»   » ಬೆಳ್ಳಿತೆರೆಯ 'ರಾವಣ'ನಾಗಿ ಯೋಗೀಶ್

ಬೆಳ್ಳಿತೆರೆಯ 'ರಾವಣ'ನಾಗಿ ಯೋಗೀಶ್

Subscribe to Filmibeat Kannada

ಯೋಗೀಶ್, ಸಂಚಿತಾ ಪಡುಕೋಣೆ ಅಭಿನಯದ 'ರಾವಣ' ಚಿತ್ರ ಈ ವಾರ(ಡಿಸೆಂಬರ್ 4) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಶ್ರೀವೆಂಕಟೇಶ್ವರ ಕೃಪ ಎಂಟರ್ ಪ್ರೈಸಸ್ ಲಾಂಛನದಲ್ಲಿ ಉದಯ್.ಕೆ.ಮೆಹ್ತ ಹಾಗೂ ಮೋಹನ್.ಜಿ.ನಾಯಕ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಯೋಗೀಶ್ ಹುಣಸೂರು ನಿರ್ದೇಶಿಸಿರುವ ಈ ಚಿತ್ರದಲ್ಲಿ 'ದುನಿಯಾ ಖ್ಯಾತಿಯ ಯೋಗೀಶ್ ಗೆ ನೆಗಟೀವ್ ಶೇಡ್ಸ್ ಉಳ್ಳ ಪಾತ್ರ. ಚಿತ್ರದ ನಾಯಕಿ ಸಂಚಿತಾ ಪಡುಕೋಣಿ ಅವರದ್ದು ಧನಾತ್ಮಕ ಅಂಶಗಳುಳ್ಳ ಪಾತ್ರ. ಕರ್ನಾಟಕದ ರಮಣಿಯ ಸ್ಥಳಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಸೀಡಿಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಇದೆ ಅಂತಾರೆ ನಿರ್ಮಾಪಕರು.

ನಿರ್ದೇಶಕರೇ ಚಿತ್ರಕ್ಕೆ ಚಿತ್ರಕತೆ ಬರೆದಿದ್ದಾರೆ. ಆರ್.ಗಿರಿ ಛಾಯಾಗ್ರಹಣ, ದಿನೇಶ್ ಮಂಗಳೂರ್ ಕಲೆ, ರವಿವರ್ಮ ಸಾಹಸ, ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ, ಚಂಪಕಧಾಮ ಬಾಬು ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಯೋಗೀಶ್, ಸಂಚಿತಾ ಪಡುಕೋಣೆ, ಸಂತೋಷ್, ಶ್ರೀನಿವಾಸಮೂರ್ತಿ, ದ್ವಾರಕೀಶ್, ನೀನಾಸಂ ಅಶ್ವತ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada