twitter
    For Quick Alerts
    ALLOW NOTIFICATIONS  
    For Daily Alerts

    ನಾನು ಸೂರಿ ಅಭಿಮಾನಿ : ಪುನೀತ್

    By * ಮಂಡಕ್ಕಿ ರಾಜ
    |

    ನಾನು ಸೂರಿ ಅಭಿಮಾನಿ! ಹಾಗೆಂದದ್ದು ಪುನೀತ್, ಕನ್ನಡ ಚಿತ್ರರಂಗದ ಪವರ್‌ಸ್ಟಾರ್.

    ತಮ್ಮ ಬಣ್ಣನೆ ಕೇಳುತ್ತಿದ್ದಂತೆ ಸೂರಿ ಮುಖ ಕೆಂಪೇರಿತು. ಮೊದಲೆ ನಾಚಿಕೆ ಸ್ವಭಾವದ ಸೂರಿ ಮತ್ತಷ್ಟು ಚಿಪ್ಪಿನಲ್ಲಿ ಮುದುರಿಕೊಂಡರು. ಅದು ಪುನೀತ್ ನಾಯಕತ್ವದಲ್ಲಿ ಸೂರಿ ನಿರ್ದೇಶಿಸುತ್ತಿರುವ 'ಜಾಕಿ' ಚಿತ್ರದ ಮುಹೂರ್ತ. ವಂಶಿ' ನಂತರ ರಾಜ್‌ಕುಮಾರ್ ಕುಟುಂಬದ ಬ್ಯಾನರ್‌ನಿಂದ ನಿರ್ಮಾಣವಾಗುತ್ತಿರುವ ಚಿತ್ರ. ಸಾಮಾನ್ಯವಾಗಿ ರಾಜ್ ಕುಟುಂಬದ ಚಿತ್ರಗಳ ಮುಹೂರ್ತ ಅವರ ಮನೆಯ ಅಂಗಳದಲ್ಲೇ ನಡೆಯುವುದು ರೂಢಿ. ಆದರೆ ಸದಾಶಿವನಗರದಲ್ಲಿನ ಬಂಗಲೆ ಪುನರ್ ನಿರ್ಮಾಣದ ಕಾಮಗಾರಿ ನಡೆಯುತ್ತಿರುವುದರಿಂದ, ಕಾರ್ಯಕ್ರಮ ಕಂಠೀರವ ಸ್ಟುಡಿಯೋಕ್ಕೆ ಶಿಫ್ಟಾಗಿತ್ತು.

    ಪುನೀತ್ ಮಾತು ಮುಂದುವರೆಸಿದರು:

    ದುನಿಯಾ', ಇಂತಿ ನಿನ್ನ ಪ್ರೀತಿಯ' ಚಿತ್ರಗಳನ್ನು ಸಾಮಾನ್ಯ ಪ್ರೇಕ್ಷಕನಂತೆ ನೋಡಿದ್ದೇನೆ. ಆ ಚಿತ್ರಗಳು ಖುಷಿ ನೀಡಿವೆ. 'ಜಾಕಿ' ಚಿತ್ರದ ಚಿತ್ರಕಥೆ ಕೂಡ ಖುಷಿಕೊಟ್ಟಿದೆ. ತಾಂತ್ರಿಕವಾಗಿ ಈ ಚಿತ್ರ ಒಳ್ಳೆಯ ಯತ್ನವಾಗಲಿದೆ ಎಂದರು. ಆದರೆ, ಜಾಕಿಯಲ್ಲಿನ ತಮ್ಮ ಪಾತ್ರದ ಬಗ್ಗೆಯಾಗಲೀ, ಕಥೆಯ ಕುರಿತಾಗಲೀ ಗುಟ್ಟು ಬಿಟ್ಟು ಕೊಡಲು ಅವರು ನಿರಾಕರಿಸಿದರು.

    ಏಳು ತಿಂಗಳ ಹಿಂದೆ ಸೂರಿ ಕಥೆಯ ಎಳೆಯೊಂದನ್ನು ಹೇಳಿದ್ದಾರೆ. ಈ ಕಥೆ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್‌ಗೆ ಇಷ್ಟವಾಗಿದೆ. ಕಳೆದ ಐದು ತಿಂಗಳಿಂದ ಸಾಕಷ್ಟು ಚರ್ಚೆಗೆ ಒಳಪಟ್ಟು ಸಿದ್ಧವಾಗಿರುವ ಚಿತ್ರಕಥೆ ಜಾಕಿ'.

