»   »  'ಧೂಳ್' ಚಿತ್ರಕ್ಕೆ ಬಿರುಸಿನ ಚಿತ್ರೀಕರಣ

'ಧೂಳ್' ಚಿತ್ರಕ್ಕೆ ಬಿರುಸಿನ ಚಿತ್ರೀಕರಣ

Subscribe to Filmibeat Kannada

ತಂಗಿಯನ್ನು ಸರ್ವಸ್ವವೆಂದು ತಿಳಿದ ಅಣ್ಣ. ಪ್ರೇಯಸಿಯೇ ತನಗೆಲ್ಲಾ ಎನ್ನುವ ಪ್ರಿಯಕರ. ಇಬ್ಬರು ಹಠ ಸ್ವಭಾವದವರು ಇಂತಹ ಸಮಾನ ಮನಸ್ಕರ ನಡುವೆ ನಡೆಯುವ ಮಾತುಕತೆ ಈ ರೀತಿಯಿದೆ.
ಶ್ರೀಮಂತ ವ್ಯಕ್ತಿಯೊಬ್ಬನ ಮನೆಗೆ ಏಕಾಏಕಿ ಆಗಮಿಸಿದ ಹದಿಹರೆಯದ ಹುಡುಗ ಸಾಹುಕಾರನ ಸಹಾಯಕನ ಬಳಿ ಬಂದು 'ನಿನ್ನ ಬಾಸ್ ಎಲ್ಲಿ ಎನ್ನುತ್ತಾನೆ'. ಅವರಿಂದ ನಿನ್ನಗೇನಾಗಬೇಕು ಎಂದು ಸಹಾಯಕ ಕೇಳುತ್ತನೆ. ಇವರ ಸಂಭಾಷಣೆಯನ್ನು ಸಿಸಿ ಟಿವಿಯ ಮೂಲಕ ವೀಕ್ಷಿಸುತ್ತಿದ್ದ ಮಾಲೀಕ ಹುಡುಗನನ್ನು ಒಳ ಬಿಡುವಂತೆ ಸಹಾಯಕನಿಗೆ ಹೇಳುತ್ತಾರೆ.

ಒಳ ಪ್ರವೇಶಿಸಿದ ಹುಡುಗನನ್ನು ಕುರಿತ ಸಾಹುಕಾರ ನನ್ನಿಂದೇನಾಗಬೇಕು? ಎಂದಾಗ ನಿಮ್ಮ ತಂಗಿಯನ್ನು ಪ್ರೀತಿಸುತ್ತಿದ್ದೇನೆ. ಅವಳು ನನಗೆ ಬೇಕು ಎಂಬ ಉತ್ತರ ಯುವಕನಿಂದ ಕೇಳಿ ಬರುತ್ತದೆ. ಈ ಮಾತಿನಿಂದ ಸಿಡಿಮಿಡಿಗೊಂಡ ಪ್ರೇಯಸಿಯ ಅಣ್ಣ 'ಇಂದು ನನ್ನ ಹುಟ್ಟುಹಬ್ಬ ನಾನು ಯಾರೊಂದಿಗೂ ಮಾತನಾಡುವುದಿಲ್ಲ. ನಾನು ಕಣ್ಣುಮುಚ್ಚಿ ತೆರೆಯೊಷ್ಟರಲ್ಲಿ ಹೊರಟು ಹೋಗು' ಎನ್ನುತ್ತಾರೆ. ಅವನ ಮಾತನ್ನು ಲೆಕ್ಕಿಸದ ಹುಡುಗ ಅಲ್ಲೇ ಇದ್ದುದ್ದನ್ನು ಕಂಡ ಮನೆಯ ಮಾಲೀಕ ತಂಗಿಯ ಪ್ರಿಯಕರನ ಮೇಲೆ ಗುಂಡು ಹಾರಿಸಲು ಮುಂದಾದಾಗ ಸಹಾಯಕ ಮಧ್ಯ ಪ್ರವೇಶಿಸಿ ಉದ್ವಿಗ್ನ ಸಂದರ್ಭವನ್ನು ಶಾಂತಗೊಳಿಸುವ ಸನ್ನಿವೇಶವನ್ನು 'ಧೂಳ್' ಚಿತ್ರಕ್ಕಾಗಿ ನಿರ್ದೇಶಕ ಧರಣಿ ಚಿತ್ರೀಕರಿಸಿಕೊಂಡರು.

ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ, ನಾಯಕ ಯೋಗೀಶ್ ಹಾಗೂ ನಟ-ನಿರ್ದೇಶಕ ಓಂಪ್ರಕಾಶ್‌ರಾವ್ ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.ಶ್ರೀಸೇವಾಲಾಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ.ಎಚ್.ಸುನೀಲ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ, ಕೆ.ದತ್ತು ಛಾಯಾಗ್ರಹಣ, ಕೆ.ರಾಮ್‌ನಾರಾಯಣ್ ಸಂಭಾಷಣೆ, ಮೋಹನ್ ಪಂಡಿತ್ ಕಲೆ ಹಾಗೂ ರವಿವರ್ಮ ಅವರ ಸಾಹಸವಿದೆ. ಯೋಗೀಶ್, ಅಂದ್ರಿತಾ ರೇ, ಪ್ರಕಾಶ್ ರೈ, ಓಂಪ್ರಕಾಶ್‌ರಾವ್ ಮುಂತಾದವರು 'ಧೂಳ್' ಚಿತ್ರದಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada