»   »  ಕೊಡಗಿನಲ್ಲಿ ಮೈಮರೆತ ಶರ್ಮಿಳಾ ಮಾಂಡ್ರೆ!

ಕೊಡಗಿನಲ್ಲಿ ಮೈಮರೆತ ಶರ್ಮಿಳಾ ಮಾಂಡ್ರೆ!

Subscribe to Filmibeat Kannada
ಶರ್ಮಿಳಾ ಮಾಂಡ್ರೆ ಅಭಿನಯದ ವೆಂಕಟ ಇನ್ ಸಂಕಟ ಚಿತ್ರ ಶತಕ ಬಾರಿಸಿ 125ನೇ ದಿನದತ್ತ ಮುನ್ನಡೆದಿದೆ. ಸದ್ಯಕ್ಕೆ ಗೆಲುವಿನ ಕುದುರೆ ಏರಿರುವ ಶರ್ಮಿಳಾ ಒಂಚೂರು ರಿಲ್ಯಾಕ್ಸ್ ಆಗಲು ಬ್ರೇಕ್ ತೆಗೆದುಕೊಂಡಿದ್ದಾರೆ. ಕುಟುಂಬದವರೊಂದಿಗೆ ಕೊಡಗಿನಲ್ಲಿ ರಜಾ ದಿನಗಳಲ್ಲಿ ಮೈಮರೆತಿದ್ದಾರೆ.

ಚಿತ್ರೀಕರಣದಲ್ಲಿ ಬಿಜಿಯಾಗಿರುವ ಕಾರಣ ಶರ್ಮಿಳಾ ಮ್ಯಾನೇಜ್ ಮೆಂಟ್ ಪರೀಕ್ಷೆಯನ್ನು ಬರೆದಿಲ್ಲವಂತೆ. ಅದರ ಬದಲು ಒಂದಷ್ಟು ವಾಣಿಜ್ಯ ಜಾಹೀರಾತುಗಳಲ್ಲಿ ನಟಿಸಲು ಒಪ್ಪಿದ್ದಾರೆ. ಆಕೆ ನಟಿಸಿದ 'ಶಿವಮಣಿ' ಚಿತ್ರ ಹೇಳ ಹೆಸರಿಲ್ಲದಂತಾಯಿತು. ಚಿತ್ರ ಸೋತಿದ್ದಕ್ಕೆ ಶರ್ಮಿಳಾಗೆ ಏನೂ ಬೇಸರವಿಲ್ಲವಂತೆ.

ಚಿತ್ರಗಳ ಸಂಖ್ಯೆಗಿಂತಲೂ ಗುಣಮಟ್ಟ ಮುಖ್ಯ. ಹಾಗಾಗಿ ತಾವು ಉತ್ತಮ ಅನ್ನಿಸಿದ ಚಿತ್ರಗಳಿಗಷ್ಟೇ ಸಹಿ ಹಾಕುತ್ತಿದ್ದೇನೆ ಎನ್ನುತ್ತಾರೆ ಶರ್ಮಿಳಾ. ಗಣೇಶ್ ರೊಂದಿಗಿನ ಚಿತ್ರ ಸೇರಿದಂತೆ ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿರುವ ಶರ್ಮಿಳಾ ಬಹು ತಾರಾಗಣದ ಚಿತ್ರದಲ್ಲಿ ನಟಿಸಲು ತಮ್ಮದೇನು ಅಭ್ಯಂತರ ಇಲ್ಲ ಎನ್ನುತ್ತಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada