ಮೈಸೂರಿನಲ್ಲಿ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ

ವಿಷ್ಣು ಸ್ಮಾರಕ ನಿರ್ಮಿಸಲು ಉದ್ದೇಶಿಸಿರುವ ಅಭಿಮಾನ್ ಸ್ಟುಡಿಯೋದಲ್ಲಿನ ಜಾಗ ವಿವಾದದಲ್ಲಿ. ಬಾಲಣ್ಣ ಕುಟುಂಬಿಕರು ಕೋರ್ಟ್‌ನಲ್ಲಿ ಧಾವಾ ಹೂಡಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲಿ ಜಾಗ ಸಿಗುವ ಲಕ್ಷಣಗಳಿಲ್ಲ. ಹಾಗಾಗಿ ಮೈಸೂರಿನಲ್ಲಿ ನಿರ್ಮಿಸಲು ಮುಂದಾಗಿದ್ದೇವೆ ಎಂದಿದ್ದಾರೆ ಭಾರತಿ.
ಅಭಿಮಾನ್ ಸುತ್ತಮುತ್ತರ ಪ್ರದೇಶದಲ್ಲೂ ಜಾಗದ ಹುಡುಕಾಟ ನಡೆಸಿದೆವು. ಎಲ್ಲೂ ಸೂಕ್ತವಾದ ಜಾಗ ಸಿಗಲಿಲ್ಲ. ಹಾಗಾಗಿ ಮೈಸೂರಿನಲ್ಲಿ ನಿರ್ಮಿಸಬೇಕು ಎಂದುಕೊಂಡಿದ್ದೇವೆ. ಡಿಸೆಂಬರ್ 10ರಂದು ಜಾಗ ಪರಿಶೀಲಿಸಲು ಮೈಸೂರಿಗೆ ಹೋಗುತ್ತಿರುವುದಾಗಿ ಭಾರತಿ ವಿಷ್ಣುವರ್ಧನ್ ತಿಳಿಸಿದ್ದಾರೆ.
ಅಭಿಮಾನ್ ಸ್ಟುಡಿಯೋ ಜಾಗದ ವಿಚಾರದಲ್ಲಿ ದಿವಂಗತ ನಟ ಬಾಲಕೃಷ್ಣ ಕುಟುಂಬಿಕರ ನಡುವೆ ವಿವಾದ ತಲೆದೋರಿದೆ. ಈ ವಿಷಯ ಸರ್ಕಾರಕ್ಕೂ ಮನವರಿಕೆ ಮಾಡಿಕೊಡಲಾಗಿದೆ. ಹಾಗಾಗಿ ವಿಷ್ಣುವರ್ಧನ್ ಸ್ಮಾರಕವನ್ನು ಮೈಗೂರಿನಲ್ಲಿ ನಿರ್ಮಿಸಲು ಸರ್ಕಾರ ಕೂಡ ಒಪ್ಪಿಗೆ ಸೂಚಿಸಿದೆ ಎಂದಿದ್ದಾರೆ.
More from Filmibeat
English summary
Senior actress Bharathi Vishnuvardhn has revealed that husband, Late veteran Kannada actor Dr. Vishnuvardhan's memorial will be constructed in Mysore. The memorial was to be built at Abhiman studio in Bangalore. But the proposed land is facing legal problems. The wife of Dr. Vishnu decided to construct memorial in Mysore after meeting Chief Minister Sadanada Gowda.
ವಿಷ್ಣುವರ್ಧನ್ ಮೈಸೂರು ಭಾರತಿ ಹುಟ್ಟುಹಬ್ಬ ಜಯಮಾಲಾ vishnuvardhan jayamala mysore dwarakish bharati birthday


Click it and Unblock the Notifications











