For Quick Alerts
  ALLOW NOTIFICATIONS  
  For Daily Alerts

  'ಜೀವ್ನಾನೇ ನಾಟ್ಕ ಸಾಮಿ' ಹಾಡು ಬಿಡುಗಡೆ ಮಾಡಿದ ವಿಜಯ್ ರಾಘವೇಂದ್ರ

  |

  'ಜೀವ್ನಾನೇ ನಾಟ್ಕ ಸಾಮಿ' ಸಿನಿಮಾದ ಎರಡನೇ ಹಾಡನ್ನು 'ಚಿನ್ನಾರಿ ಮುತ್ತ' ವಿಜಯ್ ರಾಘವೇಂದ್ರ ಬಿಡುಗಡೆ ಮಾಡಿದ್ದು, ಅಕ್ಟೋಬರ್ 30 ರಂದು ಆನಂದ್ ಆಡಿಯೋ ಯ್ಯೂಟ್ಯೂಬ್ ಚಾನಲ್‌ನಲ್ಲಿ ಲಭ್ಯವಾಗಲಿದೆ.

  ''ಕದ್ದು ಮುಚ್ಚಿ ನೋಡಬೇಡ..... ಕನಸೇ ನನ್ನ ಕಾಡಬೇಡ.....'' ಎನ್ನುವ ಈ ಮಾಧುರ್ಯ ಭರಿತ ಹಾಡಿಗೆ ಅತೀಶಯ ಜೈನ್ ರಾಗಸಂಯೋಜನೆ ಮಾಡಿದ್ದು ಶ್ರೀ ಹರ್ಷ ಹಾಡಿದ್ದಾರೆ. ನಿರ್ದೇಶಕ ರಾಜು ಭಂಡಾರಿ ರಾಜಾವರ್ತ ಅವರೇ ಸಾಹಿತ್ಯ ರಚಿಸಿದ್ದಾರೆ.

  ಐಟಿ ಕ್ಷೇತ್ರಕ್ಕೆ ಗುಡ್ ಬೈ ಹೇಳಿ ಬಣ್ಣದಲೋಕದಲ್ಲಿ ಮಿಂಚುತ್ತಿರುವ ವಿನಯ್ ಕಶ್ಯಪ್ ಐಟಿ ಕ್ಷೇತ್ರಕ್ಕೆ ಗುಡ್ ಬೈ ಹೇಳಿ ಬಣ್ಣದಲೋಕದಲ್ಲಿ ಮಿಂಚುತ್ತಿರುವ ವಿನಯ್ ಕಶ್ಯಪ್

  ಇದಕ್ಕೂ ಮುಂಚೆ 'ಜೀವ್ನಾನೇ ನಾಟ್ಕ ಸಾಮಿ' ಚಿತ್ರದ ಮೊದಲ ಹಾಡನ್ನು ಡಾಲಿ ಖ್ಯಾತಿಯ ಧನಂಜಯ್ ರಿಲೀಸ್ ಮಾಡಿದ್ದರು. ಮೂರು ದಿನದ ಮಾರ್ಕೆಟ್....ಎಂಬ ಹಾಡನ್ನು ನವೀನ್ ಸಜ್ಜು ಹಾಡಿದ್ದರು.

  ನಟ ಕಿರಣ್ ರಾಜ್ ಮತ್ತು ಶ್ರೀಹರ್ಷ (ಜೀ ಕನ್ನಡ ವಾಹಿನಿಯ ಸರಿಗಮಪ ಖ್ಯಾತಿ) ಪವಿತ್ರ ಕೋಟ್ಯಾನ್ ಮತ್ತು ಅನಿಕ ರಮ್ಯ ಸೇರಿದಂತೆ ಹಲವರು ಪ್ರಮುಖ ತಾರಾಗಣದಲ್ಲಿ ಕಾಣಿಸಿಕೊಂಡಿದ್ದು, ರಂಗಭೂಮಿ ಹಿನ್ನೆಲೆ ಹೊಂದಿರುವ ರಾಜು ಭಂಡಾರಿ ರಾಜಾವರ್ತ ನಿರ್ದೇಶಿಸಿದ್ದಾರೆ. ಉಮೇಶ್ ಆರ್‌ಬಿ ಅವರ ಸಂಕಲನ ಒಳಗೊಂಡಿದೆ.

  ಯಥಾ ದೃಷ್ಟಿ ತಥಾ ಸೃಷ್ಟಿ ಎಂಬ ಭಗವದ್ಗೀತೆಯ ಸೂಕ್ತಿಯ ಹಿನ್ನೆಲೆಯಲ್ಲಿ ಮೂಡಿಬಂದ ಚಿತ್ರದ ಕಥಾವಸ್ತುವು ಮನರಂಜನೆಯ ಜೊತೆಗೆ ಸಾಮಾಜಿಕ ಕಳಕಳಿ ಸಂದೇಶದಿಂದ ಕೂಡಿದೆ. ಆರ್ಯ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ, ಶ್ರೀಮತಿ ಲಲಿತಾ ರಾಜಶೇಖರ್ ಶಿರಹಟ್ಟಿ ನಿರ್ಮಿಸಿದ್ದು ಬಿಡುಗಡೆಗೆ ಸಿದ್ದವಾಗಿದೆ.

  English summary
  Jeevnane Natka Samy movie second Song released By Vijay Raghavendra on october 20th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X