»   » ಕನ್ನಡದಲ್ಲಿ ಮತ್ತೆ ಹಾಡಿದ ಗಾನಕೋಗಿಲೆ ಎಸ್ ಜಾನಕಿ

ಕನ್ನಡದಲ್ಲಿ ಮತ್ತೆ ಹಾಡಿದ ಗಾನಕೋಗಿಲೆ ಎಸ್ ಜಾನಕಿ

Posted By:
Subscribe to Filmibeat Kannada

ಗಾನ ಕೋಗಿಲೆ ಎಸ್ ಜಾನಕಿ ಅವರು ಬಹಳ ವರ್ಷಗಳ ನಂತರ ಕನ್ನಡ ಸಿನಿಮಾದ ಹಾಡಿಗೆ ಧ್ವನಿ ಗೂಡಿಸಿದ್ದಾರೆ. ನಿರ್ದೇಶಕ ಕೆ. ನರೇಂದ್ರ ಬಾಬು ಅವರು ನಿರ್ಮಾಪಕರಾಗಿರುವ 'ಪಲ್ಲಕ್ಕಿ-2' ಸಿನಿಮಾದಲ್ಲಿ ಹೆಸರಾಂತ ಗಾಯಕಿ ಎಸ್ ಜಾನಕಿ ಅವರು ಹಾಡೊಂದನ್ನು ಅಶ್ವಿನಿ ಡಿಜಿಟಲ್ ಸ್ಟುಡಿಯೋದಲ್ಲಿ ಹಾಡಿದ್ದಾರೆ.

"ನಂಬಿದ ಒಲವು ನೀಡಿದ ಮೊದಲ ನೋವಿಗೆ, ಹೃದಯ ನಡುಗಿದೆ, ಪ್ರೀತಿಯ ಸಲುಗೆ ಮೀರಿದ ಅಲೆವ ಮೊಜಿಗೆ ಮನವೆ ಕದಡಿದೆ..." ಮಂಗಳೂರಿನ ಡಾಕ್ಟರ್ ಉಮೇಶ್ ಪಿಲೆಕೂಡೇಲು ಅವರು ರಚಿಸಿರುವ ಈ ಹಾಡಿಗೆ 'ಚಿರು' ಸಿನೆಮಾದ ಖ್ಯಾತಿಯ ಗಿರಿಧರ್ ದಿವಾನ್ ಅವರು ಸಂಗೀತ ಸಂಯೋಜಕರು.

S Janaki sings again in Kannada for Pallakki 2

ಓ ಪ್ರೇಮವೇ, ಪಲ್ಲಕ್ಕಿ ಹಾಗೂ ಯುವ ಸಿನಿಮಾಗಳ ನಿರ್ದೇಶಕ ನರೇಂದ್ರ ಬಾಬು ಅವರು ಈ ಸಿನಿಮಾದ ನಿರ್ದೇಶಕರೂ ಅಲ್ಲದೆ ನಿರ್ಮಾಪಕರು ಕೂಡ. ಪ್ರೈಸ್ ಲಾರ್ಡ್ ಶ್ರೀ ಅಥರ್ವ ಪ್ರಿಯ ಪ್ರೊಡಕ್ಷನ್ ಅಡಿಯಲ್ಲಿ ಈ 'ಪಲ್ಲಕ್ಕಿ 2' ನಿರ್ಮಾಣವಾಗುತ್ತಿದೆ. ಅರುಣ್ ಕುಮಾರ್ ಅವರು ಕೆ ನರೇಂದ್ರ ಬಾಬು ಅವರಿಗೆ ಸಹಾಯ ಒದಗಿಸುತ್ತಿದ್ದಾರೆ.

ಯುವ ಪ್ರತಿಭೆ ವಿಶ್ವ, ಜಿಯಾ ಚೋಪ್ರಾ, ಸಿಮ್ರಾನ್ ಮಿಶ್ರಕಟ್ಟಿ, ಪ್ರಮೋದ್ ಯಧುಪತಿ ಈ ಸಿನಿಮದಿಂದ ಪರಿಚಯ ಆಗುತ್ತಿದ್ದಾರೆ. ಸಂತೋಷ್ ಕುಮಾರ್ ಅವರು ಈ ಸಿನೆಮಾದ ಛಾಯಾಗ್ರಾಹಕರು. (ಒನ್ಇಂಡಿಯಾ ಕನ್ನಡ)

English summary
Playback singer S Janaki sings again in Kannada after a long break in Kannada movie 'Pallakki 2'. Music scores by Giridhar Diwan. Recently the song recording held at Ashwini Recording studio.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada