»   » ಜೋಗಯ್ಯನ ಜತೆ ಜೋಗಿನಿ ಅಮೀಷಾ ಪಟೇಲ್

ಜೋಗಯ್ಯನ ಜತೆ ಜೋಗಿನಿ ಅಮೀಷಾ ಪಟೇಲ್

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನೂರನೆ ಚಿತ್ರ 'ಜೋಗಯ್ಯ' ನಿಗೆ ಅಮೀಷಾ ಪಟೇಲ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಪ್ರಿಯಾಂಕಾ ಚೋಪ್ರಾ, ವಿದ್ಯಾಬಾಲನ್ ಎಂದು ಗಿರಿಕಿ ಹೊಡೆದ ಪ್ರೇಮ್ ಕಡೆಗೆ ಅಮೀಷಾ ಪಟೇಲರನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವರ್ಷದ ಏಪ್ರಿಲ್ 24ರ ಅಣ್ಣಾವ್ರ ಹುಟ್ಟುಹಬ್ಬಕ್ಕೆ ಹುಟ್ಟುಹಬ್ಬದ ದಿನ ಜೋಗಯ್ಯ ಚಿತ್ರ ಸೆಟ್ಟೇರಬೇಕಾಗಿತ್ತು. ಆದರೆ ಗ್ರಹಗತಿಗಳು ಸರಿಯಿಲ್ಲದ ಕಾರಣ ಚಿತ್ರ ಮುಂದಕ್ಕೆ ಹೋಗಿದೆ. ಮೂಲಗಳ ಪ್ರಕಾರ ಜೋಗಯ್ಯ ಮುಂಬರುವ ಫೆಬ್ರವರಿ 19ಕ್ಕೆ ಸೆಟ್ಟೇರಲಿದೆಯಂತೆ.

ಚಿತ್ರ ಸೆಟ್ಟೇರಲು ಇನ್ನೂ ಒಂಭತ್ತು ತಿಂಗಳ ಕಾಲಾವಕಾಶವಿದೆ. ಇಷ್ಟು ಬೇಗ ಅಮೀಷಾರನ್ನು ಪ್ರೇಮ್ ಆಯ್ಕೆ ಮಾಡಲು ಕಾರಣವೇನು? ಎಂಬ ಪ್ರಶ್ನೆ ಗಾಂಧಿನಗರಿಗರನ್ನು ಕಾಡುತ್ತಿದೆ. ಇದು ಪ್ರೇಮ್ ಪ್ರಚಾರದ ಶೈಲಿ ಎಂಬ ಮಾತುಗಳು ಕೇಳಿಬಂದಿವೆ. ಸದ್ಯಕ್ಕೆ ಅಮೀಷಾರ ಕೈಯಲ್ಲೂ ಯಾವುದೇ ಚಿತ್ರಗಳಿಲ್ಲ. ಸದ್ಯಕ್ಕೆ ಆಕೆ ಮದುವೆ ಬಗ್ಗೆ ಹಗಲುಗನಸುಗಳನ್ನು ಕಾಣುತ್ತಿದ್ದಾರೆ ಎನ್ನಲಾಗಿದೆ.

ಮುಂದಿನ ವರ್ಷ ಫೆಬ್ರವರಿ 19ಕ್ಕೆ ಶಿವಣ್ಣ ಅವರ ಮದುವೆ ವಾರ್ಷಿಕೋತ್ಸವ. ಅದಕ್ಕಿಂತ ಹೆಚ್ಚಾಗಿ ಶಿವಣ್ಣ ನಾಯಕ ನಟನಾಗಿ ಅಭಿನಯದ ಮೊದಲ ಚಿತ್ರ 'ಆನಂದ್ 'ಬಿಡುಗಡೆಯಾದ ದಿನ. ಜೋಗಯ್ಯನ ಮೂಲಕ ಹ್ಯಾಟ್ರಿಕ್ ಹೀರೋ ಶಿವಣ್ಣ ಸೆಂಚುರಿ ಹೀರೋ ಆಗಲು ಫೆಬ್ರವರಿ ತನಕ ಕಾಯಬೇಕು.

Please Wait while comments are loading...