»   » ಶಿವಣ್ಣನ 'ವಜ್ರಕಾಯ' ಚಿತ್ರಕ್ಕೆ ಶರಣ್ 'ಸ್ಟಾರ್ ಸಿಂಗರ್'

ಶಿವಣ್ಣನ 'ವಜ್ರಕಾಯ' ಚಿತ್ರಕ್ಕೆ ಶರಣ್ 'ಸ್ಟಾರ್ ಸಿಂಗರ್'

Posted By:
Subscribe to Filmibeat Kannada

99 ಚಿತ್ರಗಳಲ್ಲಿ ಅಭಿನಯಿಸಿದ ಬಳಿಕ 100ನೇ ಚಿತ್ರದಲ್ಲಿ ಹೀರೋ ಆಗಿ ಸತತ ಹಿಟ್ ಸಿನಿಮಾಗಳನ್ನ ನೀಡುತ್ತಾ ಬಂದಿರುವ ನಟ ಶರಣ್ ಗೆ ಗಾಂಧಿನಗರದಲ್ಲಿ ಈಗ ಇರುವ ಬೇಡಿಕೆ ಅಷ್ಟಿಷ್ಟಲ್ಲ. ಶರಣ್ ಕಾಲ್ ಶೀಟ್ ಗಾಗಿ ಒಂದ್ಕಡೆ ನಿರ್ಮಾಪಕರು ಕಾಯುತ್ತಿದ್ದರೆ, ಇನ್ನೊಂದ್ಕಡೆ ಸಂಗೀತ ನಿರ್ದೇಶಕರೂ ಕೂಡ ಶರಣ್ ಹಿಂದೆ ಬಿದ್ದಿದ್ದಾರೆ.

ಹೌದು, ಇತ್ತೀಚೆಗಷ್ಟೇ ರಿಲೀಸ್ ಆದ 'ರಾಜ ರಾಜೇಂದ್ರ' ಚಿತ್ರದ ಹಾಡೊಂದರಲ್ಲಿ ಗಾನ ಸುಧೆ ಹರಿಸಿದ ಶರಣ್ ಕಂಠಕ್ಕೆ ಇದೀಗ ಬೇಡಿಕೆ ಬಂದು ಬಿಟ್ಟಿದೆ. ಶರಣ್ ದನಿಯಾಗಿದ್ದ ''ಮಧ್ಯಾಹ್ನ ಕನಸಿನಲ್ಲಿ....'' ಹಾಡು ಸೂಪರ್ ಹಿಟ್ ಆಯ್ತು. ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದ ಶರಣ್ ಈಗ ಶಿವಣ್ಣನ ಕಣ್ಣುಕುಕ್ಕಿದ್ದಾರೆ. [ಮೈಕ್ ಹಿಡಿದ 'ರಾಜ ರಾಜೇಂದ್ರ'ನ ಕಾಲುಗಳು ಗಡಗಡ]


Sharan to sing a song for Shivarajkumar's Vajrakaya

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ 'ವಜ್ರಕಾಯ' ಚಿತ್ರದ ಹಾಡೊಂದಕ್ಕೆ ದನಿಗೂಡಿಸಲಿದ್ದಾರೆ ನಟ ಶರಣ್. ಮೊದಲ ಬಾರಿ ಶಿವಣ್ಣನ ಚಿತ್ರಕ್ಕೆ ಹಾಡುತ್ತಿರುವುದರಿಂದ ನಟ ಶರಣ್ ಫುಲ್ ಜೋಷ್ ನಲ್ಲಿದ್ದಾರೆ.


ಈಗಾಗಲೇ 'ವಜ್ರಕಾಯ' ಚಿತ್ರದ ಒಂದು ಹಾಡಿಗೆ ಕಾಲಿವುಡ್ ನಟ, ರಜನಿಕಾಂತ್ ಅಳಿಯ ಧನುಷ್ ಹಾಡಿದ್ದಾರೆ. ಶಿವಣ್ಣನ ಇಂಟ್ರೊಡಕ್ಷನ್ ಸಾಂಗ್ ಗೆ ಕ್ರೇಜಿ ಸ್ಟಾರ್ ರವಿಚಂದ್ರನ್, ಟಾಲಿವುಡ್ ಮಾಸ್ ಮಹಾರಾಜ ರವಿತೇಜಾ, ತಮಿಳು ನಟ ಶಿವಕಾರ್ತಿಕೇಯನ್ ಸ್ಟೆಪ್ ಹಾಕಿದ್ದರು. ['ವಜ್ರಕಾಯ' ಶಿವಣ್ಣ ಜೊತೆ ರವಿತೇಜಾ ಆಟ ನೋಡಿ...]


Sharan to sing a song for Shivarajkumar's Vajrakaya

ಪ್ರಖ್ಯಾತ ಸ್ಟಾರ್ ಗಳ ಸಂಗಮವಾಗಿರುವ 'ವಜ್ರಕಾಯ' ಚಿತ್ರದಲ್ಲಿ ಲೇಟಾದರೂ, ಲೇಟೆಸ್ಟ್ ಆಗಿ ಎಂಟ್ರಿಕೊಟ್ಟಿದ್ದಾರೆ ನಟ ಶರಣ್. ಮಾರ್ಚ್ 8 ರಂದು ಶರಣ್ ಹಾಡುವ ಹಾಡಿನ ರೆಕಾರ್ಡಿಂಗ್ ನಡೆಯಲಿದೆ. ಮಾರ್ಚ್ 21 ರಂದು 'ವಜ್ರಕಾಯ' ಚಿತ್ರದ ಆಡಿಯೋ ಹೊರತರಲಿದ್ದಾರಂತೆ ನಿರ್ದೇಶಕ ಹರ್ಷ.


'ಭಜರಂಗಿ' ಚಿತ್ರದ ನಂತ್ರ ಪ್ರಸನ್ನ ವೀರಾಂಜಿನೇಯನ ಕೃಪೆಯಿಂದ ನಿರ್ದೇಶಕ ಹರ್ಷ, ಶಿವಣ್ಣನಿಗಾಗಿ 'ವಜ್ರಕಾಯ' ಸಿನಿಮಾ ಮಾಡ್ತಿದ್ದಾರೆ. ಒಂದಲ್ಲಾ ಒಂದು ವಿಶೇಷತೆಗಳಿಂದ ಸದ್ದು ಮಾಡುತ್ತಿರುವ 'ವಜ್ರಕಾಯ' ಈಗ ಶರಣ್ 'ಸ್ಟಾರ್ ಸಿಂಗರ್' ಆಗಿರುವುದರಿಂದ ಮತ್ತೆ ಹೆಡ್ ಲೈನ್ಸ್ ಮಾಡಿದೆ. (ಏಜೆನ್ಸೀಸ್)

English summary
Actor Sharan of Rambo fame is roped into sing a song for Hat-trick Hero Shivarjkumar's 'Vajrakaya' directed by A.Harsha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada