For Quick Alerts
  ALLOW NOTIFICATIONS  
  For Daily Alerts

  ಸ್ವಾತಂತ್ರ್ಯ ದಿನಾಚರಣೆ ವಿಶೇಷ; ದೇಶಭಕ್ತಿ ಸಾರುವ ಕನ್ನಡ ಗೀತೆಗಳನ್ನೊಮ್ಮೆ ಕೇಳಿ

  |

  ಸ್ವಾತಂತ್ರ್ಯ ದಿನಾಚರಣೆಯಂದು ತ್ರಿವರ್ಣ ಧ್ವಜ ಹಾರುವುದನ್ನು ನೋಡುವುದೇ ಒಂದು ಖುಷಿ. ಆ ಸನ್ನಿವೇಶಕ್ಕೆ ತಕ್ಕಂತೆ ಕೆಲವು ದೇಶಭಕ್ತಿ ಗೀತೆಗಳನ್ನು ಕೇಳಿದ್ರೆ ಅದರ ಸಂಭ್ರಮನೇ ಬೇರೆ. ದೇಶಭಕ್ತಿ ಸಾರುವ ಕನ್ನಡ ಗೀತೆಗಳು ಅಂದಾಕ್ಷಣ ಫಟ್ ಅಂತ ಕೆಲವು ಹಾಡುಗಳು ನೆನಪಾಗುತ್ತದೆ. ಈ ಹಾಡುಗಳನ್ನು ಕೇಳಿದ್ರೆ ಅದೇನೋ ಒಂಥರಾ ರೋಮಾಂಚನ. ಮೈ ಜುಂ ಅನ್ನುತ್ತೆ.

  ಸ್ವಾತಂತ್ರ್ಯಕ್ಕಾಗಿ ನಡೆದ ಬಲಿದಾನಗಳು, ಹೋರಾಟಗಳು, ಯುದ್ಧಗಳು ಹಾಗೆ ಕಣ್ಣ ಮುಂದೆ ಬಂದು ಹೋಗುತ್ತೆ. ಕನ್ನಡದಲ್ಲಿ ದೇಶಭಕ್ತಿ ಸಾರುವ ಅನೇಕ ಗೀತೆಗಳಿಗೆ. ಸ್ವಾತಂತ್ರ್ಯ ದಿನಾಚರಣೆಯ ದಿನ ದೇಶಪ್ರೇಮ ಸಾರುವ ಕನ್ನಡ ಗೀತೆಗಳನ್ನು ಒಮ್ಮೆ ನೆನಪು ಮಾಡಿಕೊಳ್ಳೋಣ. ಅಂದಹಾಗೆ ಸಮಯ ಸಿಕ್ಕಾಗ ಈ ಗೀತೆಗಳನ್ನು ಕೇಳುವುದು ಮರೆಯಬೇಡಿ. ಯಾವುದು ಆ ಹಾಡುಗಳು? ಮುಂದೆ ಓದಿ...

  ಭಾರತಾಂಬೆ ನಿನ್ನ ಜನ್ಮ ದಿನ

  ಭಾರತಾಂಬೆ ನಿನ್ನ ಜನ್ಮ ದಿನ

  ಸಾಹಸಸಿಂಹ ವಿಷ್ಣುವರ್ಧನ್ ನಟಿಸಿರುವ ವೀರಪ್ಪ ನಾಯಕ ಚಿತ್ರದಲ್ಲಿ ಬರುವ 'ಭಾರತಾಂಬೆ ನಿನ್ನ ಜನ್ಮ ದಿನ' ಹಾಡು ಮೊದಲು ನೆನಪಾಗುತ್ತೆ. ಈ ಸಿನಿಮಾನೇ ದೇಶಪ್ರೇಮದ ಸುತ್ತ ನಡೆಯುತ್ತೆ. ಅದರಲ್ಲೂ ಈ ಗೀತೆಗೆ ಕೇಳುವಾಗ ಮೈಯೆಲ್ಲ ರೋಮಾಂಚನವಾಗುತ್ತೆ. ಎಸ್ ಪಿ ಬಾಲಸುಬ್ರಹ್ಮಣ್ಯಂ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ರಾಜೇಶ್ ರಾಮನಾಥ್ ಸಂಗೀತ ನೀಡಿದ್ದಾರೆ.

  ಹಿಂದೂಸ್ತಾನ ಗೊತ್ತೇನೋ?

  ಹಿಂದೂಸ್ತಾನ ಗೊತ್ತೇನೋ?

  ವಿಜಯಶಾಂತಿ, ಅಂಬರೀಶ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ವಂದೇ ಮಾತರಂ ಸಿನಿಮಾದ 'ಹಿಂದೂಸ್ತಾನ ಗೊತ್ತೇನೋ.....ಧರ್ಮ ಕಾಯೋ ಹಿಮಾಲಯ....' ಹಾಡು ಭಾರತೀಯರಲ್ಲಿರುವ ದೇಶಭಕ್ತಿಯನ್ನು ಬಡಿದೆಬ್ಬಿಸುತ್ತೆ.

  ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ

  ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿರುವ ಹಗಲವೇಷ ಸಿನಿಮಾದಲ್ಲಿ ಬರುವ ''ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ.....'' ಹಾಡು ದೇಶಭಕ್ತರ ನೆಚ್ಚಿನ ಗೀತೆಗಳಲ್ಲಿ ಒಂದು. ಡಾ ರಾಜ್ ಕುಮಾರ್ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಬರಗೂರು ರಾಮಚಂದ್ರಪ್ಪ ಸಾಹಿತ್ಯ ರಚಿಸಿದ್ದಾರೆ.

  ನಾನು ಕನ್ನಡದ ಕಂದ

  ನಾನು ಕನ್ನಡದ ಕಂದ

  ಶಿವರಾಜ್ ಕುಮಾರ್ ಅಭಿನಯದ ಮತ್ತೊಂದು ಗೀತೆ 'ನಾನು ಕನ್ನಡದ ಕಂದ....'. ಎಕೆ 47 ಚಿತ್ರದ ಈ ಹಾಡು ದೇಶಭಕ್ತಿಯ ಪ್ರತೀಕ ಮೂಡಿಬಂದಿದೆ. ಕೆ.ಜೆ.ಜೇಸುದಾಸ್ ಈ ಹಾಡನ್ನು ಹಾಡಿದ್ದಾರೆ.

  ಸೈನಿಕ ಸಿನಿಮಾದ ಜೈ ಹಿಂದ್

  ಸೈನಿಕ ಸಿನಿಮಾದ ಜೈ ಹಿಂದ್

  ಸಿಪಿ ಯೋಗೇಶ್ವರ್ ನಟನೆಯ ಸೈನಿಕ ಸಿನಿಮಾದ 'ಜೈ ಹಿಂದ್....' ಹಾಡು ನೆನಪಾಗುತ್ತೆ. ಈ ಹಾಡು ಕೇಳುವುದರ ಜೊತೆ ದೃಶ್ಯ ನೋಡಿದ್ರೆ ಇನ್ನು ಚೆನ್ನಾಗಿರುತ್ತದೆ. ದೇಶಭಕ್ತಿ, ದೇಶದ ಸಂಸ್ಕೃತಿ, ದೇಶದ ಚರಿತ್ರೆ ಹೇಳುವ ಇನ್ನು ಹಲವು ಹಾಡುಗಳಿವೆ. ಆದರೆ, ಫಟ್ ಅಂತ ನೆನಪಾಗುವ ಹಿಟ್ ಗೀತೆಗಳನ್ನು ಮಾತ್ರ ಇಲ್ಲಿ ಪಟ್ಟಿ ಮಾಡಲಾಗಿದೆ. ನಿಮಗೆ ನೆನಪಾಗುವ ಇತರೆ ಹಾಡುಗಳನ್ನು ಕಾಮೆಂಟ್ ಮೂಲಕ ತಿಳಿಸಿ.

  English summary
  Independence day Special: Kannada top five patriotic songs list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X