twitter
    For Quick Alerts
    ALLOW NOTIFICATIONS  
    For Daily Alerts

    ಅಂತರಿಕ್ಷದಲ್ಲೂ ಮೊಳಗಲಿದೆ ಇಳಯರಾಜನ ಸಂಗೀತ!

    |

    ಸಂಗೀತ ನಿರ್ದೇಶಕ ಇಳಯರಾಜ ಸಂಗೀತ ಹಾಡು ಕೇಳದವರ ಸಂಖ್ಯೆ ಕಡಿಮೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಿಗೆ ಇಳಯರಾಜ ಸಂಗೀತ ನಿರ್ದೇಶನ ಮಾಡಿದ್ದಾರೆ.

    Recommended Video

    ನನ್ನ ಮಾತು ಕೇಳಲೇ ಇಲ್ಲ ನೀನು ಎಂದ್ರು ಇಳಯರಾಜ | Filmibeat Kannada

    ಇದೀಗ ಇಳಯರಾಜ ಸಂಗೀತ ಆಕಾಶದ ಆಚೆಗೂ ಅನುರಣಿಸಲಿದೆ. ಕೆಲ ವಿದ್ಯಾರ್ಥಿಗಳ ಪ್ರಯತ್ನದ ಫಲವಾಗಿ ಇಳಯರಾಜ ಸಂಗೀತ ನಿರ್ದೇಶಿಸಿರುವ ಹಾಡೊಂದು ಬಾಹ್ಯಾಕಾಶದಲ್ಲಿ ಪ್ರಸಾರವಾಗಲಿದೆ!

    ತಮಿಳಿನ ಕೆಲವು ವಿದ್ಯಾರ್ಥಿಗಳು ಅತ್ಯಂತ ಹಗುರವಾದ ಕೃತಕ ಉಪಗ್ರಹವನ್ನು ತಯಾರಿಸಿದ್ದು ಆ ಉಪಗ್ರಹವನ್ನು ಇಸ್ರೋದ ಸಹಾಯದೊಂದಿಗೆ ಅಂತರಿಕ್ಷಕ್ಕೆ ಹಾರಿ ಬಿಡಲಾಗಿದೆ. ಆ ಉಪಗ್ರಹದಲ್ಲಿ ಇಳಯರಾಜ ಹಾಡನ್ನು ವಿದ್ಯಾರ್ಥಿಗಳು ಅಳವಡಿಸಿದ್ದಾರೆ.

     Ilayarajas Song Will Be Played In Space

    ಇದೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ವಿಶೇಷವಾಗಿ ತಮಿಳು ವಿದ್ಯಾರ್ಥಿಗಳು ಈ ಉಪಗ್ರಹವನ್ನು ಇಸ್ರೊ ನೆರವಿನೊಂದಿಗೆ ಹಾರಿ ಬಿಡಲಿದ್ದು, ಭಾರತದ ವಿವಿಧ ಸಂಸ್ಕೃತಿಕ, ಸಾಮರಸ್ಯದ ಆಧಾರದ ಮೇಲೆ ಉಪಗ್ರಹವನ್ನು ನಿರ್ಮಾಣ ಮಾಡಲಾಗಿದೆ. ಹಾಗೂ ಇಳಯರಾಜ ಹಾಡಿರುವ ಹಾಡನ್ನು ಅದಕ್ಕೆ ಅಳವಡಿಸಲಾಗಿದೆ.

    ಈ ವಿದ್ಯಾರ್ಥಿಗಳು ಇಳಯರಾಜ ಅವರ ಅನುಮತಿಯನ್ನು ಪಡೆದಿದ್ದು, ವಿದ್ಯಾರ್ಥಿಗಳ ಕ್ರಿಯಾಶೀಲತೆ, ಸದುದ್ದೇಶ ಮೆಚ್ಚಿ ಇಳಯರಾಜ ತಮ್ಮ ಹಾಡನ್ನು ಉಚಿತವಾಗಿ ವಿದ್ಯಾರ್ಥಿಗಳಿಗೆ ನೀಡಿದ್ದಾರೆ.

    ಇದೇ ವಿದ್ಯಾರ್ಥಿಗಳು ವಿಶೇಷ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು. ಮೋದಿ ಅವರಿಂದ ಪ್ರಶಂಸೆಗಳನ್ನು ಸಹ ಪಡೆದಿದ್ದಾರೆ ಎನ್ನಲಾಗಿದೆ.

    ಇಳಯರಾಜ ಗಾಯನದ ಯಾವ ಹಾಡು ಅಂತರಿಕ್ಷದಲ್ಲಿ ಪ್ರಸಾರವಾಗಲಿದೆ ಎಂಬುದು ತಿಳಿದು ಬಂದಿಲ್ಲ. ಆದರೆ ದೇಶಪ್ರೇಮ ಹೊಮ್ಮುವ ಹಾಡನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿದ್ದಾರೆ. ಅಂತರಿಕ್ಷದಲ್ಲಿ ವಾಯುವಿಲ್ಲದ ಸ್ಥಿತಿಯಲ್ಲಿ ಹಾಡು ಹೇಗೆ ಪ್ರಸಾರವಾಗಲಿದೆ ಎಂಬುದು ಸಹ ಆಶ್ಚರ್ಯ ಮೂಡಿಸಿದೆ.

    ಇಳಯರಾಜ ಭಾರತದ ಅತ್ಯುತ್ತಮ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಅವರಿಗೆ ವಿದೇಶದಲ್ಲೂ ವಿಶೇಷ ಗೌರವವಿದೆ. ಇಳಯರಾಜ ಅವರನ್ನು ಲಂಡನ್‌ನ ರಾಯಲ್ ಫಿಲ್ಯಾಮೋರಿಕ್ ಆರ್ಕೆಸ್ಟ್ರಾ 'ಮಾಸ್ಟ್ರೊ' ಎಂದು ಕರೆಯುತ್ತದೆ. ತಮಿಳಿನಲ್ಲಿ ಇಳಯರಾಜಗೆ 'ಇಸೈಜ್ಞಾನಿ' ಎಂಬ ಬಿರುದು ನೀಡಲಾಗಿದೆ. ಹೀಗೆಂದರೆ 'ಸಂಗೀತ ಪಂಡಿತ'ನೆಂದು ಅರ್ಥ.

    ಇಳಯರಾಜಗೆ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಎರಡು ಬಾರಿ ಅತ್ಯುತ್ತಮ ಹಿನ್ನೆಲೆ ಸಂಗೀತಕ್ಕೆ ರಾಷ್ಟ್ರಪ್ರಶಸ್ತಿ ದೊರೆತಿದೆ. 2010ರಲ್ಲಿ ಪದ್ಮ ಭೂಷಣ, 2018ರಲ್ಲಿ ಪದ್ಮ ವಿಭೂಷಣ ಗೌರವ ಇಳಯರಾಜಗೆ ನೀಡಲಾಗಿದೆ.

    English summary
    Music Maestro Ilayaraja's song is going to play in space. Some Tamil Nadu students created a lighter satellite they fixed a Ilayaraja's song to the satellite. It will be sent to space on August 15 this year.
    Monday, January 24, 2022, 18:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X