»   » ಸವಾರಿ 2 ಸ್ಪರ್ಧೆಗೆಲ್ಲಿ, ತಾರೆಗಳ ಜತೆ ಡಿನ್ನರ್ ಮಾಡಿ

ಸವಾರಿ 2 ಸ್ಪರ್ಧೆಗೆಲ್ಲಿ, ತಾರೆಗಳ ಜತೆ ಡಿನ್ನರ್ ಮಾಡಿ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಹುಟ್ಟುಹಾಕಿದ ನಿರ್ದೇಶಕ ಜೇಕಬ್ ವರ್ಗೀಸ್ ಅವರ ನಿರ್ಮಾಣ ಕಮ್ ನಿರ್ದೇಶನದ ಹೊಸ ಚಿತ್ರ ಸವಾರಿ -2 ಈಗ ವಿಭಿನ್ನ ರೀತಿಯ ಪ್ರಚಾರ ಕಾರ್ಯ ಆರಂಭಿಸಿದೆ. ಸವಾರಿ 2 ಚಿತ್ರದ ಮ್ಯೂಸಿಕ್ ವಿಡಿಯೋಗಳನ್ನು ಅನಾವರಣಗೊಳಿಸಿದ್ದು, ವಿಡಿಯೋಗಳನ್ನು ಆಧಾರವಾಗಿಟ್ಟುಕೊಂಡು ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯಲ್ಲಿ ಗೆದ್ದವರಿಗೆ ಭರಪೂರ ಉಡುಗೊರೆ, ಕೊಡುಗೆಗಳನ್ನು ಚಿತ್ರತಂಡ ನೀಡುತ್ತಿದೆ.

ಸವಾರಿ 2 ಚಿತ್ರದಲ್ಲಿ ಲೂಸಿಯಾ ಖ್ಯಾತಿಯ ಶ್ರುತಿ ನಾಯಕಿಯಾಗಿದ್ದರೆ ಶ್ರೀನಗರ ಕಿಟ್ಟಿ ಪ್ರಧಾನ ಪಾತ್ರದಲ್ಲಿದ್ದಾರೆ. ಅಬ್ಬಾಸ್, ಗಿರೀಶ್ ಕಾರ್ನಾಡ್, ಸಾಧು ಕೋಕಿಲ, ಕರಣ್ ರಾವ್ ಮುಂತಾದವರು ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪೋಸ್ಟರ್ ಬಿಡುಗಡೆಯಾಗಿ ಸದ್ದು ಮಾಡಿತ್ತು. ಈಗ ಚಿತ್ರದ ಮ್ಯೂಸಿಕ್ ವಿಡಿಯೋಗಳು ಸದ್ದು ಮಾಡುತ್ತಿವೆ. ಒಟ್ಟು ಮೂರು ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ.

ಈ ವಿಡಿಯೋಗಳನ್ನು ನೋಡಿ ಯಾವ ಯಾವ ತಾಣಗಳಲ್ಲಿ ಆ ಹಾಡನ್ನು ಚಿತ್ರೀಕರಿಸಿದ್ದಾರೆ ಎಂದು ಎಸ್ ಎಂಎಸ್ ಮಾಡಿದರೆ ಸಾಕು ಜಾಕಪಟ್ ಹೊಡೆಯಬಹುದು. ಸವಾರಿ 2 ಸ್ಪರ್ಧೆ ವಿವರ ಹಾಗೂ ಮೂರು ಮ್ಯೂಸಿಕ್ ವಿಡಿಯೋ ತುಣುಕುಗಳನ್ನು ಇಲ್ಲಿ ನೀಡಲಾಗಿದೆ. ತಪ್ಪದೇ ನೋಡಿ...

ಸವಾರಿ 2 ಚಿತ್ರದ ಕಥಾ ಸಾರಾಂಶ

ಮೂವರು ರಗಳೆ ವ್ಯಕ್ತಿಗಳು ಜೀವನದ ಒಂದು ಘಟ್ಟದಲ್ಲಿ ಒಂದು ಕಡೆ ಭೇಟಿಯಾಗುತ್ತದೆ ನಂತರ ಊಹಾತೀತ ಸಾಹಸ ಯಾತ್ರೆಗೆ ಮೂವರು ದೂಡಲ್ಪಡುತ್ತಾರೆ. ಜೀವನದ ನೈಜ ಘಟನಾವಳಿಗಳು ಅವರ ಬಗ್ಗೆ ಅವರಿಗೆ ಅರಿವು ಮೂಡುವಂತೆ ಮಾಡುತ್ತದೆ. ರಾಜ್ಯದ ಅದ್ಭುತ ಲೋಕೇಷನ್ ಗಳಲ್ಲಿ ನಗು, ಅಳು, ಕೋಪ, ರಹಸ್ಯ, ಭಾವನೆಗಳ ಪಯಣ ಎಳೆ ಎಳೆಯಾಗಿ ಅನಾವರಣಗೊಳ್ಳುತ್ತಾ ಹೋಗುತ್ತದೆ.

ಸ್ಪರ್ಧೆವಿವರ, ಜಾಕ್ ಪಾಟ್ ಬಹುಮಾನಗಳು

ಹಾಡುಗಳನ್ನು ನೋಡಿದ ಮೇಲೆ ಸ್ಥಳಗಳನ್ನು ಗುರುತಿಸಿ ನಂತರ ಕೆಳಕಂಡಂತೆ ಎಸ್ ಎಂಎಸ್ ಮಾಡಿ
SMS SAVR ನಿಮ್ಮ ಉತ್ತರ
ಉದಾ: SAVR ಉತ್ತರ 1,ಉತ್ತರ 2,ಉತ್ತರ 3 ಕೀ ಮಾಡಿ 56060ಗೆ ಸಂದೇಶ ಕಳಿಸಿ

ಬಹುಮಾನ: ಚಿತ್ರದ ತಾರೆಗಳ ಜತೆ ಡಿನ್ನರ್, ನಮ್ರತಾ ಜಿ ವಿನ್ಯಾಸದ ವಸ್ತ್ರಗಳು, ವೋಡಾಫೋನ್ ಉಚಿತ ಸಿಮ್
* ಸವಾರಿ 2 ಪ್ರಿಮಿಯರ್ ಟಿಕೆಟ್, ಆಡಿಯೋ ಸಿಡಿ, ಸ್ಮಾರ್ಟ್ ಫೋನ್

ಸಿಂಪಲ್ ಆಗಿದ್ದೆ ಹಾಡು ನೋಡಿ

ಸವಾರಿ 2 ಚಿತ್ರದ ಸಿಂಪಲ್ ಆಗಿದ್ದೆ ಹಾಡು ನೋಡಿ, ಲೋಕೆಷನ್ ಗುರುತಿಸಿ ಎಸ್ ಎಂಎಸ್ ಮಾಡಿ

ಸವಾರಿ 2 ಚಿತ್ರದ ನಿನ್ನ ದನಿಗಾಗಿ

ಸವಾರಿ 2 ಚಿತ್ರದ ನಿನ್ನ ದನಿಗಾಗಿ ಹಾಡು ನೋಡಿ, ಲೋಕೆಷನ್ ಗುರುತಿಸಿ ಎಸ್ ಎಂಎಸ್ ಮಾಡಿ

ಸವಾರಿ 2 ಚಿತ್ರದ ಎಲ್ಲೋ ಮರೆಯಾಗಿ

ಸವಾರಿ 2 ಚಿತ್ರದ ಎಲ್ಲೋ ಮರೆಯಾಗಿ ಹಾಡು ನೋಡಿ, ಲೋಕೆಷನ್ ಗುರುತಿಸಿ ಎಸ್ ಎಂಎಸ್ ಮಾಡಿ

ಸವಾರಿ 2 ಟೀಸರ್ ನೋಡಿ

ಬದುಕು ನಾಲ್ಕೆ ದಿನ ಕದಿಯುವ ಖುಷಿಯ ನಾಲ್ಕು ಕ್ಷಣ ಎಂಬ ಸಾಲುಗಳನ್ನು ಹೊಂದಿರುವ ಸವಾರಿ 2 ಹಾಡುಗಳು ಮಣಿಕಾಂತ್ ಕದ್ರಿ ಅವರ ಸ್ವರ ಸಂಯೋಜನೆಯೊಂದಿಗೆ ಭರವಸೆಯ ಆಲ್ಬಂ ಆಗಿ ಹೊರಹೊಮ್ಮಿದೆ.

English summary
Watch Savaari 2 music videos enter the Savaari 2 contest and meet Savaari 2 Kannada movie stars. Savaari Kananda film team has released three music videos and asked fans to identify as many locations the song were shot at, winner will get a dinner with stars and premier show tickets
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada