For Quick Alerts
  ALLOW NOTIFICATIONS  
  For Daily Alerts

  ರಾಜ್ಯದಾದ್ಯಂತ ಅಣ್ಣಾಬಾಂಡ್‌ಗೆ ಭರ್ಜರಿ ಸ್ವಾಗತ

  By Rajendra
  |

  ಪುನೀತ್ ರಾಜ್ ಕುಮಾರ್ ಅಭಿನಯದ ದುನಿಯಾ ಸೂರಿ ನಿರ್ದೇಶನದ 'ಅಣ್ಣಬಾಂಡ್' ಚಿತ್ರಕ್ಕೆ ರಾಜ್ಯದಾದ್ಯಂತ ಭರ್ಜರಿ ಸ್ವಾಗತ ಸಿಕ್ಕಿದೆ. ಶುಕ್ರವಾರ ಮಾತ್ರ ಚಿತ್ರ ಬಿಡುಗಡೆ ಎಂಬ ನಂಬಿಕೆಯನ್ನು ತೊಡೆದು ಮಂಗಳವಾರ ಬಿಡುಗಡೆಯಾದ 'ಅಣ್ಣಾಬಾಂಡ್‌'ಗೆ ಪ್ರೇಕ್ಷಕರು ಬೆನ್ನುತಟ್ಟಿದ್ದಾರೆ.

  ದಾವಣೆಗೆರೆಯಲ್ಲಿ ಬೆಳಗ್ಗೆ 6 ಗಂಟೆಗೆ ಚಿತ್ರ ಪ್ರದರ್ಶನ ಆರಂಭವಾಗಿದೆ. ಕೆಲವು ಕಡೆ ನಾಲ್ಕಕ್ಕಿಂತ ಹೆಚ್ಚು ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ಇನ್ನು ಬೆಂಗಳೂರಿನ ಮಲ್ಟಿಫೆಕ್ಸ್‌ಗಳಲ್ಲಿ ಬೆಳಗ್ಗೆ 7.30ಕ್ಕೆ ಬ್ರೇಕ್ ಫಾಸ್ಟ್ ಶೋ ಆರಂಭಸುವ ಮೂಲಕ ಕನ್ನಡ ಚಿತ್ರಗಳಿಗೂ ಮಾರ್ಕೆಟ್ ಇದೆ ಎಂಬುದು ಸಾಬೀತಾಗಿದೆ.

  ಬೆಂಗಳೂರಿನಷ್ಟೇ ಅಲ್ಲದೆ ಕೊಪ್ಪಳದ ಶ್ರೀಲಕ್ಷ್ಮಿ ಮತ್ತು ಶ್ರೀ ಶಿವ ಚಿತ್ರಮಂದಿರಗಳಲ್ಲೂ 'ಅಣ್ಣಾಬಾಂಡ್' ಚಿತ್ರದ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಪುನೀತ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಕಾಣದಂತೆ ಮಾಯವಾದನು ಹಾಡಿಗೆ ಸೀಟುಗಳಲ್ಲೆ ಕೊಪ್ಪಳ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.

  ಇನ್ನು ರಾಯಚೂರಿನ ಪೂರ್ಣಿಮಾ ಚಿತ್ರಮಂದಿರದಲ್ಲಿ 'ಅಣ್ಣಾಬಾಂಡ್' ಪೋಸ್ಟರ್‌ಗೆ 101 ತೆಂಗಿನಕಾಯಿಗಳನ್ನು ಒಡೆದು 18 ಲೀಟರ್ (ಪುನೀತ್ ಅವರ 18ನೇ ಚಿತ್ರವಾದ ಕಾರಣ) ಹಾಲಿನ ಅಭಿಷೇಕ ಮಾಡಿ ಶತದಿನೋತ್ಸವ ಆಚರಿಸಲಿ ಎಂದು ಹಾರೈಸಿದ್ದಾರೆ. ಈ ಕಾರ್ಯಕ್ರಮವನ್ನು ಕರವೇ ಜಿಲ್ಲಾ ಘಟಕ ಹಮ್ಮಿಕೊಂಡಿತ್ತು. (ಒನ್‌ಇಂಡಿಯಾ ಕನ್ನಡ)

  English summary
  Puneeth Rajkumar starer movie 'Anna Bond' receives a grand opening all over Karnataka including Davangere, Koppal and Raichur regions. The theatres have been booked for the next couple of days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X