»   »  'ಲವ್ ಗುರು' ಪಕ್ಕಾ ತ್ರಿಕೋನ ಪ್ರೇಮಕತೆಗುರು!

'ಲವ್ ಗುರು' ಪಕ್ಕಾ ತ್ರಿಕೋನ ಪ್ರೇಮಕತೆಗುರು!

Posted By:
Subscribe to Filmibeat Kannada

ಪ್ರಶಾಂತ್ ರಾಜ್ ರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ 'ಲವ್ ಗುರು'. ಪ್ರಶಾಂತ್ ರಾಜ್ ರ ಸಹೋದರ ನವೀನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ತರುಣ್ ಮತ್ತು ರಾಧಿಕಾ ಪಂಡಿತ್ ಮುಖ್ಯ ಭೂಮಿಕೆಯ ಈ ಚಿತ್ರ ಬಹುತೇಕ ಚಿತ್ರೀಕರಣವನ್ನು ಮುಗಿಸಿಕೊಂಡಿದೆ.

ಈಗಾಗಲೇ ಬಿಡುಗಡೆಯಾಗಿರುವ 'ಲವ್ ಗುರು' ಸಿಡಿ ಮತ್ತು ಧ್ವನಿಸುರುಳಿಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ಸಂಗೀತ ನಿರ್ದೇಶಕ ಜೋಶುವಾ ಶ್ರೀಧರ್ ಸುದೀರ್ಘ ಸಮಯದ ಬಳಿಕ ಮತ್ತೆ 'ಲವ್ ಗುರು' ಚಿತ್ರದ ಮೂಲಕ ಕನ್ನಡಕ್ಕೆ ಹಿಂತಿರುಗಿದ್ದಾರೆ. ಈ ಹಿಂದೆ ಅವರು 'ಅರಸು' ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದರು.

ಈ ಚಿತ್ರದ ಬಗ್ಗೆ ಮಾತನಾಡಿದ ನಾಯಕ ನಟ ತರುಣ್, ನನ್ನ ದೇಹವನ್ನು ಸಾಕಷ್ಟು ದಂಡಿಸಿದ್ದೇನೆ. ಅಂದವಾಗಿ ಕಾಣಲು ಕೇಶ ವಿನ್ಯಾಸವನ್ನೂ ಬದಲಾಯಿಸಿಕೊಂಡಿದ್ದೇನೆ ಎನ್ನುತ್ತಾರೆ. ತ್ರಿಕೋನ ಪ್ರೇಮಕಥಾ ಹಂದರವನ್ನು 'ಲವ್ ಗುರು' ಚಿತ್ರ ಹೊಂದಿದೆ. ವಿಶೇಷ ಪಾತ್ರದಲ್ಲಿ ದಿಲೀಪ್ ರಾಜ್ ಸಹ ನಟಿಸಿದ್ದಾರೆ. ಜಯಂತ ಕಾಯ್ಕಿಣಿ, ಪ್ರಶಾಂತ್, ವಿ ನಾಗೇಂದ್ರ ಪ್ರಸಾದ್ ಮತ್ತು ಕವಿರಾಜ್ ಅವರ ಸಾಹಿತ್ಯ ಚಿತ್ರಕ್ಕಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada