾಸ್ಟರ್ ಬಳಿ ವಿದ್ಯಾರ್ಥಿಯಾಗಿ ಸೇರಿಕೊಳ್ಳುತ್ತಾರೆ. ಅವರು ರಾಜಯ್ಯ ಹೆಸರನ್ನು ರಾಜ ಎಂದು ಬದಲಾಯಿಸುತ್ತಾರೆ. ರಾಜ ಆಗಿಯೇ ಸಂಗೀತ ಲೋಕಕ್ಕೆ ಎಂಟ್ರಿ ಕೊಟ್ಟ ಇಳಿಯರಾಜ ಆಗಿದ್ದು, ನಿರ್ಮಾಪಕರಿಂದ.

    ರಾಜಾ ಹೆಸರಿನ ಜೊತೆ ಇಳಯ ಸೇರಿದ್ದು ಹೇಗೆ

    ರಾಜಾ ಹೆಸರಿನ ಜೊತೆ ಇಳಯ ಸೇರಿದ್ದು ಹೇಗೆ

    'ಅನ್ನಕಿಲಿ' ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡ ಇಳಯರಾಜ ಅವರಿಗೆ ಆ ಚಿತ್ರದ ನಿರ್ಮಾಪಕ ಪಂಚು ಅರುಣಾಚಲಂ ಅವರು ಇಳಯ ಎನ್ನುವ ಹೆಸರನ್ನು ನಾಮಕರಣ ಮಾಡಿದರು. ರಾಜ ಹೆಸರಿನ ಮೊದಲು ಇಳಯ ಸೇರಿಸಿದರು. ಇಳಯ ಎಂದರೆ ಇನ್ನೂ ಕಿರಿಯ ಎಂದರ್ಥ. ಬಳಿಕ ರಾಜ ಇಳಯರಾಜ ಆಗಿ ಖ್ಯಾತಿಗಳಿಸಿದರು.

    10ಸಾವಿರಕ್ಕೂ ಅಧಿಕ ಗೀತೆಗಳಿಗೆ ಸಂಗೀತ

    10ಸಾವಿರಕ್ಕೂ ಅಧಿಕ ಗೀತೆಗಳಿಗೆ ಸಂಗೀತ

    ಇಳಯರಾಜ ತಮಿಳು, ತೆಲುಗು, ಕನ್ನಡ, ಮರಾಠಿ ಸೇರಿದಂತೆ ಸುಮಾರು 10 ಸಾವಿರಕ್ಕೂ ಅಧಿಕ ಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಂಗೀತದಲ್ಲಿ ಅಪಾರ ಪ್ರತಿಭೆ ಹೊಂದಿದ್ದ ಇಳಯರಾಜ ಗಡಿಗೂ ಮೀರಿದ ಸಾಧನೆ ಮಾಡಲು ಸಾಧ್ಯವಾಯಿತು. ಅವರ ಅಗಾಧ ಪ್ರತಿಭೆಯೇ ಅವರನ್ನು ಸಂಗೀತ ಲೋಕದ ರಾಜನನ್ನಾಗಿ ಮಾಡಿದೆ.

    ಇಳಯರಾಜ ಕನ್ನಡ ಹಾಡುಗಳು

    ಇಳಯರಾಜ ಕನ್ನಡ ಹಾಡುಗಳು

    ಕನ್ನಡದಲ್ಲೂ ಅದ್ಭುತ ಹಾಡುಗಳನ್ನು ನೀಡಿದ್ದಾರೆ. ನಮ್ಮೂರ ಮಂದಾರ ಹೂವೆ, ಹೂಮಳೆ, ಪಲ್ಲವಿ ಅನು ಪಲ್ಲವಿ, ಜನ್ಮ ಜನ್ಮದ ಅನುಬಂಧ ಸೇರಿದಂತೆ ಅನೇಕ ಅದ್ಭುತ ಗೀತೆಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಕನ್ನಡ ಗೀತೆಗಳಿಗೆ ಸಂಗೀತ ನೀಡಿದ್ದು ಮಾತ್ರವಲ್ಲ, ಇಳಯರಾಜ ಅದ್ಭುತವಾಗಿ ಕನ್ನಡ ಮಾತನಾಡುತ್ತಾರೆ.

    ಇಳಯರಾಜ ಅವರಿಗೆ ಬಂದ ಪ್ರಶಸ್ತಿಗಳು

    ಇಳಯರಾಜ ಅವರಿಗೆ ಬಂದ ಪ್ರಶಸ್ತಿಗಳು

    ಇಳಯರಾಜ ಅವರ ಸಂಗೀತ ಸಾಧನೆಗೆ ಅಪಾರ ಪ್ರಶಸ್ತಿಗಳು ಹುಡುಕಿ ಬಂದಿವೆ. 5 ರಾಷ್ಟ್ರಪ್ರಶಸ್ತಿ, 2010ರಲ್ಲಿ ಪದ್ಮಭೂಷಣ, 2018ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಅವರ ಮುಡಿಗೇರಿದೆ. ಸದ್ಯ ತಮಿಳುನಾಡಿನಲ್ಲಿ ನೆಲೆಸಿರುವ ಇಳಯರಾಜ ಮನೆಯಲ್ಲೇ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

    ಪುತ್ರನಿಂದ ಪ್ರೀತಿಯ ವಿಶ್

    ಪುತ್ರನಿಂದ ಪ್ರೀತಿಯ ವಿಶ್

    ಇಳಯರಾಜ ಅವರಿಗೆ ಪುತ್ರ ಯುವನ್ ಶಂಕರ್ ರಾಜ ಕೂಡ ಸುಂದರ ವಿಡಿಯೋ ಶೇರ್ ಮಾಡುವ ಮೂಲಕ ಪ್ರೀತಿಯ ವಿಶ್ ಮಾಡಿದ್ದಾರೆ. ಇಳಯರಾಜ ತನ್ನ ಮೊಮ್ಮಕ್ಕಳೊಂದಿಗೆ ಪಿಯಾನೋ ನುಡಿಸುತ್ತಿರುವ ವಿಡಿಯೋ ಶೇರ್ ಮಾಡಿದ್ದಾರೆ. ಚಿಕ್ಕ ಮಗುವಿಗೆ ಪಿಯಾನೋ ಹೇಳಿಕೊಡುತ್ತಿರುವ ಇಳಯರಾಜ ವಿಡಿಯೋ ಶೇರ್ ಮಾಡಿ, 'ಜನ್ಮದಿನದ ಶುಭಾಶಯಗಳು ಅಪ್ಪ' ಎಂದು ಬರೆದುಕೊಂಡಿದ್ದಾರೆ.

    English summary
    Ilaiyaraaja real name is Gnanathesikan. Interesting story about ilayaraja name.
    Wednesday, June 2, 2021, 16:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X