»   » ವರದಕ್ಷಿಣೆ ಕಿರುಕುಳದಿಂದ ಗಾಯಕ ಹೇಮಂತ್ ಖುಲಾಸೆ

ವರದಕ್ಷಿಣೆ ಕಿರುಕುಳದಿಂದ ಗಾಯಕ ಹೇಮಂತ್ ಖುಲಾಸೆ

Posted By:
Subscribe to Filmibeat Kannada
Singer Hemanth
ವರದಕ್ಷಿಣೆ ಕಿರುಕುಳ ಆರೋಪದಿಂದ ಕನ್ನಡ ಚಲನಚಿತ್ರ ಗಾಯಕ ಹೇಮಂತ್ ದೋಷಮುಕ್ತರಾಗಿದ್ದಾರೆ. ಅವರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪವನ್ನು ಅವರ ಪತ್ನಿ ಪ್ರಿಯದರ್ಶಿನಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷಾಧಾರಗಳು ದೊರೆತಿಲ್ಲ ಎಂದು ಕೋರ್ಟ್ ಅವರನ್ನು ದೋಷಮುಕ್ತರನ್ನಾಗಿ ಮಾಡಿದೆ.

2009ರಲ್ಲಿ ಹೇಮಂತ್, ಅವರ ಪೋಷಕರು ಹಾಗೂ ಸಹೋದರಿ ವಿರುದ್ಧ ಪ್ರಿಯದರ್ಶಿನಿ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದರು. ಈಗ ಅವರು ವರದಕ್ಷಿಣೆ ಕಿರುಕುಳ ಆರೋಪದಿಂದ ದೋಷಮುಕ್ತರಾಗಿದ್ದಾರೆ. ಈ ಪ್ರಕರಣ ಹೇಮಂತ್ ಅವರ ವೃತ್ತಿ ಬದುಕಿನ ಮೇಲೂ ಗಂಭೀರ ಪರಿಣಾಮ ಬೀರಿತು.

ಆರೋಪದಿಂದ ಅವರು ಹೊರಬರಲು ಸಾಕಷ್ಟು ಪ್ರಯತ್ನಿಸಿ ಕಡೆಗೆ ಗೆದ್ದು ಬಂದಿದ್ದಾರೆ.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ಗಿರಿನಗರ ಪೊಲೀಸರು 'ಬಿ' ರಿಪೋರ್ಟ್ ನ್ನು ಕೋರ್ಟ್ ಗೆ ಸಲ್ಲಿಸಿದ್ದಾರೆ.

ಸದ್ಯಕ್ಕೆ ಕನ್ನಡದಲ್ಲಿ ಹೇಮಂತ್ ಬಲು ಬೇಡಿಕೆಯಲ್ಲಿರುವ ಗಾಯಕ. ಪ್ರೀತ್ಸೆ ಪ್ರೀತ್ಸೆ ಹಾಡಿನ ನಂತರ ಹೇಮಂತ್ ಜನಪ್ರಿಯರಾಗಿದ್ದರು. ಇದುವರೆಗೂ ಕನ್ನಡದಲ್ಲಿ ಸಾವಿರಕ್ಕೂಹೆಚ್ಚು ಹಾಡುಗಳು ಹೇಮಂತ್ ಅವರ ಕಂಠಸಿರಿಯಲ್ಲಿ ಹೊರಹೊಮ್ಮಿವೆ. (ಒನ್ಇಂಡಿಯಾ ಕನ್ನಡ)

English summary
Kannada films popular playback singer Hemanth clears dowry harassment complaint filed by his wife Priyadarshini. The police have registered a B Report in the case and filed the same to court, which means that there is no evidence in the dowry case.
Please Wait while comments are loading...