For Quick Alerts
  ALLOW NOTIFICATIONS  
  For Daily Alerts

  ಮೂಡಬಿದ್ರೆಯಲ್ಲಿ ಕೃಷ್ಣನ್ ಮ್ಯಾರೇಜ್ ಸ್ಟೋರಿ

  By Rajendra
  |

  ದಕ್ಷಿಣ ಕನ್ನಡದ ಮೂಡಬಿದ್ರೆಯಲ್ಲಿ 'ಕೃಷ್ಣನ್ ಮ್ಯಾರೇಜ್ ಸ್ಟೋರಿ' ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. "ಈ ಸಂಜೆ ಮಬ್ಬು ರಾತ್ರಿಲ್ಲಿ ಕಂಬ್ಳಿ ದಿಂಬು ನಡುವಲಿ ಇಗೋ ಶುರು ಲವ್ ಖಾಯಿಲೆ..." ಎಂಬ ಗೀತೆಯ ಚಿತ್ರೀಕರಣ ಇದೇ ಊರಿನಲ್ಲಿರುವ ಮಾಜಿ ಶಾಸಕ ಅಮರನಾಥ ಶೆಟ್ಟರ ಮನೆಯಲ್ಲಿ ನಡೆದಿದೆ.

  ಈ ನಿವಾಸಕ್ಕೆ ನಾನೂರು ವರ್ಷಗಳ ಇತಿಹಾಸವಿದೆ. ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಬರೆದಿರುವ ಈ ಗೀತೆಯ ಚಿತ್ರೀಕರಣದಲ್ಲಿ ಅಜಯ್, ನಿಧಿಸುಬ್ಬಯ್ಯ, ಜೈಜಗದೀಶ್, ಸಂಗೀತ, ವಿನಯಾಪ್ರಸಾದ್, ಬಾಲರಾಜ್, ಸ್ವಯಂವರ ಚಂದ್ರು, ಸುರೇಶ್‌ಮಂಗಳೂರು, ಜಯಲಕ್ಷ್ಮೀ ಮುಂತಾದವರು ಭಾಗವಹಿಸಿದ್ದರು. ಮದನ್ ಹರಿಣಿ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.

  ದೀಕ್ಷ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿಜಯ್‌ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರದ ನಿರ್ದೇಶಕರು ನೂತನ್‌ಉಮೇಶ್. ನಿರ್ದೇಶಕರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಶೇಖರ್‌ಚಂದ್ರ ಛಾಯಾಗ್ರಹಣ, ಶ್ರೀ ಸಂಕಲನ, ರವಿವರ್ಮ ಸಾಹಸ, ಮಂಜು ಮಾಂಡವ್ಯ ಸಂಭಾಷಣೆ ಹಾಗೂ ಚಂಪಕಧಾಮ ಬಾಬು ಅವರ ನಿರ್ಮಾಣನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ಅಜೇಯ್, ನಿಧಿಸುಬ್ಬಯ್ಯ, ಜೈಜಗದೀಶ್, ವಿನಯಾಪ್ರಸಾದ್, ಸಂಗೀತ, ಸುರೇಶ್‌ಮಂಗಳೂರು, ಬಾಲರಾಜ್, ಜಯಲಕ್ಷ್ಮೀ ಮುಂತಾದವರಿದ್ದಾರೆ.

  English summary
  Krishnan Marriage Story shooting is progressed in Moodabidri. Ajay Rao and Nidhi Subbaiah in the lead roles. Nutan Umesh is directing the film. Presently the unit is shooting songs in 400 years old house in Moodabidri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X