    ಸೂರಿ ಮಾತೂ ಅಲ್ಲಿನ ಜನರಂತೆ ಚೆಲ್ಲಾಪಿಲ್ಲಿಯಾಗಿತ್ತು- ದುನಿಯಾ ಬಂದಾಗ ರಾಜ್‌ಕುಮಾರ್ ಅವರ ಮನೆಗೆ ಕರೆದರು. ಅವರಿಗೆ ಯಾರೋ ಸನ್ಮಾನ ಮಾಡ್ದಿದ ಮೆತ್ತನೆ ಶಾಲನ್ನು ನನಗೆ ಹೊದಿಸಿದರು. ಅದು ನನಗೆ ಸಂದ ದೊಡ್ಡ ಗೌರವ. ನನಗೆ ಮೊದಲಿನಿಂದಲೂ ನಾಯಕನಾಗಿ ಪುನೀತ್ ತುಂಬಾ ಇಷ್ಟ'.

    'ಹೊಡೆದಾಟದ ದೃಶ್ಯಗಳಲ್ಲಿ ಅವರ ತನ್ಮಯತೆ ಅದ್ಭುತ. ನನ್ನ ಶೈಲಿಯ ಚಿಂತನೆಗೆ ಹೊಂದಬಲ್ಲ ನಾಯಕ ಅವರು ಅಂತಲೂ ಅನ್ನಿಸಿತ್ತು. ನಲವತ್ತು ಐವತ್ತು ಜನರನ್ನು ನಾನು ಚರ್ಚೆಗೆ ಕೂರಿಸಿಕೊಂಡೇ ಕಥೆ ಮಾಡುವುದು. ಇದೂ ಹಾಗೆಯೇ ಆಗಿದೆ. ಅವರ ಮನೆಯ್ಲಲಿ ನಡೆಯುವ ಚರ್ಚೆಗಳಿಂದ ಕಮರ್ಷಿಯಲ್ ಆಗಿ ಜನ ಏನನ್ನು ನಿರೀಕ್ಷಿಸಬಹುದು ಎಂಬ ಪಾಠ ಕೂಡ ನನಗೆ ಸಿಕ್ಕಂತಾಯಿತು...'.

    ಮೈಕು ಕೈಗೆ ಬರುವ ಮುನ್ನ ಸೂರಿ ಆಡಿದ ಇಷ್ಟು ಮಾತುಗಳು ಎಷ್ಟೋ ಜನರಿಗೆ ಕೇಳಿಸಲಿಲ್ಲ. ಮೈಕು ಕೈಗೆ ಬಂದ್ದದೇ ಅವರ ಮಾತು ಚಿತ್ರದ ವಿಷಯಕ್ಕೆ ಬಂತು- ಜಾಕಿ ನಾಯಕನ ಹೆಸರು. ಅವನು ಹಳ್ಳಿಯವನೂ ಅಲ್ಲ, ಸಿಟಿಯವನೂ ಅಲ್ಲ. ಪುನೀತ್ ಹಳೆಯ ಚಿತ್ರಗಳ ಯಾವ ಶೇಡ್ ಕೂಡ ಇಲ್ಲಿ ಇರುವುದಿಲ್ಲ'.

    ಬೆಂಗಳೂರು, ಮೈಸೂರು, ಕುಶಾಲನಗರ, ಗುಜರಾತ್‌ನಲ್ಲಿ ಚಿತ್ರೀಕರಣ ಮಾಡುವ ಯೋಜನೆಯನ್ನು ಸೂರಿ ಹಾಕಿಕೊಂಡ್ದಿದಾರೆ. ಚಿತ್ರದಲ್ಲಿ ಮನುಷ್ಯನ ಸಹಜ ಕ್ರೌರ್ಯ ಕಾಣುತ್ತದೆಯೇ ಹೊರತು ಪ್ರಜ್ಞಾಪೂರ್ವಕವಾಗಿ ರೌಡಿಸಂ ತಂದಿಲ್ಲ ಎಂಬುದು ಸೂರಿ ಸ್ಪಷ್ಟನೆ. ಪ್ರೀತಿ, ಹೊಡೆದಾಟ, ಸೆಂಟಿಮೆಂಟ್ ಎಲ್ಲವೂ ಇರುವ ಈ ಚಿತ್ರದ ನಿರೂಪಣೆ ಮೇಲೆ ಅವರಿಗೆ ಹೆಚ್ಚಿನ ವಿಶ್ವಾಸ.

    ಸಂಗೀತ ನಿರ್ದೇಶಕ ಹರಿಕೃಷ್ಣ ಈಗಾಗಲೇ ಮೂರು ಹಾಡುಗಳಿಗೆ ಮಟ್ಟು ಹಾಕ್ದಿದಾರೆ. ಈ ಪೈಕಿ ಎರಡಕ್ಕೆ ಯೋಗರಾಜ್ ಭಟ್ ಸಾಹಿತ್ಯ ಬರೆದ್ದಿದಾರೆ. ಇನ್ನೂ ಮೂರು ಹಾಡುಗಳಿಗೆ ಟ್ಯೂನ್ ಹಾಕುವ ಕೆಲಸ ನಡೆಯುತ್ತಿದೆ ಎಂಬುದಷ್ಟಕ್ಕೆ ಹರಿಕೃಷ್ಣ ಮಾತನ್ನು ಸೀಮಿತಗೊಳಿಸಿದರು. ಹಾಡುಗಳ ಮೂಡ್ ಹೀಗೇ ಇದೆ ಎಂದು ಸ್ಪಷ್ಟವಾಗಿ ಹೇಳಿರುವುದರಿಂದ ಇಲ್ಲಿ ಹೆಚ್ಚಿನ ಕೆಲಸವೇನೂ ಇಲ್ಲ ಎಂದು ಅವರು ಮಾತು ಸೇರಿಸಿದರು.

    ದೃಶ್ಯಗಳನ್ನು ಸೆರೆಹಿಡಿಯಲು ಸಜ್ಜಾಗಿದ್ದ ಛಾಯಾಗ್ರಾಹಕ ಸತ್ಯ ಹೆಗಡೆ ಮೈಕು ಕೈಗೆ ಬಂದರೂ ಮಾತಿಗೆ ಒಲ್ಲೆ ಎಂದರು. ನಾಯಕಿ ಭಾವನಾ ಎದ್ದು ನಿಂತು ಗತ್ತಿನಿಂದಲೇ ಇಂಗ್ಲಿಷ್‌ನಲ್ಲಿ ಸಂಕ್ಷಿಪ್ತವಾಗಿ ಮಾತಾಡಿದರು. ಅದರ ಭಾವಾನುಬಾದ ಹೀಗಿದೆ- ನಾನು ಭಾವನಾ. ಕೇರಳ ನನ್ನ ತವರು. ಮಲಯಾಳಂ, ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿದ್ದೇನೆ. ಕನ್ನಡದಲ್ಲಿ ಇದು ಒಳ್ಳೆಯ ಆರಂಭ. ಪುನೀತ್ ಇಲ್ಲಿ ಸೂಪರ್‌ಸ್ಟಾರ್ ಅಂತ ಕೇಳಿದ್ದೇನೆ. ಚಿತ್ರದಲ್ಲಿ ನನ್ನದು ಲಕ್ಷ್ಮಿ ಹೆಸರಿನ ಪಾತ್ರ. ಬಬ್ಲಿ ಆಗಿ ಕಾಣಿಸಿಕೊಳ್ಳುತ್ತೇನೆ.'

    ಸಲಹೆಗಳನ್ನು ಕೇಳಿ ಸೂರಿ ಸಾಕಷ್ಟು ಯೋಚಿಸಿ ಉತ್ತರ ಹೇಳುತ್ತಿದ್ದ ರೀತಿ, ಆಮೇಲೆ ಸ್ಕ್ರಿಪ್ಟ್‌ನಲ್ಲಿ ಮಾಡಿಕೊಳ್ಳುತ್ತಿದ್ದ ಮಾರ್ಪಾಟುಗಳು, ತಮ್ಮ ಚಿಂತನೆಯನ್ನು ಸಮರ್ಥಿಸಿಕೊಂಡ ಬಗೆ ಎಲವನ್ನೂ ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ಖುಷಿಯಿಂದ ಮೆಲುಕು ಹಾಕಿದರು.

    Wednesday, March 3, 2010, 18:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X