»   »  ಅಮೃತ ಮಹೋತ್ಸವ ಪುಸ್ತಕಗಳು ಅನಾವರಣ

ಅಮೃತ ಮಹೋತ್ಸವ ಪುಸ್ತಕಗಳು ಅನಾವರಣ

Subscribe to Filmibeat Kannada
ಕನ್ನಡ ವಾಕ್ಚಿತ್ರದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಆಗಿಹೋದ ಮಹಾನುಭಾವರ 75 ಕನ್ನಡ ಪುಸ್ತಕಗಳನ್ನು ರಾಜ್ಯಪಾಲ ರಾಮೇಶ್ವರ್ ಠಾಕೂರ್ ಸೋಮವಾರ ಬಿಡುಗಡೆ ಮಾಡಿದರು. ಅತ್ಯಂತ ಪ್ರಭಾವಿ ಮಾಧ್ಯಮವಾಗಿರುವ ಚಿತ್ರರಂಗದ ಸಾಧನೆಗಳನ್ನು ಮೆಲುಕು ಹಾಕುತ್ತಿರುವ ಈ ಕಾರ್ಯಕ್ರಮಅನನ್ಯ ಎಂದು ಅವರು ಮನಸಾರೆ ಶ್ಲಾಘಿಸಿದರು.

ಕನ್ನಡ ಚಿತ್ರರಂಗಕ್ಕ್ಕೆ ಅನಂತ ಅಭಿನಂದನೆಗಳನ್ನು ತಿಳಿಸಿದ ಅವರು ಡಾ.ರಾಜ್ ಕುಮಾರ್, ಎಚ್ ಎಲ್ ಎನ್ ಸಿಂಹ, ಹುಣಸೂರು ಕೃಷ್ಣಮೂರ್ತಿ ಮುಂತಾದ ಸಾಧಕರನ್ನು ಸ್ಮರಿಸಿದರು. ಖ್ಯಾತ ಸಾಹಿತಿ ಹಾಗೂ 75 ಪುಸ್ತಕಗಳ ಪ್ರಧಾನ ಸಂಪಾದಕ ಡಾ.ಬರಗೂರು ರಾಮಚಂದ್ರಪ್ಪ ಮಾತನಾಡುತ್ತಾ, ಪುಸ್ತಕಗಳು ಅನುಭವಗಳ ಆತ್ಮಾವಲೋಕನವೂ ಹೌದು ಸಿಂಹಾವನಲೋಕನವೂ ಹೌದು ಎಂದರು. ಪುಸ್ತಕಗಳನ್ನು ಹೊರತರುವಲ್ಲಿ ಸಹಕರಿಸಿದ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಹಾಗೂ ಲೇಖಕರನ್ನು ಸ್ಮರಿಸಿದರು.

ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ 75 ಲೇಖಕರನ್ನು ಸನ್ಮಾನಿಸಿದರು. ಸಾಹಿತಿ ಡಾ.ಚಂದ್ರಶೇಖರ ಕಂಬಾರ, ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿ ಸುಧಾಕರರಾವ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಅಮೃತ ಪುಸ್ತಕ ಪಟ್ಟಿಯಲ್ಲಿ ಯಾರ್ಯಾರಿಗೆ ಸ್ಥಾನ?
ರಾಜ್ ಪುಣ್ಯಭೂಮಿಯಲ್ಲಿ ಅಮೃತ ಮಹೋತ್ಸವ
ಕನ್ನಡ,ತಮಿಳು ಸಂಬಂಧಕ್ಕೆ ಕಲ್ಲು ಹಾಕಬೇಡಿ:ಕಮಲ್
ಪೈರಸಿ ತಡೆಗೆ ಶೀಘ್ರ ಕಾನೂನು: ಯಡಿಯೂರಪ್ಪ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada