ಬಾಕ್ಸಾಫೀಸ್ ಕಿಂಗ್ ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್ ಅಭಿನಯದ 'ಜಾಕಿ' ಚಿತ್ರ ಅರ್ಧ ಶತಕ ಬಾರಿಸಿದೆ. ಪೂರ್ಣಿಮಾ ಎಂಟರ್‌ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾದ ಈ ಚಿತ್ರ ರಾಜ್ಯದಾದ್ಯಂತ 65 ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಕ್ಸಾಫೀಸ್ ಗಳಿಕೆಯಲ್ಲಿ ಪುನೀತ್ ಪವರ್ ಮತ್ತೊಮ್ಮೆ ಸಾಬೀತಾಗಿದೆ.
'ಮುಂಗಾರು ಮಳೆ' ಚಿತ್ರ 15 ವಾರಗಳಲ್ಲಿ ಗಳಿಸಿದ್ದನ್ನು 'ಜಾಕಿ' ಕೇವಲ 50 ದಿನಗಳಲ್ಲಿ ಬಾಚಿದೆ ಎಂಬುದು ಗಾಂಧಿನಗರದ ತಾಜಾ ಸಮಾಚಾರ. ಮೂಲಗಳ ಪ್ರಕಾರ, ಇದುವರೆಗಿನ 'ಜಾಕಿ' ಗಳಿಕೆ ರು.35 ಕೋಟಿ ಎನ್ನಲಾಗಿದೆ. ವಿ ಹರಿಕೃಷ್ಣ ಸಂಗೀತ, ಯೋಗರಾಜ್ ಭಟ್ ಸಾಹಿತ್ಯ, ಸೂರಿ ನಿರ್ದೇಶನ 'ಜಾಕಿ' ಝಣ ಝಣ ಕಾಂಚಣ ಸುರಿಸಲು ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.
'ಜಾಕಿ' ಕೇವಲ ಕನ್ನಡ ಮಣ್ಣಿನಲ್ಲಷ್ಟೇ ಅಲ್ಲ ವಿದೇಶದಲ್ಲೂ ಸದ್ದು ಮಾಡಿದೆ. ವಿಂಡ್ಸರ್, ಮೆಲ್ಬೋರ್ನ್, ಸಿಡ್ನಿ, ಬ್ರಿಸ್‌ಬೇನ್, ಪೆರ್ತ್ ನಲ್ಲೂ 'ಜಾಕಿ ' ಚಿತ್ರ ಹೊಸ ಹಂಗಾಮ ಸೃಷ್ಟಿಸಿದೆ. 'ಜಾಕಿ' ಚಿತ್ರದ ಮೂಲಕ ಪುನೀತ್ ಮತ್ತೊಮ್ಮೆ ಬಾಕ್ಸಾಫೀಸ್ ಕಿಂಗ್ ಎಂಬುದನ್ನು ಸಾಬೀತು ಮಾಡಿದ್ದಾರೆ.
More from Filmibeat
English summary
Once again Power Star Puneet Rajkumar proves that he is a box office king! His latest flick Jackie completes 50 days in the box office running to packed house in 65 centers. According to sources, Jackie earns Rs.35 Crores in 50 days.
ಜಾಕಿ ಪುನೀತ್ ರಾಜ್ ಕುಮಾರ್ ಬಾಕ್ಸಾಫೀಸ್ ಸೂರಿ ವಿ ಹರಿಕೃಷ್ಣ ಯೋಗರಾಜ್ ಭಟ್ ಭಾವನಾ jackie puneeth rajkumar box office soori v harikrishna yogaraj bhat bhavana


Click it and Unblock the Notifications











