»   » ಮಲಿಕ್ ಜೊತೆ ಸಾನಿಯಾ ಮಿರ್ಜಾ ಮದುವೆ ರದ್ದು

ಮಲಿಕ್ ಜೊತೆ ಸಾನಿಯಾ ಮಿರ್ಜಾ ಮದುವೆ ರದ್ದು

Posted By:
Subscribe to Filmibeat Kannada

ಸದ್ಯಕ್ಕೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯಬ್ ಮಲಿಕ್ ಜೊತೆ ಸಾನಿಯಾ ಮಿರ್ಜಾ ಮದುವೆ ರದ್ದಾಗಿದೆ. ಮಲಿಕ್ ರನ್ನು ಸಾನಿಯಾ ಮದುವೆಯಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.

ಮಲಿಕ್ ಮತ್ತ್ತು ಸಾನಿಯಾ ಮದುವೆ ಭಾರತ ಮತ್ತು ಪಾಕಿಸ್ತಾನದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಶತ್ರು ದೇಶದೊಂದಿಗೆ ಸಾನಿಯಾ ಸಂಬಂಧ ಬೆಳೆಸುವುದು ಬೇಡಎಂಬ ಮಾತುಗಳು ಕೇಳಿಬಂದಿದ್ದವು. ಈ ವಿಚಾರವಾಗಿ ಸಾನಿಯಾ ಅಭಿಮಾನಿಗಳು ಕೆರಳಿ ಕೆಂಡಾಮಂಡಲವಾಗಿದ್ದರು. ಈ ಹಿನ್ನೆಲಯಲ್ಲಿ ಸಾನಿಯಾ ಹಾಗೂ ಮಲಿಕ್ ಪರಸ್ಪರ ಒಮ್ಮತದ ನಿರ್ಧಾರಕ್ಕೆ ಬಂದಿದ್ದು ಮದುವೆಯನ್ನು ರದ್ದು ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.

ಮಲಿಕ್ ರನ್ನು ಮದುವೆಯಾಗುವುದರಿಂದ ಭಾರತ ಮತ್ತು ಪಾಕಿಸ್ತಾನ ಸಂಬಂಧಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಈ ಹಿಂದೆ ಸಾನಿಯಾ ಪ್ರತಿಕ್ರಿಯಿಸಿದ್ದರು. ಏಪ್ರಿಲ್ 15ರಂದು ಇವರಿಬ್ಬರೂ ಲಾಹೋರ್ ಮತ್ತು ದುಬೈನಲ್ಲಿ ಮದುವೆಯಾಗುತ್ತಿರುವುದಾಗಿ ವರದಿಯಾಗಿತ್ತು.

ಸಾನಿಯಾ, ಶೋಯಬ್ ಮದುವೆ ಬಗ್ಗೆ ಇದೀಗ ತಾನೆ ಬಂದ ಸುದ್ದಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada