»   » ಮೈಸೂರಿನಲ್ಲಿ ಚಿತ್ರ ನಿರ್ಮಾಪಕರ ವಿರುದ್ಧ ದಂಗೆ!

ಮೈಸೂರಿನಲ್ಲಿ ಚಿತ್ರ ನಿರ್ಮಾಪಕರ ವಿರುದ್ಧ ದಂಗೆ!

Subscribe to Filmibeat Kannada

ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಹೇಳಿಕೆಯನ್ನು ಖಂಡಿಸಿ ಮೈಸೂರು ವಿವಿ ಚಲನಚಿತ್ರ ಅಧ್ಯಯನ ವಿಭಾಗದ ಚಲನಚಿತ್ರನಿರ್ದೇಶಕ ತರಬೇತಿ ವಿದ್ಯಾರ್ಥಿಗಳು ಮೈಸೂರು ವಿವಿ ಗ್ರಂಥಾಲಯ ಎದುರು ಪ್ರತಿಭಟನೆ ನಡೆಸಿದರು.

ನಿರ್ಮಾಪಕರ ಸಂಘವು ನಿರ್ಣಯ ಮಾಡಿದಂತೆ 45ದಿನದಲ್ಲಿ ಚಲನಚಿತ್ರ ನಿರ್ಮಿಸಲು ಸಾಧ್ಯವಿಲ್ಲ . ಪ್ರತಿಯೊಂದು ಚಿತ್ರವು ನಿರ್ದೇಶನಕನ ಕಲ್ಪನೆ, ಚಿತ್ರ ಕಥೆಯ ಮೇಲೆ ಆಧಾರಿತವಾಗಿದ್ದು ಇದನ್ನು ಕಡಿಮೆ ರೀಲುಗಳಲ್ಲಿ ತೆಗೆಯಲು ಸಾಧ್ಯವಿಲ್ಲ. ಕೆಲವು ಚಿತ್ರಗಳಿಗೆ ಹೆಚ್ಚು ರೀಲು ಬೇಕಾಗುತ್ತದೆ. ಕನಿಷ್ಠ ಐದು ಚಿತ್ರಗಳಿಗೆ ಸಹ ನಿರ್ದೇಶಕನಾದ ಮೇಲೆ ಕೆಲವರಿಗೆ ಮಾತ್ರ ಸ್ವತಂತ್ರ ನಿರ್ದೇಶಕರಾಗಿ ರೂಪು ಗೊಳ್ಳಲು ಸಾಧ್ಯ . ಮತ್ತೆ ಕೆಲವರು ಹೊಸ ಚಿತ್ರ ನಿರ್ದೇಶನ ಮಾಡಿ ಗೆದ್ದಿದ್ದಾರೆ.

ನಿರ್ದೇಶಕರಿಗೆ ಮಾನದಂಡ ವಿಧಿಸಬಾರದು.ನಿರ್ದೇಶಕರಿಗೆ ಸ್ವತಂತ್ರ, ಸ್ವಾಯತ್ತತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಪ್ರಜಾಪ್ರಭುತ್ವದ ನೀತಿ ಪ್ರಕಾರ ಯಾರು ಬೇಕಾದರೂ ಚಿತ್ರ ನಿರ್ಮಿಸಬಹುದು. ಇದಕ್ಕಾಗಿ ಸಂಘದಲ್ಲಿ ಸದಸ್ಯರಾಗಬೇಕು ಎಂದು ನಿರ್ಮಾಪಕರ ಸಂಘವು ತೀರ್ಮಾನಿಸಿರುವುದನ್ನು ವಿದ್ಯಾರ್ಥಿಗಳು ತೀವ್ರವಾಗಿ ಖಂಡಿಸಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada