»   » ಭಕ್ತ ಕುಂಬಾರನಾಗಿ ಹ್ಯಾಟ್ರಿಕ್ ಹೀರೋ ಶಿವಣ್ಣ

ಭಕ್ತ ಕುಂಬಾರನಾಗಿ ಹ್ಯಾಟ್ರಿಕ್ ಹೀರೋ ಶಿವಣ್ಣ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭಕ್ತಿ ಪ್ರಧಾನ ಚಿತ್ರವೊಂದರಲ್ಲಿ ನಟಿಸಲಿದ್ದಾರೆ. ಆದರೆ ಸದ್ಯಕ್ಕಂತೂ ಅಲ್ಲ ಎಂಬುದು ನಿಮ್ಮ ಗಮನಕ್ಕಿರಲಿ. 'ಭಕ್ತ ಕುಂಬಾರ-2' ಚಿತ್ರ ಮಾಡುವ ಪ್ರಯತ್ನ ನಡೆಯುತ್ತಿದೆ ಎಂಬ ಸುಳಿವನ್ನ್ನು ಶಿವಣ್ಣ ಕೊಟ್ಟಿದ್ದಾರೆ. ಮುಂಚಿನಿಂದಲೂ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಬೇಕು ಎಂಬ ತುಡಿತ ಶಿವಣ್ಣನದು. ಈ ಆಸೆ ಭಕ್ತ ಕುಂಬಾರ-2 ಚಿತ್ರದ ಮೂಲಕ ನೆರವೇರಲಿದೆ.

ಹಾಗೆಯೇ ಗೋಕರ್ಣವನ್ನು ಮೂಲವಾಗಿಟ್ಟುಕೊಂಡು ಶಿವಣ್ಣನ ಮತ್ತೊಂದು ಭಕ್ತಿ ಪ್ರಧಾನ ಚಿತ್ರವನ್ನು ಗುರು ಪ್ರಸಾದ್ ನಿರ್ದೇಶಿಸಲಿದ್ದಾರೆ. ಅಪ್ಪಾಜಿ ಅವರಂತೆ ಪೌರಾಣಿಕ ಚಿತ್ರಗಳಲ್ಲಿ ಅಭಿನಯಿಸಬೇಕು ಎಂದು ಶಿವಣ್ಣನ ತೀರ್ಮಾನಿಸಿದ್ದಾರೆ. ಕೇವಲ ಮನರಂಜನೆಗಾಗಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಪ್ರೇಕ್ಷಕರು ಸಂದೇಶಾತ್ಮಕ ಚಿತ್ರಗಳನ್ನು ನಿರೀಕ್ಷಿಸುತ್ತಿದ್ದಾರೆ ಎನ್ನುತ್ತಾರೆ ಶಿವಣ್ಣ್ಣ.

ಅಪ್ಪಾಜಿ, ಅಮಿತಾಬ್, ಕಮಲಹಾಸನ್ ನನ್ನ ಮಾದರಿ ವ್ಯಕ್ತಿಗಳು ಎನ್ನುವ ಶಿವಣ್ಣ, ಸ್ವಪ್ರಯತ್ನದಿಂದ ಸಾಧಿಸುವ ಉದ್ದೇಶ ಅವರದು. 1974ರಲ್ಲಿ ಬಿಡುಗಡೆಯಾಗಿದ್ದ 'ಭಕ್ತ ಕುಂಬಾರ' ಚಿತ್ರದಲ್ಲಿ ರಾಜ್ ಕುಮಾರ್, ಲೀಲಾವತಿ, ಮಂಜುಳ, ಬಾಲಕೃಷ್ಣ, ರಮೇಶ್ ಮುಂತಾದವರು ಅಮೋಘವಾಗಿ ಅಭಿನಯಿದ್ದರು.

ಭಕ್ತ ಕುಂಬಾರದಲ್ಲಿನ ಪುರಂದರ ವಿಠಲನ ಭಕ್ತನಾದ ಗೋರನ ಪಾತ್ರದ ಅಭಿನಯ ಎಲ್ಲಾ ಭಕ್ತಿ ಪಾತ್ರಗಳನ್ನೂ ಮೀರಿಸುತ್ತದೆ ಎಂದರೆ ತಪ್ಪಾಗಲಾರದು. ಡಾ.ರಾಜ್‌ ಮೂಲಕ ಕನ್ನಡಿಗರಿಗೆ ಭಕ್ತಿರಸ ಉಣಿಸಿದ ಕೀರ್ತಿ ಕನ್ನಡದ ಶ್ರೇಷ್ಠ ನಿರ್ದೇಶಕರಲ್ಲೊಬ್ಬರಾದ ದಿವಂಗತ ಹುಣಸೂರು ಕೃಷ್ಣಮೂರ್ತಿಯವರಿಗೆ ಸಲ್ಲುತ್ತದೆ. ಈಗ ಮತ್ತದೆ ಭಕ್ತಿ ರಸವನ್ನು ಶಿವಣ್ನ ಉಕ್ಕಿಸುವಂತಾಗಲಿ ಎಂಬುದು ಪ್ರೇಕ್ಷಕರ ಒತ್ತಾಸೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada