»   »  'ಮಳೆಯಲ್ಲಿ ಜೊತೆಯಲ್ಲಿ' ಗಣೇಶ್ ಮತ್ತು ಶಿಲ್ಪಾ!

'ಮಳೆಯಲ್ಲಿ ಜೊತೆಯಲ್ಲಿ' ಗಣೇಶ್ ಮತ್ತು ಶಿಲ್ಪಾ!

Posted By:
Subscribe to Filmibeat Kannada
Ganesh and Shilpa (file photo)
'ಮಳೆಯಲ್ಲಿ ಜೊತೆಯಲ್ಲಿ' ಚಿತ್ರದ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ತನ್ನ ಹಲವು ದಿನಗಳ ಅಜ್ಞಾತವಾಸದಿಂದ ಹೊರಬರಲಿದ್ದಾರೆ. ಮುಂಗಾರುಮಳೆ ಚಿತ್ರಕ್ಕೆ ಕಥೆ ಬರೆದಿದ್ದ ಪ್ರೀತಂ ಗುಬ್ಬಿ ಈ ಚಿತ್ರಕ್ಕೆ ಚಿತ್ರಕಥೆ ಹೆಣೆದಿದ್ದಾರೆ ಮತ್ತು ಅವರೇ ಚಿತ್ರದ ನಿರ್ದೇಶಕ. ವಿಶೇಷವೇನೆಂದರೆ ಇದು ಗಣೇಶ್ ಅವರ ಸ್ವಂತ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಚೊಚ್ಚಲ ಚಿತ್ರ.

ಸುಮಾರು ಎರಡು ವರ್ಷಗಳ ಹಿಂದೆಯೇ ಗಣೇಶ್ ಗೆ ಪ್ರೀತಂ ಚಿತ್ರದ ಕಥೆಯನನ್ನು ಹೇಳಿದ್ದರು. ಆದರೆ ಗಣೇಶ್ ಅವರ ಬಿಡುವಿಲ್ಲದ ಕಾಲಶೀಟ್ ನಿಂದಾಗಿ ಮುಂದಕ್ಕೆ ಹೋಗಿತ್ತು. ಈಗ ಪ್ರೀತಂ ಮತ್ತು ಗಣೇಶ್ ಗೆ ಹಿಟ್ ಚಿತ್ರವೊಂದನ್ನು ನೀಡುವ ಅವಶ್ಯಕತೆಯಿದೆ. ಗಣೇಶ್ ಅಭಿನಯದ ಹಿಂದಿನ ಚಿತ್ರ 'ಸರ್ಕಸ್' ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿದ್ದರೆ, ಪ್ರೀತಂ ನಿರ್ದೇಶನದ 'ಹಾಗೆ ಸುಮ್ಮನೆ' ಚಿತ್ರ ತಕ್ಕ ಮಟ್ಟಿಗೆ ಯಶಸ್ಸು ಕಂಡಿತ್ತು.

'ಮಳೆಯಲ್ಲಿ ಜೊತೆಯಲ್ಲಿ' ಚಿತ್ರಕ್ಕೆ ಸದ್ಯಕ್ಕೆ ಸ್ಯಾಂಡಲ್ ವುಡ್ ನ ಯಶಸ್ವಿ ಸಂಗೀತ ನಿರ್ದೇಶಕ ಹರಿಕೃಷ್ಣ ಸಂಗೀತ ಸಂಯೋಜಿಸಲಿದ್ದಾರೆ. ಎಸ್ ಕೃಷ್ಣ ಚಿತ್ರಕ್ಕೆ ಕ್ಯಾಮರಾ ಹಿಡಿಯಲಿದ್ದಾರೆ. ಚಿತ್ರದ ನಾಯಕಿಯ ಆಯ್ಕೆ ಇನ್ನೂ ಆಗಬೇಕಿದೆ. ಚಿತ್ರತಂಡದ ಪ್ರಕಾರ ಬಾಲಿವುಡ್ ಅಥವಾ ದಕ್ಷಿಣದ ಹೆಸರಾಂತ ನಟಿಯೊಬ್ಬರನ್ನು ಚಿತ್ರಕ್ಕೆ ಪರಿಚಯಿಸುವ ಸಂಭವವಿದೆ.

ಏತನ್ಮಧ್ಯೆ ಗಣೇಶ್ ಇನ್ನೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಚಿತ್ರ ಕಳೆದ ವರ್ಷದ ಯಶಸ್ವಿ ಚಿತ್ರ 'ಬಿಂದಾಸ್' ನಿರ್ಮಿಸಿದ್ದ ನಿಮಿಷಾಂಬ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಬರಲಿದೆ. ನಿರ್ಮಾಪಕ ಚಂದ್ರಶೇಖರ್ ಈ ಚಿತ್ರಕ್ಕೆ ಹೆಸರಾಂತ ತೆಲುಗು ನಟಿ ಇಲಿಯಾನಾ ಅವರನ್ನು ಪರಿಚಯಿಸುವ ಚಿಂತನೆ ನಡೆಸಿದ್ದಾರೆ. ಗಣೇಶ್ ಮತ್ತು ಯಾಮಿನಿ ಗೌತಂ ಮುಖ್ಯ ಭೂಮಿಕೆಯ "ಉಲ್ಲಾಸ ಉತ್ಸಾಹ" ಚಿತ್ರ ಸದ್ಯದಲ್ಲೇ ತೆರೆಕಾಣಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada