For Quick Alerts
  ALLOW NOTIFICATIONS  
  For Daily Alerts

  ಜಯಮಾಲಾ ಪುತ್ರಿ ಸೌಂದರ್ಯಗೆ ಕಡೆಗೂ ಕೈಹಿಡಿದ ಅದೃಷ್ಟ

  By Rajendra
  |

  ಜಯಮಾಲಾ ಪುತ್ರಿ ಸೌಂದರ್ಯ ಅವರಿಗೆ ಯಾಕೋ ಏನೋ ಪದೇ ಪದೇ ಅದೃಷ್ಟ ಕೈಕೊಡುತ್ತಲೇ ಇತ್ತು. ಯೋಗರಾಜ್ ಭಟ್ಟರ 'ಲಗೋರಿ' ಚಿತ್ರಕ್ಕೆ ಈಕೆ ನಾಯಕಿ ಎಂದಾಗಲೆ ಆ ಚಿತ್ರ ಮೂಹೂರ್ತದಲ್ಲೇ ಮುಗ್ಗರಿಸಿತು. ಬಳಿಕ ಈಕೆ ತೆಲುಗಿನ 'ಮಿಸ್ಟರ್ ಪ್ರೇಮಿಕುಡು' ಚಿತ್ರವೂ ಅರ್ಧಕ್ಕೆ ನಿಲ್ಲುವ ಮೂಲಕ ಈಕೆ ಬೆಂಗಳೂರಿಗೆ ಹಿಂತಿರುಗಿದ್ದರು.

  ಕನ್ನಡವರೇ ಆದ ಯಶೋ ಸಾಗರ್ ಮುಖ್ಯಭೂಮಿಕೆಯಲ್ಲಿರುವ ಚಿತ್ರ 'ಮಿಸ್ಟರ್ ಪ್ರೇಮಿಕುಡು'. ಈ ಚಿತ್ರ ಮುಹೂರ್ತ ಮುಗಿಸಿಕೊಂಡು ಇನ್ನೇನು ಶುರುವಾಗಬೇಕು ಅನ್ನುವಷ್ಟರಲ್ಲಿ ಕಾರಣಾಂತರಗಳಿಂದ ಅರ್ಧಕ್ಕೆ ನಿಂತುಹೋಯಿತು. ಯಶೋ ಸಾಗರ್ ಅವರ ತಂದೆ ಬಿ ಪಿ ಸೋಮು ನಿರ್ಮಿಸುತ್ತಿರುವ ಚಿತ್ರ ಇದಾಗಿತ್ತು.

  ಎರಡು ಸಲ ಅದೃಷ್ಟ ಕೈಕೊಟ್ಟರು ಮೂರನೆ ಸಲ ಮಾತ್ರ ಕೈಬಿಟ್ಟಿಲ್ಲ. ಈ ಬಾರಿ ಉಪೇಂದ್ರ ಅವರ 'ಗಾಡ್ ಫಾದರ್' ಚಿತ್ರಕ್ಕೆ ಸೌಂದರ್ಯ ಆಯ್ಕೆಯಾಗಿದ್ದಾರೆ. ಯಾವುದಕ್ಕೂ ಕಾಲ ಕೂಡಿ ಬರಬೇಕು ಅಂತಾರಲ್ಲಾ ಇದಕ್ಕೆ ನೋಡಿ. ಚಿತ್ರದಲ್ಲಿ ಒಟ್ಟು ಮೂವರು ನಾಯಕಿಯರಿದ್ದು, ಇನ್ನಿಬ್ಬರು ಸಿಮ್ರಾನ್ ಹಾಗೂ ಭೂಮಿಕಾ ಎನ್ನಲಾಗಿದೆ.

  ಜಯಮಾಲಾ ಪುತ್ರಿ ಪರಭಾಷಾ ಚಿತ್ರರಂಗದಿಂದ ಬೆಳ್ಳಿಪರದೆಗೆ ಅಡಿಯಿಡಲು ಪ್ರಯತ್ನಿಸುತ್ತಿದ್ದರು. ಆದರೆ ಅವರ ಹಣೆಬರಹ ಕನ್ನಡದಿಂದಲೇ ಸಿನಿ ಪಯಣ ಆರಂಭವಾಗಬೇಕು ಎಂದಿದ್ದರೆ ಯಾರೇನು ಮಾಡಲು ಸಾಧ್ಯವಾಗುತ್ತದೆ. ಸದ್ಯಕ್ಕೆ 'ಗಾಡ್ ಫಾದರ್' ಆಕೆಯ ಕೈಹಿಡಿದಿದ್ದಾನೆ. ಕಾದು ನೋಡೋಣ ಮುಂದೇನಾಗುತ್ತದೋ!

  English summary
  Actress, producer and former KFCC President Dr.Jayamala's daughter Soundaraya has got a chance to act in Upendra starer God Father. Earlier she missed the opportunity of Lagori with Puneet Rajkumar. Her Telugu film opposite Yashas Sagar in Mr Premikudu has been stalled and Soundaraya was back in Bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X