»   » ಅಘೋರಿಯಲ್ಲ ಸ್ವಾಮಿ ಜೋಗಯ್ಯ, ಶಿವಣ್ಣ

ಅಘೋರಿಯಲ್ಲ ಸ್ವಾಮಿ ಜೋಗಯ್ಯ, ಶಿವಣ್ಣ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಜೋಗಯ್ಯ' ಚಿತ್ರದ ಚಿತ್ರಪಟಗಳನ್ನು ಬಿಡುಗಡೆ ಮಾಡಲಾಗಿದೆ. ಜುಲೈ 12ರಂದು ಶಿವಣ್ಣನ ಹುಟ್ಟುಹಬ್ಬ. ಅಂದೇ 'ಜೋಗಯ್ಯ' ಚಿತ್ರ ಅದ್ದೂರಿಯಾಗಿ ಸೆಟ್ಟೇರಲು ವೇದಿಕೆ ಸಿದ್ಧವಾಗಿದೆ. ರಕ್ಷಿತಾ ಪ್ರೇಮ್ ನಿರ್ಮಾಣದಲ್ಲಿ ಬರಲಿರುವ ಚೊಚ್ಚಲ ಚಿತ್ರವಿದು.

ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್ ನಿರ್ದೇಶನದಲ್ಲಿ ಮೂಡಿಬರಲಿರುವ ಶಿವಣ್ಣನ ನೂರನೇ ಚಿತ್ರ ಎಂಬ ಹೆಗ್ಗಳಿಕೆಗೆ 'ಜೋಗಯ್ಯ' ಪಾತ್ರವಾಗಿದೆ. ಜುಲೈ 12ರಂದು ಸಮಯ ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಕಂಠೀರವ ಸ್ಟುಡಿಯೋದಲ್ಲಿ 'ಜೋಗಯ್ಯ ' ಸೆಟ್ಟೇರಲಿದೆ. 2011ರ ಫೆಬ್ರವರಿಗೆ ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸಲಾಗಿದೆ.

ಜೋಗಯ್ಯ ಚಿತ್ರದ ಮುಹೂರ್ತಕ್ಕೆ ಹಲವಾರು ಖ್ಯಾತ ನಾಮರು ಆಗಮಿಸುವ ನಿರೀಕ್ಷೆಯಿದೆ. ಅಘೋರಿಯ ರೂಪದಲ್ಲಿರುವ 'ಜೋಗಯ್ಯ' ಚಿತ್ರಪಟಗಳು ಗಮನ ಸೆಳೆಯುತ್ತಿವೆ. ಜೋಗಯ್ಯ ಚಿತ್ರದ ನಾಯಕಿ ಯಾರು ಎಂಬುದು ಜುಲೈ 12ರಂದು ಬಹಿರಂಗವಾಗಲಿದೆ. ಚಿತ್ರದ ಮೂರು ಸ್ಟಿಲ್ ಗಳು ಬಿಡುಗಡೆಯಾಗಿವೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada