»   » ಕ್ರಿಸ್‌ಮಸ್ ಹಬ್ಬಕ್ಕೆ ಬರುತ್ತಿದ್ದಾರೆ ಐವರು ಮೂರ್ಖರು

ಕ್ರಿಸ್‌ಮಸ್ ಹಬ್ಬಕ್ಕೆ ಬರುತ್ತಿದ್ದಾರೆ ಐವರು ಮೂರ್ಖರು

Posted By:
Subscribe to Filmibeat Kannada

ಮೂರು ಮಂದಿ ನಿರ್ಮಾಪಕರು ಸೇರಿ ನಿರ್ಮಿಸಿರುವ ಐವರು ಮೂರ್ಖರ ಪಕ್ಕಾ ಕಾಮಿಡಿ ಚಿತ್ರ '5 ಈಟಿಯಟ್ಸ್'!ಈಗಾಗಲೆ ಚಿತ್ರತಂಡ ಕರ್ನಾಟಕದ ನಾನಾ ಜಿಲ್ಲೆಗಳಿಗೆ ಭೇಟಿ ನೀಡಿ 5 ಈಡಿಯಟ್ಸ್ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಲೋಕೇಶ್ ಮೂರ್ತಿ, ಮೋಹನ್ ಮತ್ತು ಶಿವಾ ರೆಡ್ಡಿ ಚಿತ್ರದ ನಿರ್ಮಾಪಕರು.

ಇದುವರೆಗೂ 5 ಈಡಿಯಟ್ಸ್ ಚಿತ್ರತಂಡ ರಾಜ್ಯದ 17 ಜಿಲ್ಲೆಗಳಿಗೆ ಭೇಟಿ ನೀಡಿದೆ. ಅಲ್ಲೆಲ್ಲಾ ತಮ್ಮ ಚಿತ್ರದ ಬಗ್ಗೆ ಪ್ರಚಾರ ಮಾಡಿದ್ದೇವೆ ಎನ್ನುತ್ತಾರೆ ನಿರ್ಮಾಪಕರಲ್ಲಿ ಒಬ್ಬರಾದ ಲೋಕೇಶ್ ಮೂರ್ತಿ. ಕಾಮಿಡಿ ಚಿತ್ರ ಮಾಡುವುದು ನಿಜಕ್ಕೂ ಕಷ್ಟದ ಕೆಲಸ ಎಂಬ ಮಾತಿಗೆ ಚಿತ್ರದ ನಾಯಕರಲ್ಲಿ ಒಬ್ಬರಾದ ನವೀನ್ ಕೃಷ್ಣ ಸಹಮತ ವ್ಯಕ್ತಪಡಿಸಿದ್ದಾರೆ.

'ಫ್ರೆಂಡ್ಸ್ ' ಚಿತ್ರದಲ್ಲಿ ನಟಿಸಿದ್ದ ವಾಸು ಮತ್ತು ಆನಂದ್ ಮತ್ತೆ ಸ್ನೇಹಿತರಾಗಿ 5 ಈಡಿಯಟ್ಸ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಪೆಟ್ರೋಲ್ ಪ್ರಸನ್ನ, ನವೀನ್ ಕೃಷ್ಣ, ಹರ್ಷಿಕಾ ಪೂಣಚ್ಚ ಹಾಗೂ ನಮ್ರತ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದು ಸಂಪೂರ್ಣ ಹೊಸಥರದ ಹಾಸ್ಯ ಕಥೆ ಎನ್ನುತ್ತಾರೆ ನಿರ್ದೇಶಕ ಆನಂದ್.

ಈ ಚಿತ್ರಕ್ಕೆ ದೇವ ಸಂಗೀತ್ ಸಂಯೋಜನೆ ಮಾಡಿದ್ದು, ರೇಣು ಅವರ ಛಾಯಾಗ್ರಹಣ, ವಿ.ಮನೋಹರ, ಕೆ. ಕಲ್ಯಾಣ್‌ರ ಸಾಹಿತ್ಯ ರಚನೆ ಇದೆ. ನವ್ಯಶ್ರೀ, ಕರಿಬಸವಯ್ಯ, ಚಿದಾನಂದ, ದಯಾನಂದ, ಟನ್ನಿಸ್‌ಕೃಷ್ಣ, ಬ್ಯಾಂಕ್ ಜನಾರ್ಧನ, ಹೀಗೆ ಹಾಸ್ಯ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.ಕ್ರಿಸ್‌ಮಸ್ ಹಬ್ಬಕ್ಕೆ ಈ ಚಿತ್ರ ಬಿಡುಗಡೆಯಾಗುತ್ತಿರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

English summary
Kannada movie 5 Idiots is ready to hit the screen on Christmas. Anand and Vasu of ‘Friends’ are with Naveen Krishna, Petrol Prasanna and Namratha Hegde in the ‘5 Idiots’ team. Dev has scored the music and Renu is the cameraman.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada