»   » ಸೈಜ್ ಝೀರೋ; ಪ್ರಕಾಶ್ ರೈ ಶರೀರ+ಶಾರೀರಕ್ಕೂ ಕಸರತ್ತು

ಸೈಜ್ ಝೀರೋ; ಪ್ರಕಾಶ್ ರೈ ಶರೀರ+ಶಾರೀರಕ್ಕೂ ಕಸರತ್ತು

Posted By:
Subscribe to Filmibeat Kannada

ಹೀರೋಗಳು ಗಾಯಕರಾಗುತ್ತಿರುವ ಟ್ರೆಂಡ್ ಇಂದು ನಿನ್ನೆಯದ್ದಲ್ಲ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ಕಾಮಿಡಿ ಖಿಲಾಡಿ ಶರಣ್...ಹೀಗೆ ಎಲ್ಲರೂ ಹಾಡು ಹಾಡಿ ಸೈ ಅನಿಸಿಕೊಂಡಿದ್ದಾರೆ.

ಈಗ ಇವರೆಲ್ಲರ ಸಾಲಿಗೆ ಸೇರುತ್ತಿರುವವರು ಕನ್ನಡಿಗ, ಬಹುಭಾಷಾ ಕಲಾವಿದ ಪ್ರಕಾಶ್ ರೈ (ಪ್ರಕಾಶ್ ರಾಜ್). ತಾವು ನಟಿಸುತ್ತಿರುವ ದ್ವಿಭಾಷಾ ಚಿತ್ರ 'ಸೈಜ್ ಝೀರೋ'ಗಾಗಿ ಪ್ರಕಾಶ್ ರೈ ಗಾನ ಸುಧೆ ಹರಿಸಿದ್ದಾರೆ.

Prakash Raj turns singer for Size Zero

ತಮಿಳು ಮತ್ತು ತೆಲುಗಿನಲ್ಲಿ 'ಸೈಜ್ ಝೀರೋ' ಚಿತ್ರ ರೆಡಿಯಾಗುತ್ತಿದೆ. ಮುಖ್ಯ ಭೂಮಿಕೆಯಲ್ಲಿ ಅನುಷ್ಕಾ ಶೆಟ್ಟಿ ಇದ್ದಾರೆ. ಚಿತ್ರದಲ್ಲಿ ಪ್ರಕಾಶ್ ರೈ ತೂಕ ಇಳಿಸಿಕೊಳ್ಳುವ ಸಂಸ್ಥೆಯೊಂದರ ಮುಖ್ಯಸ್ಥರ ಪಾತ್ರ ನಿರ್ವಹಿಸುತ್ತಿದ್ದಾರೆ. ಆ ಸಂಸ್ಥೆಯ ಪ್ರಮೋಷನ್ ಸಲುವಾಗಿ ಬರುವ ಹಾಡಿಗೆ ಪ್ರಕಾಶ್ ರೈ ದನಿಯಾಗಿದ್ದಾರೆ. [ನಟ ಪ್ರಕಾಶ್ ರೈ ಸುದೀರ್ಘ ಕನಸು ಕಡೆಗೂ ನನಸು]

ಈ ಹಾಡು ಪ್ರಕಾಶ್ ರೈ ಕಂಠದಿಂದ ಬಂದ್ರೆ ಚೆನ್ನ ಅಂತ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಹೇಳಿದ್ರಂತೆ. ಅವರ ಸೂಚನೆಯ ಮೇರೆಗೆ ಪ್ರಕಾಶ್ ರೈ ಹಾಡುವುದಕ್ಕೆ ಒಪ್ಪಿಕೊಂಡಿದ್ದಾರೆ. [ತನ್ನ ಬಳಿ ಕೆಲಸ ಮಾಡುವವರಿಗೆ ಅನುಷ್ಕಾ ಭರ್ಜರಿ ಗಿಫ್ಟ್]

Prakash Raj turns singer for Size Zero

ಇಂಟ್ರೆಸ್ಟಿಂಗ್ ಅಂದ್ರೆ, ಒಂದೇ ಟೇಕ್ ನಲ್ಲಿ, ಕೇವಲ ಅರ್ಧಗಂಟೆಯಲ್ಲಿ ಪ್ರಕಾಶ್ ರೈ ಇಡೀ ಹಾಡನ್ನ ಹಾಡಿ ಮುಗಿಸಿದ್ದಾರೆ. ಸದ್ಯಕ್ಕೆ ಹಾಡಿನ ರೆಕಾರ್ಡಿಂಗ್ ಮುಗಿದಿದೆ. ಅದನ್ನ ಕೇಳುವುದಕ್ಕೆ ನೀವು ಕೊಂಚ ಸಮಯ ಕಾಯಲೇಬೇಕು. (ಏಜೆನ್ಸೀಸ್)

English summary
Multilingual Actor Prakash Rai aka Prakash Raj has turned singer for Bilingual film 'Size Zero' under M.M.Keeravani composition. 'Size Zero' features Anushka Shetty in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada