For Quick Alerts
  ALLOW NOTIFICATIONS  
  For Daily Alerts

  ಸೆನ್ಸಾರ್‌ನಲ್ಲಿ ರಮ್ಯಾ ಬಾಯ್‌ಫ್ರೆಂಡ್ 'ಸಿದ್ಲಿಂಗು' ಪಾಸು

  By Rajendra
  |

  ಗೋಲ್ಡನ್ ಗರ್ಲ್ ರಮ್ಯಾ ಬಾಯ್‌ಫ್ರೆಂಡ್ ಸಿದ್ಲಿಂಗು ಸೆನ್ಸಾರ್‌ನಲ್ಲಿ ಪಾಸಾಗಿದ್ದಾನೆ. ಆದರೆ ಲವ್ವಲ್ಲಿ ಪಾಸಾ ಅಥವಾ ಫೇಲಾ ಎಂಬುದು ಗೊತ್ತಾಗಬೇಕಾದರೆ ಚಿತ್ರ ಬಿಡುಗಡೆಯವರೆಗೂ ಕಾಯಬೇಕು. ಸ್ಯಾಮಿ ಅಸೋಸಿಯೋಟ್ಸ್ ಲಾಂಛನದಲ್ಲಿ ಟಿ.ಪಿ.ಸಿದ್ದರಾಜು ನಿರ್ಮಿಸಿರುವ 'ಸಿದ್ಲಿಂಗು' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು\ಎ ಅರ್ಹತಾಪತ್ರವನ್ನು ನೀಡಿದೆ.

  ಮೈಸೂರು, ಬೆಂಗಳೂರು, ತಲಕಾಡು ಮುಂತಾದ ಕಡೆ ಚಿತ್ರೀಕರಣ ನಡೆದಿದೆ ಎಂದು ನಿರ್ದೇಶಕ ವಿಜಯಪ್ರಸಾದ್ ತಿಳಿಸಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಯೋಗೀಶ್ ನಾಯಕರಾಗಿ ಅಭಿನಯಿಸಿರುವ ಈ ಚಿತ್ರದ ನಾಯಕಿ ರಮ್ಯಾ.

  ಅಚ್ಯುತರಾವ್, ಗಿರಿಜಾಲೋಕೇಶ್, ರೇಣುಕಾರಾಧ್ಯ ಗಿರಿಜಾಲೋಕೇಶ್, ರಂಗಾಯಣರಘು, ಶರಣ್, ಎಚ್.ಎಮ್.ಟಿ ವಿಜಯ್, ಕೆ.ಸಿ.ಶ್ರೀಧರ್, ವತ್ಸಲಾ ಮೋಹನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಜ್ಞಾನಮೂರ್ತಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನವಿರುವ 'ಸಿದ್ಲಿಂಗು' ಚಿತ್ರಕ್ಕೆ ಉದಯ ಹೆಗಡೆ ಅವರ ಸಂಕಲನವಿದೆ. (ಒನ್‌ಇಂಡಿಯಾ ಕನ್ನಡ)

  English summary
  Sidlingu starring Yogish and Golden girl Ramya in a lead role has finally been cleared by Censor Board. The regional censor board clearing it with U/A certificate. The movie is being directed by Vijay Prasad

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X