»   »  ಅಮೃತ ಮಹೋತ್ಸವದ ಸಿನಿಮಾ ಪುಸ್ತಕಗಳು ಬೇಕೆ?

ಅಮೃತ ಮಹೋತ್ಸವದ ಸಿನಿಮಾ ಪುಸ್ತಕಗಳು ಬೇಕೆ?

Subscribe to Filmibeat Kannada
Jayamala
ಅಮೃತ ಮಹೋತ್ಸವ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ 75 ಪುಸ್ತಕಗಳನ್ನು ಪ್ರಕಟಿಸಿತ್ತು. ಕನ್ನಡ ಚಿತ್ರೋದ್ಯಮದಲ್ಲಿ ಆಗಿಹೋದ ಮಹಾನುಭಾವರ ಕುರಿತ ಪುಸ್ತಕಗಳು ಅವು. ಆ ಪುಸ್ತಕಗಳು ಎಲ್ಲೂ ಸಿಗುತ್ತಿಲ್ಲ ಎಂದು ಪುಸ್ತಕ ಪ್ರೇಮಿಗಳು ದೂರಿದ್ದರು. ಈಗ ಆ ಪುಸ್ತಕಗಳು ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಮಾರಾಟಕ್ಕೆ ಇಡಲಾಗಿದೆ. ಪುಸ್ತಕ ಪ್ರೇಮಿಗಳು ಖರೀದಿಸಬಹುದು.

ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪತ್ರಿಕಾ ಪ್ರಕಟಣೆ ನೀಡಿದೆ. ಪ್ರತಿ ಪುಸ್ತಕದ ಮುಖ ಬೆಲೆ ತಲಾ ಮೂವತ್ತು ರೂಪಾಯಿಗಳು. ಎಪ್ಪತ್ತೈದು ಪುಸ್ತಕಗಳನ್ನು ಒಟ್ಟಾಗಿ ಖರೀದಿಸುವವರಿಗೆ ಮುಖಬೆಲೆಯಲ್ಲಿ ರಿಯಾಯಿತಿ ತೋರಿ ರು.2000ಕ್ಕೆ ಕೊಡಲಾಗುತ್ತದೆ ಎಂದು ವಾಣಿಜ್ಯ ಮಂಡಳಿ ತಿಳಿಸಿದೆ. ದಿನಾಂಕ 30.03.2009ರಿಂದ ಪುಸ್ತಕಗಳ ಮಾರಾಟ ಆರಂಭವಾಗಿದೆ. ಸಾರ್ವಜನಿಕರು ಈ ಸೌಲಭ್ಯ ಪಡೆಯಬೇಕು ಎಂದು ಕೋರಲಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಕನ್ನಡ ಸಿನಿಮಾ 75ಕ್ಕೆ 75ಪುಸ್ತಕ: ಜಯಮಾಲಾ
ಸುಂದರ ಪ್ರಕಾಶನದಿಂದ ಕನ್ನಡ ಸಿನಿಮಾ ಪುಸ್ತಕ
ಒಂದು ಅಪರೂಪದ ಸಿನಿಮಾ ಪುಸ್ತಕ ಬಿಡುಗಡೆ
ಹಲೋ ಫಿಲ್ಮ್ ಚೇಂಬರ್,ಪುಸ್ತಕಗಳು ಬೇಕು!
ಅಮೃತ ಪುಸ್ತಕ ಪಟ್ಟಿಯಲ್ಲಿ ಯಾರ್ಯಾರಿಗೆ ಸ್ಥಾನ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada