»   » ಇಳಯರಾಜಾ ಯಾಕಿಷ್ಟು ನಿರ್ದಯಿಯಾದರು?

ಇಳಯರಾಜಾ ಯಾಕಿಷ್ಟು ನಿರ್ದಯಿಯಾದರು?

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಚಲನಚಿತ್ರರಂಗದ ಮೇರು ಪರ್ವತ ಇಳಯರಾಜಾ ಅವರ ಹಾಡುಗಳನ್ನು ಕೇಳದ ಕಿವಿಗಳುಂಟೇ? ಟಿವಿ, ಎಫ್ಎಂ ರೇಡಿಯೋಗಳಲ್ಲಿ ಅವರು ರಾಗಸಂಯೋಜನೆ ಮಾಡಿದ ಹಾಡುಗಳನ್ನು ಪ್ರತಿನಿತ್ಯ ಕಿವಿಗೆ ಬೀಳುತ್ತಲೇ ಇರುತ್ತವೆ.

  ಮತ್ತೆಮತ್ತೆ ಕೇಳಬೇಕೆಂಬ ಅವರ ರಾಗಲಹರಿಗೆ ಮರುಳಾಗದವರುಂಟೇ? ಆದರೆ ತಮ್ಮ ಹಾಡುಗಳನ್ನು ಮನಬಂದಂತೆ ಟಿವಿ, ರೇಡಿಯೋ, ಆಡಿಯೋ ಕಂಪನಿಗಳು ಬಳಸಿಕೊಳ್ಳುತ್ತಿರುವ ಬಗ್ಗೆ ಇಳಯರಾಜಾ ರೋಸಿಹೋಗಿದ್ದರು.

  ಈ ಸಂಬಂಧ ಅವರು ಕಳೆದ ವರ್ಷ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ಟ್ಯೂನ್ ಗಳನ್ನು ಅನಧಿಕೃತವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಅವರು ಕೋರ್ಟ್ ಗೆ ಮೊರೆಹೋಗಿದ್ದರು. ಈಗ ಅವರ ಪರವಾಗಿ ಕೋರ್ಟ್ ತೀರ್ಪು ಪ್ರಕಟಿಸಿದೆ.

  Ilayaraja’s songs cannot be used without permission

  ಇನ್ನು ಮುಂದೆ ಇಳಯರಾಜಾ ಅವರ ಟ್ಯೂನ್ ಗಳ ಹಕ್ಕಗಳನ್ನು ಪಡೆದ ಮೇಲೆ ಅದು ಐದು ವರ್ಷಗಳ ಕಾಲ ಜಾರಿಯಲ್ಲಿರುತ್ತದೆ ಎಂದು ನ್ಯಾಯಾಧೀಶರಾದ ಆರ್ ಸುಬ್ಬಯ್ಯ ಅವರು ತೀರ್ಪು ನೀಡಿದ್ದಾರೆ. ಈಗಾಗಲೆ ಅವರ ಹಳೆಯ ಹಾಡುಗಳ ಹಕ್ಕುಗಳನ್ನು ಪಡೆದವರು ಈಗ ಮತ್ತೆ ಇಳಯರಾಜಾ ಹಾಗೂ ನಿರ್ಮಾಪಕರಿಂದ ಪರವಾನಗಿ ಪಡೆಯಬೇಕು.

  ಈ ಹಿನ್ನೆಲೆಯಲ್ಲಿ ಮಾತನಾಡಿರುವ ಇಳಯರಾಜಾ, ಒಂದು ವೇಳೆ ತಮಗೆ ರಾಯಧನ ಸರಿಯಾಗಿ ಸಂಧಾಯವಾಗಿದ್ದರೆ ಇಷ್ಟೊತ್ತಿಗೆ ಬಿಲ್ ಗೇಟ್ಸ್ ಆಗಿಬಿಡುತ್ತಿದ್ದೆ ಎಂದಿದ್ದಾರೆ. ಅವರ ಮಾತಿನಲ್ಲಿ ನಿಜವಾಗಿಯೂ ಅರ್ಥವಿದೆ ಅನ್ನಿಸುತ್ತದೆ. ಏಕೆಂದರೆ, 1970ರ ದಶಕದಿಂದ ಹಾಡುಗಳಿಗೆ ರಾಗಸಂಯೋಜನೆ ಮಾಡುತ್ತಿರುವ ಅವರು ಇದುವರೆಗೂ 4,500 ಹಾಡುಗಳನ್ನು ಸಂಯೋಜಿಸಿದ್ದಾರೆ.

  ಇಳಯರಾಜಾ ಅವರು ಬೇಕಾದರೂ ಬಿಲ್ ಗೇಟ್ಸ್ ಆಗಬಹುದು ಆದರೆ ಬಿಲ್ ಗೇಟ್ಸ್ ಅವರು ಇಳಯರಾಜಾ ಆಗಲು ಸಾಧ್ಯವೇ? ಆರಂಭದ ದಿನಗಳಲ್ಲಿ ನಮ್ಮ ಬಿ.ಕೆ ಸುಮಿತ್ರ ಅವರ ಗಾನಗೊಷ್ಠಿಗಳಲ್ಲಿ ವಾದ್ಯಗಾರರಾಗಿ, ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರಾದ ಜಿ.ಕೆ. ವೆಂಕಟೇಶ್ ಅವರ ಶಿಷ್ಯರಾಗಿ ಬೆಳೆದವರು ಇಳಯರಾಜಾ. ಗೀತ ರಚನೆಕಾರರಾಗಿ ಮತ್ತು ಗಾಯಕರಾಗಿ ಕೂಡಾ ಅವರು ಅಪ್ರತಿಮರು.

  ಇಳಯರಾಜಾ ಅವರು ಕೇಳಿದ್ದರಲ್ಲಿ ಸ್ವಾರ್ಥಕ್ಕಿಂತ ಹೆಚ್ಚಾಗಿ ನ್ಯಾಯವೇ ಇದೆ ಅಲ್ಲವೇ? ಕನ್ನಡದಲ್ಲಿ ಕೂಡಾ ಗೀತಾ, ಜನ್ಮಜನ್ಮದ ಅನುಬಂಧ, ನಮ್ಮೂರ ಮಂದಾರ ಹೂವೇ, ಪಲ್ಲವಿ ಅನುಪಲ್ಲವಿ ಚಿತ್ರಗಳಲ್ಲಿ ಮೂಡಿರುವ ಅವರ ಸಂಗೀತ ಶ್ರೇಷ್ಠಮಟ್ಟದ್ದು. (ಏಜೆನ್ಸೀಸ್)

  English summary
  "The (Madras) High Court has ordered that my songs cannot be downloaded or sold through CDs or any other means. Henceforth, without getting the rights from me none should use my songs," Music Maestro Ilayaraja said.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more