»   » ಶ್ರೀನಗರ ಕಿಟ್ಟಿ, ರಮ್ಯಾ ಜೋಡಿಯಲ್ಲಿ 'ಸಿದ್ಧಲಿಂಗು'

ಶ್ರೀನಗರ ಕಿಟ್ಟಿ, ರಮ್ಯಾ ಜೋಡಿಯಲ್ಲಿ 'ಸಿದ್ಧಲಿಂಗು'

Posted By:
Subscribe to Filmibeat Kannada

'ಸಂಜು ವೆಡ್ಸ್ ಗೀತಾ' ಚಿತ್ರದ ಬಳಿಕ ಶ್ರೀನಗರ ಕಿಟ್ಟಿ ಮತ್ತು ರಮ್ಯಾ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಬಾರಿ ಇವರಿಬ್ಬರೂ 'ಸಿದ್ಧಲಿಂಗು' ರೂಪದಲ್ಲಿ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. 2009ರಲ್ಲಿ 'ಸವಾರಿ' ಚಿತ್ರ ತಂದುಕೊಟ್ಟ ಅನಿರೀಕ್ಷಿತ ಯಶಸ್ಸು ಶ್ರೀನಗರಕಿಟ್ಟಿ ಪಾಲಿಗೆ ಅವಕಾಶಗಳ ಬಾಗಿಲನ್ನು ತೆಗೆದಿದೆ.

''ಹೌದು ರಮ್ಯಾ ಮತ್ತು ನಾನು ಒಟ್ಟಿಗೆ ಇನ್ನೊಂದು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದೇವೆ. ಇದೊಂದು ವಿಸ್ಮಯಕಾರಿ ಕತೆಯಾಗಿದ್ದು ಆದಿಯಿಂದ ಅಂತ್ಯದವರೆಗೂ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಕ್ಕು ನಲಿಸುತ್ತದೆ. ಚಿತ್ರಕತೆ ಕೇಳಿದ ಕೂಡಲೆ ನನಗೆ ಇಷ್ಟವಾಯಿತು. ಏಕತಾನತೆಯನ್ನು ಮೀರಲಿರುವ ಚಿತ್ರವಾಗಲಿದೆ 'ಸಿದ್ಧಲಿಂಗು'. ನಿರೂಪಣೆ, ಚಿತ್ರಕತೆ ಎಲ್ಲ ವಿಧದಲ್ಲೂ ಸಂಪೂರ್ಣ ಭಿನ್ನವಾದ ಚಿತ್ರ'' ಎನ್ನುತ್ತಾರೆ ಶ್ರೀನಗರ ಕಿಟ್ಟಿ.

'ಮಾತೆ ಮುಂಗಾರು' ಮತ್ತು 'ಸಂಜು ವೆಡ್ಸ್ ಗೀತಾ' ಚಿತ್ರಗಳಲ್ಲಿ ಸದ್ಯಕ್ಕೆ ಶ್ರೀನಗರ ಕಿಟ್ಟಿ ಅಭಿನಯಿಸುತ್ತಿದ್ದಾರೆ. ಈ ಎರಡು ಚಿತ್ರಗಳ ಚಿತ್ರೀಕರಣ ಮುಗಿದ ಬಳಿಕ 'ಸಿದ್ಧಲಿಂಗು' ಚಿತ್ರೀಕರಣ ಆರಂಭವಾಗಲಿದೆ. ಬಹುಶಃ ಮೇ ತಿಂಗಳಲ್ಲಿ ಚಿತ್ರ ಸೆಟ್ಟೇರುವ ಸಾಧ್ಯತೆಯಿದೆ. ಚಿತ್ರದಲ್ಲಿ ಹಳ್ಳಿ ಗಮಾರನ ಪಾತ್ರದಲ್ಲಿ ಶ್ರೀನಗರ ಕಿಟ್ಟ್ಟಿ ಹಾಗೂ ಶಿಕ್ಷಕಿಯಾಗಿ ರಮ್ಯಾ ಕಾಣಿಸಲಿದ್ದಾರೆ.

ತಮ್ಮ ಹೊಸ ಚಿತ್ರದ ಬಗ್ಗೆ ರಮ್ಯಾ ಮಾತನಾಡುತ್ತಾ, ಚಿತ್ರದ ಅತ್ಯುತ್ತಮ ಅಂಶ ಎಂದರೆ ಅದರ ನಿರ್ದೇಶಕ ವಿಜಯಪ್ರಸಾದ್. ಚಿತ್ರದ ಬಗೆಗಿನ ಅವರ ದೃಢನಿಲುವೆ ಈ ಚಿತ್ರವನ್ನು ತಾವು ಒಪ್ಪಿಕೊಳ್ಳಲು ಕಾರಣ ಎಂದು ರಮ್ಯಾ ಹೇಳಿದರು. ಈ ಹಿಂದೆ 'ಸಿದ್ಧಲಿಂಗು' ಚಿತ್ರದ ನಾಯಕ ನಟ ಲೂಸ್ ಮಾದ ಅಲಿಯಾಸ್ ಯೋಗೀಶ್ ಎನ್ನಲಾಗಿತ್ತು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada