»   » ಅಮರ ಗಾಯಕನಿಗೆ ಅಂತಿಮಯಾತ್ರೆಯಲ್ಲಿ ಅಗೌರವ

ಅಮರ ಗಾಯಕನಿಗೆ ಅಂತಿಮಯಾತ್ರೆಯಲ್ಲಿ ಅಗೌರವ

By: ಉದಯರವಿ
Subscribe to Filmibeat Kannada

ಭಾರತದ ಸಂಗೀತ ಲೋಕದ ಅಮರ ಗಾಯಕ ಮನ್ನಾ ಡೇ (94) ಅವರ ನಿಧನಕ್ಕೆ ರಾಷ್ಟ್ರದಾದ್ಯಂತ ತೀವ್ರ ಸಂತಾಪ ವ್ಯಕ್ತವಾಗುತ್ತಿದೆ. ಇನ್ನೊಂದು ಕಡೆ ಅವರ ಅಂತಿಮ ದರ್ಶನದ ವೇಳೆ ಅಗೌರವ ತೋರಿದ್ದು ಅವರ ಅಭಿಮಾನಿಗಳನ್ನು ತೀವ್ರ ಅಸಹನೆಗೆ ಗುರಿ ಮಾಡಿತು.

ಅಂತಿಮ ದರ್ಶನಕ್ಕಾಗಿ ಅವರ ಪಾರ್ಥೀವ ಶರೀರವನ್ನು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರೆ ಜಿಟಿಜಿಟಿ ಮಳೆಗೆ ಅವರ ಪಾರ್ಥೀವ ಶರೀರ ಒದ್ದೆಯಾಗಿತ್ತು. ಕಾಫಿನ್ ಬಾಕ್ಸ್ ನಲ್ಲಿಡದೆ ಅವರ ಸ್ಟ್ರೆಚರ್ ನಲ್ಲಿಡಲಾಗಿತ್ತು.

ಮಹಾನ್ ಗಾಯನಕ ಅಂತಿಮ ದರ್ಶನಕ್ಕೆ ಸರಿಯಾದ ವ್ಯವಸ್ಥೆ ಮಾಡಿರಲಿಲ್ಲ. ಈ ಎಲ್ಲಾ ಅವ್ಯವಸ್ಥೆಯನ್ನು ಕಣ್ಣಾರೆ ನೋಡಿದವರು ಪರಿತಪಿಸುವಂತಾಯಿತು. ಇನ್ನೊಂದು ಕಡೆ ಅವರ ಪುತ್ರಿ ಸುಮಿತಾ ಅವರು ಮಾಧ್ಯಮಗಳ ಜೊತೆ ಮಾತನಾಡುತ್ತಾ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಅಸಹನೆ ವ್ಯಕ್ತಪಡಿಸಿದರು.

ಫೋನ್ ಮೂಲಕ ದೀದಿಗೆ ಸುದ್ದಿ

ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾಜರ್ಜಿ ಅವರಿಗೆ ಫೋನ್ ಮೂಲಕ ಡೇ ಅವರ ಸಾವಿನ ಸುದ್ದಿಯನ್ನು ತಿಳಿಸಲಾಯಿತು. ಇದಕ್ಕೆ ದೀದಿ ಸರಿಯಾಗಿ ಸ್ಪಂದಿಸಲಿಲ್ಲ. ಪಾರ್ಥೀವ ಶರೀರವನ್ನು ಕೋಲ್ಕತ್ತಾಗೆ ತರುವಂತೆ ಹೇಳಿದ್ದರು. ಆದರೆ ಅದು ತಮಗೆ ಸಾಧ್ಯವಾಗಲಿಲ್ಲ.

ಸರಿಯಾಗಿ ಸ್ಪಂದಿಸದ ದೀದಿ

ಪಶ್ಚಿಮ ಬಂಗಾಳದಲ್ಲಿ ಮನ್ನಾ ಡೇ ನಿಧಿ ಸ್ಥಾಪಿಸಲಾಗಿದೆ. ಅದರ ಹಣವನ್ನು ಕಳುಹಿಸಿಕೊಡಲು ಕೇಳಿದರೂ ದೀದಿ ಅದಕ್ಕೂ ಸರಿಯಾಗಿ ಸ್ಪಂದಿಸಲಿಲ್ಲ ಎಂದು ತಿಳಿಸಿದರು. ಕಡೆಗೆ ಬಂಗಾಳಿ ವಿಧಿ ವಿಧಾನದಂತೆ ಹೆಬ್ಬಾಳದ ವಿದ್ಯುತ್ ಚಿತಾಗಾರದಲ್ಲಿ ಮನ್ನಾ ಡೇ ಅಂತ್ಯಕ್ರಿಯೆ ನೆರವೇರಿತು.

ಬಾಲಿವುಡ್ ಸ್ಟಾರ್ಸ್ ಬರಲೇ ಇಲ್ಲ

ಬಾಲಿವುಡ್ ಚಿತ್ರರಂಗದ ಸ್ಟಾರ್ ಗಳಂತೂ ಮನ್ನಾ ಡೇ ಅವರ ಅಂತಿಮ ದರ್ಶನಕ್ಕೆ ಬರಲೇ ಇಲ್ಲ. ಕೆಲವರು ಫೋನ್ ಮೂಲಕ ತಮ್ಮ ಸಂತಾಪ ವ್ಯಕ್ತಪಡಿಸಿದರೆ ಇನ್ನೂ ಕೆಲವರು ಟ್ವಿಟ್ಟರ್, ಫೇಸ್ ಬುಕ್ ಗಳಲ್ಲಿ ನೆಪಮಾತ್ರಕ್ಕೆ ಸಂತಾಪ ವ್ಯಕ್ತಪಡಿಸಿ ಕೈತೊಳೆದುಕೊಂಡಿದ್ದಾರೆ. ಮಹಾನ್ ಗಾಯಕನಿಗೆ ತೋರುವ ಗೌರವ ಇದೇನಾ?

ಪ್ರಧಾನಿ ಡಾ.ಮನಮೋಹನ್ ಸಿಂಗ್ ಸಂತಾಪ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ಡಾ.ಮನಮೋಹನ್ ಸಿಂಗ್ ಹಾಗೂ ಅವರ ಸಂಪುಟ ಸಹೋದ್ಯೋಗಿಗಳು, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಸ್ಪೀಕರ್ ಮೀರಾಕುಮಾರ್ ಸಂತಾಪ ಸೂಚಿಸಿದ್ದಾರೆ.

ಅಗಲಿದ ಚೇತನಕ್ಕೆ ಕಂಬನಿ ಮಿಡಿದ ಗಣ್ಯರು

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕರು, ನಿರ್ದೇಶಕರು, ನಟ ನಟಿಯರು, ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್, ಗಾಯಕರಾದ ಆಶಾಭೋಂಸ್ಲೆ, ಲತಾ ಮಂಗೇಶ್ಕರ್, ಕ್ರಿಕೆಟ್ ಹಾಗೂ ಕ್ರೀಡಾ ಕ್ಷೇತ್ರದ ಗಣ್ಯರು ಅಗಲಿದ ಚೇತನಕ್ಕೆ ಕಂಬನಿ ಮಿಡಿದಿದ್ದಾರೆ.

ನನ್ನ ತಂದೆ ಬೆಂಗಳೂರಿನಲ್ಲೇ ವಾಸವಿದ್ದರು

ಮನ್ನಾ ಡೇ ಅವರ ಪುತ್ರಿ ಸುಮಿತಾ ಮಾತನಾಡುತ್ತಾ, "ಕೊಲ್ಕತ್ತಾದಲ್ಲಿ ಜನಿಸಿದರೂ ನನ್ನ ತಂದೆ ಬೆಂಗಳೂರಿನಲ್ಲೇ ವಾಸವಿದ್ದರು. ನಾನು ಅವರೊಂದಿಗೆ ವಾಸವಿದ್ದೆ. ನನ್ನ ತಂದೆಯನ್ನು ತುಂಬಾ ಪ್ರೀತಿಸುತ್ತಿದ್ದೆ..."

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು

ತಂದೆಯವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ರಾತ್ರಿಯೂ ಅವರ ಆರೋಗ್ಯ ವಿಚರಿಸಿದ್ದೆ ಎಂದು ತಿಳಿಸಿದರು.

ಮನ್ನಾ ಡೇ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ

ಮನ್ನಾ ಡೇ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ಶೋಕ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ.

English summary
Chief Minister Siddaramaiah has expressed deep sense of grief over the demise of Plyaback singer Manna Dey (94) on On 24 October 2013. His body will be kept for public viewing to pay tributes at Bangalore's Ravindra Kala Shetra from 10 am to 12 pm.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada