»   »  ಸಿಂಗಾರವಾದಳು ರವಿಚಂದ್ರನ್ ರಾಜಕುಮಾರಿ

ಸಿಂಗಾರವಾದಳು ರವಿಚಂದ್ರನ್ ರಾಜಕುಮಾರಿ

Subscribe to Filmibeat Kannada
ಲಕ್ಷ್ಮೀಶ್ರೀ ಕಂಬೈನ್ಸ್ ಲಾಂಛನದಲ್ಲಿ ಕೆ.ಮಂಜು ಹಾಗೂ ಸಿ. ವೆಂಕಟೇಶ್ ದೊಡ್ಡಮನಿ ಸೇರಿ ನಿರ್ಮಿಸುತ್ತಿರುವ ರಾಜಕುಮಾರಿ ಚಿತ್ರ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ರಾಜ್ಯಾದ್ಯಂತ ತೆರೆಕಾಣಲಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಬಹುದಿನಗಳ ನಂತರ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದು, ಅಭಿಮಾನಿಗಳ ಮನತಣಿಸಲು ಮತ್ತೆ ಬರುತ್ತಿದ್ದಾರೆ.

ರವಿಚಂದ್ರನ್ ಹಾಗೂ ಬಾಲಾಜಿ ಈ ಚಿತ್ರದಲ್ಲಿ ಒಟ್ಟಿಗೇ ನಟಿಸಿದ್ದು, ರಾಜಕುಮಾರಿಯಾಗಿ ಕನ್ನಿಹಾ, ನಿಖಿತಾ ನಟಿಸಿದ್ದಾರೆ. ತುಳಸಿ ಶಿವಮಣಿ, ರಂಗಾಯಣ ರಘು, ಬುಲೆಟ್ ಪ್ರಕಾಶ್, ಸುಂದರರಾಜ್, ಉಮೇಶ್ ಅಲ್ಲದೇ ನಟಿ ರಮನೀತ್ ಚೌಧರಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಇಳಕಿಯನ್‌ರ ಕಥೆಗೆ, ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವವರು ಎಸ್. ಗೋವಿಂದು. ಜೋಷಿ ಅವರ ಛಾಯಾಗ್ರಹಣ, ವಿ. ನಾಗೇಂದ್ರ ಪ್ರಸಾದ್ ಹಾಗೂ ಕೆ. ಕಲ್ಯಾಣ್‌ರ ಸಾಹಿತ್ಯಕ್ಕೆ ವಿ.ಹರಿಕೃಷ್ಣ ಅವರ ಸುಮಧುರ ಸಂಗೀತವಿದ್ದು, ಡಿಫರೆಂಟ್ ಡ್ಯಾನಿ ಅವರ ಸಾಹಸ ಸಂಯೋಜನೆ, ಇಸ್ಮಾಯಿಲ್‌ರ ಕಲಾನಿರ್ದೇಶನ ಈ ಚಿತ್ರಕ್ಕಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಬಾ ಸನಿಹಾ ಎನ್ನುವಂತಿರುವ ಕನಿಹಾ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada