twitter
    For Quick Alerts
    ALLOW NOTIFICATIONS  
    For Daily Alerts

    ರಹಮಾನ್ ಎಂದು ಹಿಂದೂ ಜ್ಯೋತಿಷಿ ಹೆಸರಿಟ್ಟಿದ್ದೇಕೆ? ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಸಂಗೀತ ಮಾಂತ್ರಿಕನ ಕಥೆ

    By ಫಿಲ್ಮ್ ಡೆಸ್ಕ್
    |

    ಭಾರತೀಯ ಸಿನಿಮಾರಂಗದ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಆಸ್ಕರ್ ಪ್ರಶಸ್ತಿ ಪುರಸ್ಕೃತ ಎ.ಆರ್ ರಹಮಾನ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 54ನೇ ವಸಂತಕ್ಕೆ ಕಾಲಿಟ್ಟಿರುವ ಸಂಗೀತ ಮಾಂತ್ರಿಕನಿಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.

    ಟ್ವಿಟ್ಟರ್ ನಲ್ಲಿ Happybirthdayarrahman ಎಂಬ ಹ್ಯಾಷ್ ಟ್ಯಾಗ್ ಕ್ರಿಯೆಟ್ ಮಾಡಿದ್ದು, ಅದು ಟ್ರೆಂಡ್ ಆಗಿದೆ. ಕಾಲಿವುಡ್, ಬಾಲಿವುಡ್ ಮತ್ತು ಹಾಲಿವುಡ್ ವರೆಗೂ ಸಂಗೀತ ಸುದೆ ಹರಿಸುತ್ತಾ ಹೊಸ ಅಲೆ ಸೃಷ್ಟಿಸಿದವರು. ಇಂದು ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ಎ ಆರ್ ರಹಮಾನ್ ಅವರ ಪಯಣ ಅಷ್ಟು ಸುಲಭದ್ದಾಗಿರಲಿಲ್ಲ.

    ಎ ಆರ್ ರಹಮಾನ್ ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದಿರುವ ವಿಚಾರ ಇಂದಿಗೂ ಚರ್ಚೆಯ ವಿಷಯವಾಗಿದೆ. ದಿಲೀಪ್ ಕುಮಾರ್ ಆಗಿದ್ದವರು ಎ ಆರ್ ರಹಮಾನ್ ಆಗಿ ಬದಲಾದ ಬಗ್ಗೆ ಅನೇಕರಿಗೆ ಗೊತ್ತಿರಬಹುದು. ಎಆರ್ ರಹಮಾನ್, ತಂದೆಯ ಸಾವಿನ ಬಳಿಕ ಇಡೀ ಕುಟುಂಬ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುತ್ತಾರೆ.

    ತಂದೆ ಸಾವಿನ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರ

    ತಂದೆ ಸಾವಿನ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರ

    ರಹಮಾನ್ ತಂದೆ, ಸಂಗೀತ ನಿರ್ದೇಶಕ ಆರ್ ಕೆ ಶೇಖರ್ ಪುತ್ರನ ಮೊದಲ ಸಂಗೀತ ನಿರ್ದೇಶನದ ಸಿನಿಮಾದ ರೋಜಾ ಬಿಡುಗೆಯಾಗುವ ಸ್ವಲ್ಪ ಸಮಯದ ಮೊದಲು ನಿಧನರಾದರು. ರಹಮಾನ್ ತಂದೆ ಶೇಖರ್ ಅವರ ಅಕಾಲಿಕ ಮರಣ, ಆರ್ಥಿಕ ಸಂಕಷ್ಟ ಜೊತೆಗೆ ನಾಲ್ಕು ಮಕ್ಕಳನ್ನು ಸಾಕುವುದು ತುಂಬಾ ಕಷ್ಟವಾಗಿತ್ತು.

    ಸೂಫಿ ಸಂತರ ಜೊತೆ ಉತ್ತಮ ಒಡನಾಟ

    ಸೂಫಿ ಸಂತರ ಜೊತೆ ಉತ್ತಮ ಒಡನಾಟ

    ಆಧ್ಯಾತ್ಮಿಕದ ಕಡೆ ಹೆಚ್ಚು ಒಲವು ಹೊಂದಿದ್ದ ರಹಮಾನ್ ತಾಯಿ ಸೂಫಿ ಸಂತ ಮತ್ತು ಪೀರ್ ಕರಿಮುಲ್ಲಾ ಷಾ ಖಾದ್ರಿಯನ್ನು ಭೇಟಿಯಾಗಿ, ಅವರಿಂದ ಅಪಾರ ಸಹಾಯ ಪಡೆಯುತ್ತಾರೆ. ಇಸ್ಲಾಂ ಧರ್ಮದಿಂದ ಪ್ರೇರೇಪಿತರಾಗಿದ್ದ ರಹಮಾನ್ ಕುಟುಂಬ ಬಳಿಕ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುತ್ತಾರೆ.

    ಮತಾಂತರ ಆಗಲು ಯಾರು ಬಲವಂತ ಮಾಡಿಲ್ಲ

    ಮತಾಂತರ ಆಗಲು ಯಾರು ಬಲವಂತ ಮಾಡಿಲ್ಲ

    ಮತಾಂತರ ಆಗಲು ಯಾರಾದರೂ ಬಲವಂತ ಮಾಡಿದ್ದಾರಾ ಎಂದು ಈ ಹಿಂದೆ ಕೇಳಿದ್ದ ಪ್ರಶ್ನೆಗೆ ಉತ್ತರ ನೀಡಿದ್ದ ರಹಮಾನ್, 'ಮತಾಂತರ ಗೊಳ್ಳಲು ಯಾರು ಒತ್ತಾಯ ಮಾಡಿಲ್ಲ. ಅದು ನಿಮ್ಮ ಹೃದಯದಿಂದ ಬಂದರೆ ಮಾತ್ರ ನೀವು ಅನುಸರಿಸಿ' ಎಂದು ಹೇಳಿದ್ದರು.

    ಹಿಂದೂ ಜ್ಯೋತಿಷಿಯೊಬ್ಬರು ನೀಡಿದ ಹೆಸರು

    ಹಿಂದೂ ಜ್ಯೋತಿಷಿಯೊಬ್ಬರು ನೀಡಿದ ಹೆಸರು

    ಇಸ್ಲಾಂ ಧರ್ಮದ ಹಾದಿಯಲ್ಲಿ ಸಾಗುವ ಸ್ವಲ್ಪ ಸಮಯದ ಮೊದಲು ರಹಮಾನ್ ತಾಯಿ ಮಗಳ ಮದುವೆ ಮಾಡಲು ಜ್ಯೋತಿಷಿಯೊಬ್ಬರ ಬಳಿ ಹೋಗುತ್ತಾರೆ. ರಹಮಾನ್ ತಂಗಿಯ ಜಾತಕವನ್ನು ಜ್ಯೋತಿಷಿ ಬಳಿ ನೀಡುತ್ತಾರೆ. ಅದೇ ಸಮಯದಲ್ಲಿ ರಹಮಾನ್ ಸಹ ತನ್ನ ಹೆಸರನ್ನು ಬದಲಾಯಿಸಿಕೊಳ್ಳುವ ಬಯಕೆಯಲ್ಲಿದ್ದರು. ಮತಾಂತರದ ಬಗ್ಗೆ ತಿಳಿದ ಜ್ಯೋತಿಷಿ ತುಂಬಾ ಆಸಕ್ತಿದಾಯಕವಾಗಿದೆ ಎಂದು ಹೇಳಿ, ಎರಡು ಹೆಸರನ್ನು ಸೂಚಿಸುತ್ತಾರೆ. ಅಬ್ದುಲ್ ರಹಮಾನ್ ಮತ್ತು ಅಬ್ದುಲ್ ರಹೀಮ್ ಎನ್ನುವ ಎರಡು ಹೆಸರು ನೀಡಿದರು. ಬಳಿಕ ರಹಮಾನ್ ಹೆಸರನ್ನು ಆಯ್ಕೆ ಮಾಡಿಕೊಂಡಿರುವುದಾಗಿ ರಹಮಾನ್ ಹೇಳಿದ್ದಾರೆ.

    ಧಾರ್ಮಿಕ ನಂಬಿಕೆಗಳನ್ನು ಬಲವಂತವಾಗಿ ಹೇರಬಾರದು

    ಧಾರ್ಮಿಕ ನಂಬಿಕೆಗಳನ್ನು ಬಲವಂತವಾಗಿ ಹೇರಬಾರದು

    ರಹಮಾನ್ ತನ್ನ ಧಾರ್ಮಿಕ ನಂಬಿಕೆಗಳನ್ನು ಇತರರ ಮೇಲೆ ಹೇರುವುದನ್ನು ನಂಬುವುದಿಲಿಲ್ಲ. ಈ ಹಿಂದೆ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶದಲ್ಲಿ ರಹಮಾನ್, ನೀವು ಏನನ್ನು ಬಲವಂತವಾಗಿ ಹೇರಲು ಸಾಧ್ಯವಿಲ್ಲ. ನಿಮ್ಮ ಮಗ ಅಥವಾ ಮಗಳು ಇತಿಹಾಸವನ್ನು ತೆಗೆದುಕೊಳ್ಳಬೇಡ ಅದು ಬೋರಿಂಗ್. ಅರ್ಥಶಾಸ್ತ್ರ ಅಥವಾ ವಿಜ್ಞಾನವನ್ನು ತೆಗೆದುಕೊಳ್ಳಿ ಎನ್ನಬಾರದು. ಇದು ಅವರ ವೈಯಕ್ತಿಕ ಆಯ್ಕೆಯಾಗಿದೆ' ಎಂದಿದ್ದಾರೆ.

    ಮತಾಂತರ ಗೊಳ್ಳುವುದರಿಂದ ಯಶಸ್ಸು ಸಿಗುತ್ತಾ?

    ಮತಾಂತರ ಗೊಳ್ಳುವುದರಿಂದ ಯಶಸ್ಸು ಸಿಗುತ್ತಾ?

    'ಇಸ್ಲಾಂಗೆ ಮತಾಂತರಗೊಳ್ಳುವುದರಿಂದ ಯಶಸ್ಸಾಗುತ್ತೀರಾ ಎಂದು ಅನೇಕರು ಕೇಳುತ್ತಾರೆ. ಇದು ಇಸ್ಲಾಂಗೆ ಮತಾಂತರಗೊಳ್ಳುವುದು ಅಲ್ಲ. ಅಧ್ಯಾತ್ಮದ ಗುರುಗಳು ಹಾಗೂ ಸೂಫಿ ಶಿಕ್ಷಕರು ನನಗೆ ಮತ್ತು ನನ್ನ ತಾಯಿಗೆ ಬಹಳ ಕಲಿಸಿದ್ದಾರೆ. ಪ್ರತಿಯೊಂದು ನಂಬಿಕೆಯಲ್ಲೂ ವಿಶೇಷ ವಿಷಯಗಳಿವೆ. ನಾವು ಇದನ್ನ ಆಯ್ಕೆ ಮಾಡಿಕೊಂಡೆವು ಮತ್ತು ಅದನ್ನೇ ಪಾಲಿಸುಕೊಂಡು ಬರ್ತಿದ್ದೇವೆ' ಎಂದಿದ್ದಾರೆ.

    English summary
    Why did AR Rahman converted to Islam from Hindu . rasnformation of Dilip Kumar into AR Rahman.
    Wednesday, January 6, 2021, 13:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X