»   » ಲಿರಿಕ್ಸ್ ಬರೆಯೋಕೆ 2 ಕೋಟಿ ಖರ್ಚು ಮಾಡಿದ ಟೆಕ್ಕಿ

ಲಿರಿಕ್ಸ್ ಬರೆಯೋಕೆ 2 ಕೋಟಿ ಖರ್ಚು ಮಾಡಿದ ಟೆಕ್ಕಿ

Posted By: ಜೀವನರಸಿಕ
Subscribe to Filmibeat Kannada

ಅವರೊಬ್ಬರು ಜವಳಿನಾಡು ದಾವಣಗೆರೆಯ ಸಾಫ್ಟ್ ವೇರ್ ಎಂಜಿನಿಯರ್. ಅವರಿಗೆ ಸಾಹಿತ್ಯ ಅಂದ್ರೆ ಅತಿಯಾದ ಆಸಕ್ತಿ. ಆಸಕ್ತಿ ಮಾತ್ರವಲ್ಲ ಸಾಹಿತ್ಯದಲ್ಲಿ ಆ ಶಕ್ತಿನೂ ಇತ್ತು. ಆಸಕ್ತಿ ಆ ಶಕ್ತಿ ಸೇರಿದ್ರೆ ತಡೆಯೋ ಗಂಡು ಯಾರು ಅಂತ ಆರು ವರ್ಷ ಕನ್ನಡ ಚಿತ್ರರಂಗದ ಜೊತೆ ಸುತ್ತಿದ್ರು. ಲಿರಿಕ್ಸ್ ಬರೀತೀನಿ ಅಂದ್ರು.

ಸಿನಿಮಾ ಸಾಹಿತ್ಯ ಬರೆಯೋದು ಅಂದ್ರೆ ಸುಮ್ನೇನಾ ಅದಕ್ಕೂ ಬ್ಯಾಗ್ರೌಂಡ್, ಒಂದಿಷ್ಟು ನೇಮು ಇಲ್ಲದಿದ್ರೆ ಗಾಡ್ ಫಾದರ್ ಯಾವ್ದಾದ್ರೂ ಬೇಕು. ಅದ್ಯಾವುದೂ ಈ ಎಂಜಿನಿಯರ್ ಹತ್ತಿರ ಇರ್ಲಿಲ್ಲ. ಆದರೆ ಒಂದು ಖಂಡಿತಾ ಇತ್ತು. ಅದು ಸಿನಿಮಾ ಸಾಹಿತ್ಯ ಬರೆಯೋ ತಾಕತ್ತು. [ಸಿಡಿ ರೂಪದಲ್ಲಿ ಪಿ ಕಾಳಿಂಗರಾಯರ ಹಾಡುಗಳು]


ಆದ್ರೆ ಅದನ್ನ ಕೇಳೋ ಸಮಯ, ಬರೀತಾರೋ ಇಲ್ವೋ ಅಂತ ಪರೀಕ್ಷೆ ಮಾಡೋ ತಾಳ್ಮೆ, ಸದಾ ಸಿನಿಮಾ ಜೊತೆ ಓಡೋ ಸಂಗೀತ ನಿರ್ದೇಶಕರಿಗಿರಲಿಲ್ಲ. ಆದ್ರೆ ಆ ನಿರ್ದೇಶಕರು ಪ್ರಯತ್ನ ಬಿಡಲಿಲ್ಲ. ಸಿನಿಮಾಗೆ ಲಿರಿಕ್ಸ್ ಬರೆದೇಬಿಟ್ರು ಈಗ ಲಿರಿಕ್ಸ್ ಸೂಪರ್ ಅನ್ನಿಸಿಕೊಂಡಿದೆ. ಅವ್ರ ಹಾಡಿನ ಸಿಡಿಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಸೇಲ್ ಆಗ್ತಿವೆ. ಈ ಚಿತ್ರಕ್ಕೆ ಸಂಗೀತ ಸತೀಶ್ ಆರ್ಯನ್.

ಅಂದಹಾಗೆ ಆ ಸಿನಿಮಾ ಹೆಸ್ರು 'ಈ ದಿಲ್ ಹೇಳಿದೆ ನೀ ಬೇಕಂತ'. ಆ ಸಾಫ್ಟ್ ವೇರ್ ಎಂಜಿನಿಯರ್ ಹೆಸರು ಎಸ್. ಶ್ರೀಧರ್ (ಸಾಯಿಕೃಷ್ಣ ಎಂಟರ್ ಪ್ರೈಸಸ್). ಚಿತ್ರದಲ್ಲಿನ ಏಳು ಹಾಡುಗಳನ್ನು ಅವರೇ ಬರೆದಿದ್ದಾರೆ. ತಾವೇ ಸಿನಿಮಾ ಮಾಡಿದ್ರು ಈಗ ತಾವೇ ಬರೆದ ಲಿರಿಕ್ಸ್ ಕೇಳಿ ಖುಷಿಯಾಗಿದ್ದಾರೆ. ಸಂಗೀತ ಪ್ರಿಯರು ಫುಲ್ ಥ್ರಿಲ್ಲಾಗಿದ್ದಾರೆ.

ಕೆ.ಟಿ.ಎಂ ಶ್ರೀನಿವಾಸ ಆಕ್ಷನ್ ಕಟ್ ಹೇಳಿರುವ ಚಿತ್ರದ ಪಾತ್ರವರ್ಗದಲ್ಲಿ ಅವಿನಾಶ್ ನರಸಿಂಹರಾಜು, ಶ್ರೀ ಶ್ರುತಿ, ಸುರೇಶ್ ಮಂಗಳೂರು, ವಿದ್ಯಾ ಮೂರ್ತಿ, ನಾಗೇಂದ್ರ ಶಾ, ಕುಮುದಾ ಹಾಗೂ ಮಿತ್ರ ಮುಂತಾದವರಿದ್ದಾರೆ. ಹೊಸಬರ ರೊಮ್ಯಾಂಟಿಕ್ ಚಿತ್ರ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದೆ.

English summary
A Software Engineer S Sridhar is now became a lyricist in Sandalwood. He written seven songs in upcoming Kannada romantic movie 'Ee Dil Helidhe Ni Bekantha', all songs becomes popular number. S. Sridhara is also produced the movie under Sai Krishna Enterprises.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada