»   »  ಶಿವಣ್ಣನಿಗೆ ಹೊಸ ತಂಗಿಯಾಗಿ ಮೀರಾ ಜಾಸ್ಮಿನ್

ಶಿವಣ್ಣನಿಗೆ ಹೊಸ ತಂಗಿಯಾಗಿ ಮೀರಾ ಜಾಸ್ಮಿನ್

Posted By:
Subscribe to Filmibeat Kannada
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಹೊಸ ತಂಗಿ ಸಿಕ್ಕಿದ್ದಾರೆ. ತೆರೆಯ ಮೇಲೆ ಶಿವಣ್ಣನ ತಂಗಿಯಾಗಿ ನಟಿಸುತ್ತಿದ್ದ ರಾಧಿಕಾ ಚಿತ್ರರಂಗ ತೊರೆದ ಮೇಲೆ ಆ ಜಾಗ ಖಾಲಿಯಾಗಿತ್ತು. ಈಗ ಆಗ ಜಾಗಕ್ಕೆ ಮೀರಾ ಜಾಸ್ಮಿನ್ ಆಗಮಿಸಿದ್ದಾರೆ. ಓಂ ಸಾಯಿ ಪ್ರಕಾಶ್ ನಿರ್ಮಿಸಿ, ನಿರ್ದೇಶಿಸುತ್ತಿರುವ 'ದೇವರು ಕೊಟ್ಟ ತಂಗಿ' ಚಿತ್ರಕತೆಯನ್ನು ಶಿವಣ್ಣ ಆಖೈರುಗೊಳಿಸಿದ್ದಾರೆ.

ಮಗಳು ನಿವೇದಿತಾ ಪರೀಕ್ಷೆಗೆ ಕೂತಿರುವ ಕಾರಣ ಶಿವರಾಜ್ ಕುಮಾರ್ ಸಹ ಒತ್ತಡದಲ್ಲಿದ್ದಾರೆ. ರಾಜ್ಯ ಪ್ರಶಸ್ತಿ ಪಡೆದ ಬಾಲ ಕಲಾವಿದೆ ನಿವೇದಿತಾ. ಈಗ ಐಸಿಎಸ್ ಸಿ ಪಠ್ಯಕ್ರಮದ10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದಾರೆ. ಹಾಗಾಗಿ ಪರೀಕ್ಷೆ ಭಯ ಶಿವಣ್ಣನಿಗೂ ತಪ್ಪಿದ್ದಲ್ಲ.

ರವಿ ಶ್ರೀವತ್ಸ್ ನಿರ್ದೇಶನದಲ್ಲಿ 'ಮುತ್ತು ನಮ್ಮಪ್ಪ' ಎಂಬ ಚಿತ್ರವೂ ಸಿದ್ಧತೆಯ ಹಂತದಲ್ಲಿದೆ. ನಿವೇದಿತಾ ಅವರೊಂದಿಗೆ ಶಿವಣ್ಣ ನಟಿಸಲಿದ್ದಾರೆ. ಚಿತ್ರೀಕರಣ ಅಮೆರಿಕಾದಲ್ಲಿ ನಡೆಯಲಿದೆ. ಹಾಗಂತ ಮಾದೇಶ ಚಿತ್ರ ಬಿಡುಗಡೆ ಸಮಯದಲ್ಲಿ ಶ್ರೀವತ್ಸ ಹೇಳಿದ್ದರು. ಈಗ ಮಗಳಿಗೆ ಪರೀಕ್ಷಾ ಸಮಯವಾದ್ದರಿಂದ ಶಿವಣ್ಣನ ಧ್ಯಾನ ಫಲಿತಾಂಶದ ಕಡೆಗೆ ನೆಟ್ಟಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಝಡ್ ಪ್ಲಸ್ ಸೆಕ್ಯುರಿಟಿಯಲ್ಲಿ ರಾಧಿಕಾ ಪ್ರತ್ಯಕ್ಷ!
ಮಾಲ್ಡವೀಸಿಗೆ ರಾಧಿಕಾ ಕುಮಾರಣ್ಣ ಪ್ರವಾಸ
ಹಂಚುತ್ತಾ ಬೆಳೆಯುವ ತಂಗಿ ರಾಧಿಕಾ
ಅವರ ಪರ್ಸನಲ್ ವಿಷಯ ನಮಗ್ಯಾಕೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada