»   »  ನಟ ಸುದೀಪ್ ಗೆ ಹುಟ್ಟುಹಬ್ಬದ ಸಂಭ್ರಮ

ನಟ ಸುದೀಪ್ ಗೆ ಹುಟ್ಟುಹಬ್ಬದ ಸಂಭ್ರಮ

Subscribe to Filmibeat Kannada

'ತಾಯವ್ವ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟ ನಟ ಸುದೀಪ್ ಗೆ ಇಂದು 36ನೇ ಹುಟ್ಟುಹಬ್ಬ್ಬದ ಸಂಭ್ರಮ. ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ 'ಸ್ಪರ್ಶ' ಚಿತ್ರದ ಮೂಲಕ ಪ್ರೇಕ್ಷಕರ ಮನಸ್ಸನ್ನು ಸ್ಪರ್ಶಿಸಿ 'ಪ್ರತ್ಯರ್ಥ' ಮೂಲಕ ಉಳಿದ ನಟರಿಗೆ ಪ್ರತಿಸ್ಪರ್ಧಿಯಾದ ನಟ. 'ಹುಚ್ಚ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿಕೊಂಡವರು ಸುದೀಪ್.

ಬೆಂಗಳೂರು ಜೆಪಿ ನಗರದ ಪುಟ್ಟೇನಹಳ್ಳಿಯ ಸುದೀಪ್ ಮನೆಯಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ತಮ್ಮ 'ಶಾಂತಿ" ನಿವಾಸದಲ್ಲಿ ನೂರಾರು ಅಭಿಮಾನಿಗಳ ಮಧ್ಯೆ ಜನುವ ದಿನವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಚಿತ್ರರಂಗದ ಹಲವು ಗಣ್ಯರು, ನಟರು ಅವರಿಗೆ ಶುಭ ಹಾರೈಸಿದರು. ಅಭಿಮಾನಿಗಳು ತಮ್ಮ ಮೇಲಿಟ್ಟಿರುವ ವಿಶ್ವಾಸಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ಗುಣಾತ್ಮಕ ಚಿತ್ರಗಳಲ್ಲಿ ನಟಿಸುವುದಾಗಿ ಅಭಿಮಾನಿಗಳಿಗೆ ಭರವಸೆ ನೀಡಿದರು.

ತಮ್ಮ ವಿಶಿಷ್ಟ ಅಭಿನಯದ ಮೂಲಕಅಲ್ಪಾವಧಿಯಲ್ಲೇ ಬಾಲಿವುಡ್ ನಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅದರ ಫಲಿತಾಂಶವೇ ರಾಮ್ ಗೋಪಾಲ್ ವರ್ಮಾರ 'ಫೂಂಕ್' ಮತ್ತು 'ರಣ್' ಚಿತ್ರಗಳು. ಸುದೀಪ್ ನಿರ್ದೇಶಕನಾಗಿಯೂ ಯಶಸ್ವಿಯಾಗಿದ್ದಾರೆ. ಸ್ವಾತಿಮುತ್ತು ಚಿತ್ರದಲ್ಲಿನ ಅವರ ಪ್ರೌಢ ಅಭಿನಯ ಕಮಲ್ ಹಾಸನ್‌ರನ್ನು ನೆನಪಿಸುತ್ತದೆ.

ಸದ್ಯಕ್ಕೆ ನಟಿ ರಮ್ಯಾರೊಂದಿಗೆ ಸುದೀಪ್ ಜಸ್ಟ್ ಮಾತ್ ಮಾತಲ್ಲಿ ಮುಳಿಗಿದ್ದಾರೆ. ಇದೇ ಚಿತ್ರವನ್ನು ಹಿಂದಿಯಲ್ಲಿ ಸುದೀಪ್ ನಿರ್ದೇಶಿಸುವುದಾಗಿಯೂ ತಿಳಿಸಿದ್ದಾರೆ. ಅತ್ಯುತ್ತಮ ನಟನೆಗಾಗಿ ಮೂರು ಬಾರಿ ಫಿಲಂಫೇರ್ ಪ್ರಶಸ್ತಿ ಸುದೀಪ್ ಪಾಲಾಗಿದೆ. ಅವರು ಹೀಗೆಯೇ ಸದಭಿರುಚಿಯ ಚಿತ್ರಗಳಲ್ಲಿ ನಟಿಸಲಿ ಎಂಬುದು ಅವರ ಅಭಿಮಾನಿಗಳ ಒತ್ತಾಸೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada